ಬೆಂಗಳೂರು, ಆಗಸ್ಟ್ 22: ಬೆಂಗಳೂರಿನ ಪ್ರಮುಖ ವಸತಿ ರಿಯಲ್ ಎಸ್ಟೇಟ್ ಡೆವಲಪರ್ಗಳಲ್ಲಿ ಒಂದಾದ ಅಸೆಟ್ಜ್ ಸಂಸ್ಥೆಯ ನೂತನ ಪ್ರಾಪರ್ಟಿ ಅನುಭವ ಮೇಳ ‘ಅಸೆಟ್ಜ್ ಅನ್ಲಾಕ್ 2026’ ನಗರದಲ್ಲಿ ಆರಂಭಗೊಂಡಿದೆ.
ಎರಡು ದಿನಗಳ ಕಾಲ ನಡೆಯಲಿರುವ ಈ ಬೃಹತ್ ಪ್ರಾಪರ್ಟಿ ಎಕ್ಸ್ಪೋ ಆಗಸ್ಟ್ 22 ಮತ್ತು 23ರಂದು ಎಚ್ಎಸ್ಆರ್ ಲೇಔಟ್ ಸಮೀಪದ ಅಸೆಟ್ಜ್ ಮಿಜುಮಿ ರಿಸರ್ವ್ ಆವರಣದಲ್ಲಿ ನಡೆಯುತ್ತಿದ್ದು, ಅಸೆಟ್ಜ್ ಸಮೂಹದ ಏಳು ಪ್ರಮುಖ ವಸತಿ ಯೋಜನೆಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸಲಾಗುತ್ತಿದೆ. ಇದರಿಂದ ಮನೆ ಖರೀದಿದಾರರು ವಿವಿಧ ಯೋಜನೆಗಳನ್ನು ಒಂದೇ ಸ್ಥಳದಲ್ಲಿ ನೇರವಾಗಿ ವೀಕ್ಷಿಸಿ, ಹೋಲಿಕೆ ಮಾಡಿಕೊಂಡು ತಮ್ಮ ಅಗತ್ಯಕ್ಕೆ ತಕ್ಕ ವಸತಿ ಆಯ್ಕೆಯನ್ನು ಮಾಡಿಕೊಳ್ಳಲು ಅನುಕೂಲವಾಗಿದೆ.
ಮೇಳದಲ್ಲಿ ಆಗ್ನೇಯ ಬೆಂಗಳೂರಿನ ಪ್ರಮುಖ ವಸತಿ ಕಾರಿಡಾರ್ಗಳಾದ ಎಚ್ಎಸ್ಆರ್ ಲೇಔಟ್ ಸಮೀಪ, ಹೊಸ ರಸ್ತೆ, ಸರ್ಜಾಪುರ ರಸ್ತೆ ಹಾಗೂ ಸರ್ಜಾಪುರ–ಅತ್ತಿಬೆಲೆ ರಸ್ತೆಯಲ್ಲಿರುವ ವಿವಿಧ ವಸತಿ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ. ಐಷಾರಾಮಿ 3 ಮತ್ತು 4 ಬಿಎಚ್ಕೆ ಅಪಾರ್ಟ್ಮೆಂಟ್ಗಳು, ಲಕ್ಸುರಿ ನಿವೇಶನಗಳು ಹಾಗೂ ಪ್ರೀಮಿಯಂ ಗಾಲ್ಫ್-ವಿಲ್ಲಾ ಪ್ಲಾಟ್ಗಳು ಈ ಪೋರ್ಟ್ಫೋಲಿಯೊದಲ್ಲಿವೆ.
ಮಿಜುಮಿ ರಿಸರ್ವ್, ಮೆಲೊಡೀಸ್ ಆಫ್ ಲೈಫ್ ಅಪಾರ್ಟ್ಮೆಂಟ್ಸ್, ರೆನ್ & ರೇಯ್, ಮ್ಯೂಸ್ & ಮೈಸನ್, ಟ್ರೀಸ್ & ಟ್ಯಾಂಡಮ್, ಮೆಲೊಡೀಸ್ ಆಫ್ ಲೈಫ್ ಪ್ಲಾಟೆಡ್ ಡೆವಲಪ್ಮೆಂಟ್ ಮತ್ತು 18 & ಓಕ್ ಲಕ್ಸುರಿ ಗಾಲ್ಫ್ ವಿಲ್ಲಾ ಪ್ಲಾಟ್ಗಳು ಮೇಳದಲ್ಲಿ ಪ್ರದರ್ಶನಗೊಳ್ಳುತ್ತಿವೆ.
