ಬೇಲೂರು : ಡಾ. Puneeth Rajkumar ಅವರ 51ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಹಗರೆಯ ಋಗ್ವೇದ ರೆಸಾರ್ಟ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ Ashwini Puneeth Rajkumar ಅಮೃತಹಸ್ತದಿಂದ ಗ್ರಂಥಾಲಯ ಉದ್ಘಾಟನೆ ನೆರವೇರಿತು. ಇದೇ ವೇಳೆ ಸುಮಾರು 30 ವರ್ಷಗಳಿಂದ ವಾಸಿಸುತ್ತಿರುವ 15 ಬಡ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ H. K. Suresh ಮಾತನಾಡಿ, ಹಲವು ವರ್ಷಗಳಿಂದ ವಾಸಿಸುತ್ತಿದ್ದ ಬಡ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ದೊರಕಬೇಕು ಎನ್ನುವುದು ಎಲ್ಲರ ಆಶಯವಾಗಿತ್ತು. ಆ ಉದ್ದೇಶದಿಂದಲೇ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ ಎಂದು ಹೇಳಿದರು.
ಡಾ. Puneeth Rajkumar ಅವರ ಸೇವಾ ಮನೋಭಾವವನ್ನು ಸ್ಮರಿಸಿದ ಅವರು, ಅಪ್ಪು ಮಾಡಿದ ದಾನ-ಧರ್ಮಗಳು ಇಂದಿಗೂ ಅಜರಾಮರವಾಗಿವೆ ಎಂದರು. ಅವರ ನಿಧನದ ದಿನವೇ ನಡೆಯಬೇಕಿದ್ದ ₹127 ಕೋಟಿ ರಣಘಟ್ಟ ಯೋಜನೆಯ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಅವರ ಅಗಲಿಕೆ ಇಡೀ ಕ್ಷೇತ್ರವನ್ನು ದುಃಖದಲ್ಲಿ ಮುಳುಗಿಸಿತ್ತು ಎಂದು ನೆನಪಿಸಿದರು.
Ashwini Puneeth Rajkumar ಅವರ ಸರಳತೆಯನ್ನು ಕೊಂಡಾಡಿದ ಶಾಸಕ ಸುರೇಶ್, “ಕಾರ್ಯಕ್ರಮಕ್ಕೆ ಆಹ್ವಾನಿಸಲು ಹೋದಾಗ ಸಮಾಜಕ್ಕೆ ಏನಾದರೂ ಸೇವೆ ಬೇಕೇ ಎಂದು ಕೇಳಿದರು. ಇಂದಿನ ಕಾಲದಲ್ಲಿ ಹಲವರು ಬೇಡಿಕೆ ಇಡುವಾಗ, ಇವರು ಸೇವೆ ಮಾಡುವ ಅವಕಾಶವನ್ನೇ ಕೇಳಿದರು” ಎಂದು ಹೇಳಿದರು.
ಋಗ್ವೇದ ರೆಸಾರ್ಟ್ ಕೇವಲ ಪ್ರವಾಸಿ ತಾಣವಲ್ಲ, ಗ್ರಂಥಾಲಯ ಹಾಗೂ ಆರೋಗ್ಯ ಸೇವೆಗಳನ್ನೊಳಗೊಂಡ ಸಾಮಾಜಿಕ ಸೇವಾ ಕೇಂದ್ರವಾಗಲಿದೆ ಎಂದು ತಿಳಿಸಿದರು. ರೆಸಾರ್ಟ್ ಮಾಲೀಕರಾದ ಡಿಶಾಂತ್ ಕುಮಾರ್ ಹಾಗೂ ಅವರ ಕುಟುಂಬದ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಬಿ. ಶಿವರಾಜು ಮಾತನಾಡಿ, Ashwini Puneeth Rajkumar ಅವರು ಸರಳತೆ, ವಿನಯ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಪಿಆರ್ಕೆ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಜವಾಬ್ದಾರಿಯಿಂದ ಮುನ್ನಡೆಸುತ್ತಿರುವ ಅವರು, ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿದ್ದಾರೆ. ಉತ್ತಮ ಗುಣಮಟ್ಟದ ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಅಪ್ಪು ಬದುಕಿದ್ದಾಗ ಮಾಡುತ್ತಿದ್ದ ಸೇವಾ ಕಾರ್ಯಗಳು ಇಂದಿಗೂ ನಿರಂತರವಾಗಿ ನಡೆಯುತ್ತಿವೆ. ಆ ಸೇವೆ ಮುಂದುವರಿಯಲು ಅಶ್ವಿನಿ ಅವರ ದೃಢಸಂಕಲ್ಪವೇ ಕಾರಣ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಾಹಿತಿ ಚಟ್ನಳ್ಳಿ ಮಹೇಶ್, ಹಗರೆ ಡಿಶಾಂತ್, ಬ್ಯಾಂಕ್ ವ್ಯವಸ್ಥಾಪಕಿ ಮಮತಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
