ಬೆಂಗಳೂರು, ಡಿಸೆಂಬರ್ 12: ಜಾಗತಿಕ ಮಟ್ಟದ ತಾರೆಯರ ಸಾನ್ನಿಧ್ಯದಲ್ಲಿ ತನ್ನ ಮೊದಲ ಭಾರತ ಸೀಸನ್ನ್ನು ಆಚರಿಸಲು ವರ್ಲ್ಡ್ ಟೆನಿಸ್ ಲೀಗ್ (WTL) ಬೆಂಗಳೂರಿನಲ್ಲಿ ವಿಶೇಷವಾಗಿ ಸಜ್ಜಾಗಿದೆ. ಈ ಬಾರಿ ಲೀಗ್ಗೆ ದಿಗ್ಗಜ ಬ್ರ್ಯಾಂಡ್ಗಳಿಂದ ದೊರೆತಿರುವ ಬೆಂಬಲ ಕ್ರೀಡಾಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಟೂರ್ನಮೆಂಟ್ಗೆ ಐಕಾನಿಕ್ ಸ್ಪೋರ್ಟ್ಸ್ & ಇವೆಂಟ್ಸ್ ಲಿಮಿಟೆಡ್ ಟೈಟಲ್ ಪಾಲುದಾರರಾಗಿ ಕೈಜೋಡಿಸಿದ್ದು, ಸ್ಪೈಸ್ಜೆಟ್ ಪವರ್ಡ್-ಬೈ ಪಾಲುದಾರರಾಗಿ ಬೆಂಬಲ ನೀಡಿದೆ.
ಟೂರ್ನಿ ನಿರ್ವಹಣೆಗೂ, ಆಟಗಾರರ ಅನುಭವಕ್ಕೂ ಇನ್ನೂ ಹಲವು ಪ್ರಮುಖ ಬ್ರ್ಯಾಂಡ್ಗಳು ಕೈಜೋಡಿಸಿವೆ:
- EaseMyTrip – ಪ್ರಯಾಣ ಪಾಲುದಾರ
- ಬಿಸ್ಲೆರಿ – ಹೈಡ್ರೇಶನ್ ಪಾಲುದಾರ
- ಕೋರಂ ಇಂಡಿಯಾ – ಅಧಿಕೃತ ಸಮಯಪಾಲಕ
- ಡನ್ಲಾಪ್ – ಬಾಲ್ ಪಾಲುದಾರ
- ಅಪೂರ್ವ ಹೆಲ್ತ್ಕೇರ್ – ವೈದ್ಯಕೀಯ ಪಾಲುದಾರ
- ACT ಫೈಬರ್ನೆಟ್ – ಸಂಪರ್ಕ ಪಾಲುದಾರ
- RED FM – ರೇಡಿಯೋ ಪಾಲುದಾರ
- ಬುಕ್ಮೈಶೋ – ಟಿಕೆಟ್ ನಿರ್ವಹಣೆ
- XRT ಆಕ್ಟಿವ್ – ಬಾಲ್ ಕಿಡ್ಸ್ ಮತ್ತು ಅಂಪೈರ್ಗಳ ಅಧಿಕೃತ ವೇಷಭೂಷಣ
- ಡಾ. ಉಮೇದ್ ಕಾಸ್ಮೆಟಿಕ್ಸ್ – ಅಸ್ಥೆಟಿಕ್ಸ್ ಪಾಲುದಾರ
- EnchantXP – ಕಾರ್ಯಕ್ರಮ ಅನುಭವ ಪಾಲುದಾರ
WTL ಸಹ-ಸ್ಥಾಪಕಿ ಹೇಮಾಲಿ ಶರ್ಮ ಮಾತನಾಡಿ, “ಪ್ರತಿ ಸೀಸನ್ಗೂ ನಾವು ಹೊಸ ಸಂಭ್ರಮ ಮತ್ತು ಅನುಭವವನ್ನು ಪರಿಚಯಿಸುವ ಗುರಿ ಹೊಂದಿದ್ದೇವೆ. ಈ ಬಾರಿ ಸೇರಿರುವ ಪಾಲುದಾರರು ಲೀಗ್ಗೆ ಇನ್ನಷ್ಟು ಬಲ ಮತ್ತು ಮಹತ್ವ ನೀಡಿದ್ದಾರೆ,” ಎಂದರು.
ಇದನ್ನು ಓದು: ಇಂಡಿಗೋ ಇಂದು 2,000ಕ್ಕಿಂತ ಹೆಚ್ಚು ವಿಮಾನಗಳನ್ನು ಸಂಚರಿಸಲಿದೆ ನಿರಂತರ ಪ್ರಗತಿ-ಕಾರ್ಯಾಚರಣೆ ಸಾಮಾನ್ಯ ಸ್ಥಿತಿಗೆ
ಜಾಗತಿಕ ಟೆನಿಸ್ ಪ್ರತಿಭೆಯನ್ನು ಒಟ್ಟುಗೂಡಿಸುವ ಈ ಮಹೋತ್ಸವವು ಈ ತಿಂಗಳು ಬೆಂಗಳೂರು ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಕ್ರೀಡಾಭಿಮಾನಿಗಳ ಕಣ್ಣುಗುಡಿಯಾಗಲಿದೆ.

[…] ಇದನ್ನು ಓದಿ: ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್ ಮೊ… […]