ಮೇಳಕ್ಕೆ ಭೇಟಿ ನೀಡುವ ಗ್ರಾಹಕರಿಗೆ ವಿಶೇಷ ಪ್ರದರ್ಶನ ದರಗಳು, ಮೊದಲ ಆದ್ಯತೆಯ ಮನೆ ಆಯ್ಕೆ, ಸೀಮಿತ ಅವಧಿಯ ವಿಶೇಷ ಸೌಲಭ್ಯಗಳು ಸೇರಿದಂತೆ ಗರಿಷ್ಠ ₹35 ಲಕ್ಷದವರೆಗೆ ನೇರ ಉಳಿತಾಯ ಮಾಡುವ ಅವಕಾಶವನ್ನು ಸಂಸ್ಥೆ ಒದಗಿಸಿದೆ. ಇದಲ್ಲದೆ, ಪ್ರಮುಖ ಬ್ಯಾಂಕಿಂಗ್ ಪಾಲುದಾರರಿಂದ ತ್ವರಿತ ಗೃಹ ಸಾಲ ಸೌಲಭ್ಯಗಳು ಹಾಗೂ ಹೊಂದಿಕೊಳ್ಳುವ ಪಾವತಿ ಯೋಜನೆಗಳನ್ನೂ ಕಲ್ಪಿಸಲಾಗಿದೆ.
ಗ್ರಾಹಕರಿಗೆ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಲು ಅಸೆಟ್ಜ್ನ ಪ್ರಾಪರ್ಟಿ ತಜ್ಞರು ಎರಡು ದಿನಗಳ ಕಾಲ ಸ್ಥಳದಲ್ಲೇ ಲಭ್ಯವಿದ್ದು, ಮನೆ ಖರೀದಿದಾರರ ಬಜೆಟ್ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಸೂಕ್ತ ಯೋಜನೆ ಆಯ್ಕೆ ಮಾಡಲು ಮಾರ್ಗದರ್ಶನ ನೀಡಲಿದ್ದಾರೆ.
ಈ ಕುರಿತು ಮಾತನಾಡಿದ ಅಸೆಟ್ಜ್ ಸಂಸ್ಥೆಯ ಸೇಲ್ಸ್ ಮತ್ತು ಸಿಆರ್ಎಂ ವಿಭಾಗದ ನಿರ್ದೇಶಕ ರೋಹಿತ್ ಕಾರಿಯಪ್ಪ, “ಇಂದಿನ ಮನೆ ಖರೀದಿದಾರರು ಕೇವಲ ನಾಲ್ಕು ಗೋಡೆಗಳ ಮನೆಯನ್ನಷ್ಟೇ ಪರಿಗಣಿಸುವುದಿಲ್ಲ. ಉತ್ತಮ ಸ್ಥಳ, ಆಧುನಿಕ ವಿನ್ಯಾಸ, ವಿಶಾಲ ಸ್ಥಳಾವಕಾಶ, ಉತ್ತಮ ಸಮುದಾಯ, ಆರ್ಥಿಕ ಸಾಲ ಸೌಲಭ್ಯ, ಡೆವಲಪರ್ ಮೇಲಿನ ವಿಶ್ವಾಸಾರ್ಹತೆ ಮತ್ತು ದೀರ್ಘಾವಧಿಯ ಹೂಡಿಕೆ ಮೌಲ್ಯ ಸೇರಿದಂತೆ ಹಲವು ಅಂಶಗಳು ಅವರ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ,” ಎಂದರು.
“ಪ್ರತ್ಯೇಕ ಸ್ಥಳಗಳಿಗೆ ತೆರಳಿ ಈ ಎಲ್ಲ ಅಂಶಗಳನ್ನು ಹೋಲಿಕೆ ಮಾಡುವುದು ಗ್ರಾಹಕರಿಗೆ ಕಷ್ಟಕರವಾಗಬಹುದು. ಅಸೆಟ್ಜ್ ಅನ್ಲಾಕ್ ಮೂಲಕ ಈ ಎಲ್ಲ ಆಯ್ಕೆಗಳನ್ನು ಒಂದೇ ವೇದಿಕೆಗೆ ತರುತ್ತಿದ್ದೇವೆ. ಇದರಿಂದ ಗ್ರಾಹಕರು ನಮ್ಮ ವಿವಿಧ ಯೋಜನೆಗಳನ್ನು ಸ್ಪಷ್ಟವಾಗಿ ಮೌಲ್ಯಮಾಪನ ಮಾಡಿ, ತಮ್ಮ ಕನಸಿನ ಮನೆ ಆಯ್ಕೆಯ ಪ್ರಕ್ರಿಯೆಯನ್ನು ಇನ್ನಷ್ಟು ಸರಳ ಮತ್ತು ಮಾಹಿತಿಪೂರ್ಣವಾಗಿಸಿಕೊಳ್ಳಬಹುದು,” ಎಂದು ಅವರು ತಿಳಿಸಿದರು.
ಅಸೆಟ್ಜ್ ಅನ್ಲಾಕ್ 2026 ಅಸೆಟ್ಜ್ ಸಂಸ್ಥೆಯ ಮೊದಲ ಆವೃತ್ತಿಯಾಗಿದ್ದು, ಮೇಳದಲ್ಲಿ ಪ್ರದರ್ಶಿಸಲಾಗುತ್ತಿರುವ ಎಲ್ಲಾ ಯೋಜನೆಗಳು ರೇರಾ ಅನುಮೋದಿತವಾಗಿವೆ ಎಂದು ಸಂಸ್ಥೆ ತಿಳಿಸಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ವಿವಿಧ ಪ್ರಮುಖ ಪ್ರದೇಶಗಳಲ್ಲಿಯೂ ಇಂತಹ ಪ್ರಾಪರ್ಟಿ ಮೇಳಗಳನ್ನು ಆಯೋಜಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ಅಸೆಟ್ಜ್ ಸಂಸ್ಥೆಯ ಪರಿಚಯ
ಅಸೆಟ್ಜ್ ಬೆಂಗಳೂರಿನ ಪ್ರಮುಖ ವಸತಿ ಡೆವಲಪರ್ಗಳಲ್ಲಿ ಒಂದಾಗಿದ್ದು, ವಿನ್ಯಾಸಾಧಾರಿತ ಕಾರ್ಯವೈಖರಿ, ಪಾರದರ್ಶಕ ಆಡಳಿತ ಹಾಗೂ ಪರಿಸರ ಸ್ನೇಹಿ ಸುಸ್ಥಿರತೆಗೆ ಹೆಸರುವಾಸಿಯಾಗಿದೆ. ‘ಕ್ವಯಟ್ ಲಕ್ಸುರಿ’ ತತ್ತ್ವದಡಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ದೈನಂದಿನ ಜೀವನದ ಗುಣಮಟ್ಟ ಮತ್ತು ಸೌಕರ್ಯಗಳನ್ನು ಹೆಚ್ಚಿಸುವ ಸಮುದಾಯಗಳನ್ನು ನಿರ್ಮಿಸುತ್ತಿದೆ.
ಜಾಣ್ಮೆಯ ಒಳಾಂಗಣ ವಿನ್ಯಾಸ, ನೈಸರ್ಗಿಕ ಪರಿಸರ ಹಾಗೂ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಮಾಸ್ಟರ್ಪ್ಲಾನ್ಗಳ ಮೂಲಕ ಸಂಸ್ಥೆ ತನ್ನದೇ ಆದ ಛಾಪು ಮೂಡಿಸಿದೆ. ಈವರೆಗೆ 65ಕ್ಕೂ ಅಧಿಕ ಯೋಜನೆಗಳು, 4.5 ಕೋಟಿಗೂ ಹೆಚ್ಚು ಚದರ ಅಡಿ ವಿಸ್ತೀರ್ಣ ಹಾಗೂ 22,000ಕ್ಕೂ ಅಧಿಕ ವಸತಿ ಯುನಿಟ್ಗಳನ್ನು ಯಶಸ್ವಿಯಾಗಿ ನಿರ್ಮಿಸಿರುವುದಾಗಿ ಅಸೆಟ್ಜ್ ತಿಳಿಸಿದೆ.
ಮಾಧ್ಯಮ ಸಂಪರ್ಕ
ಶ್ರೇಯಾ ಶಿವಶಂಕರ್ ಸೀನಿಯರ್ಎ ಕ್ಸಿಕ್ಯೂಟಿವ್ – ಪಿಆರ್ & ಕಾರ್ಪೊರೇಟ್ ಕಮ್ಯುನಿಕೇಷನ್ಸ್, ಅಸೆಟ್ಜ್
ಇಮೇಲ್: shreya.s@assetzproperty.com
ದೂರವಾಣಿ: +91 8105820930
