ಬೆಂಗಳೂರು, ನ. 6, 2026: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಮತ್ತು ಖಾಸಗಿ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಸಂಸ್ಥೆ ಇನ್ ಮೋಬಿ ನಡುವೆ ಇನ್ ಮೋಬಿ ಇಬ್ಬಲೂರು ಮೆಟ್ರೋ ನಿಲ್ದಾಣಕ್ಕಾಗಿ ಐತಿಹಾಸಿಕ ದೀರ್ಘಾವಧಿಯ ಸಹಭಾಗಿತ್ವ ಏರ್ಪಟ್ಟಿದೆ. ಒಪ್ಪಂದದ ಪ್ರಕಾರ, ಇನ್ ಮೋಬಿ ಸಂಸ್ಥೆಯು ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣದ ಹಕ್ಕನ್ನು ಮುಂದಿನ 30 ವರ್ಷಗಳ ಅವಧಿಗೆ ತನ್ನದಾಗಿಸಿಕೊಂಡಿದೆ. ಜಿಎಸ್ಟಿ ಹೊರತುಪಡಿಸಿ ಈ ಯೋಜನೆಯ ಒಟ್ಟು ಗುತ್ತಿಗೆ ಬದ್ಧತೆಯ ಮೊತ್ತ ₹65 ಕೋಟಿ ರೂಪಾಯಿಗಳಾಗಿವೆ. ಇನ್ನು ಮುಂದೆ ಈ ನಿಲ್ದಾಣವು ಅಧಿಕೃತವಾಗಿ ಇನ್ ಮೋಬಿ ಇಬ್ಬಲೂರು ಮೆಟ್ರೋ ನಿಲ್ದಾಣ ಎಂದೇ ಗುರುತಿಸಿಕೊಳ್ಳಲಿದೆ.
ಸಾರ್ವಜನಿಕ ಮೂಲಸೌಕರ್ಯ ಮತ್ತು ಖಾಸಗಿ ಉದ್ಯಮವನ್ನು ಒಗ್ಗೂಡಿಸುವ ಮೂಲಕ, ಹೆಚ್ಚು ಸಂಪರ್ಕಿತ, ಸುಲಭ ಪ್ರವೇಶದ ಹಾಗೂ ಪರಿಸರಸ್ನೇಹಿ ಸುಸ್ಥಿರ ಬೆಂಗಳೂರು ನಿರ್ಮಾಣಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಈ ಮಹತ್ವದ ಒಪ್ಪಂದಕ್ಕೆ ಉಭಯ ಸಂಸ್ಥೆಗಳು ಇಂದು ಅಧಿಕೃತವಾಗಿ ಸಹಿ ಹಾಕಿವೆ. ಸಾರ್ವಜನಿಕ ಮೂಲಸೌಕರ್ಯ ಹಾಗೂ ಖಾಸಗಿ ಸಹಭಾಗಿತ್ವವನ್ನು ಒಗ್ಗೂಡಿಸಿರುವ ಈ ಪಾಲುದಾರಿಕೆಯು, ನಗರದ ವಿಸ್ತರಿಸುತ್ತಿರುವ ಸಾರ್ವಜನಿಕ ಸಾರಿಗೆ ಜಾಲ ಮತ್ತು ದೀರ್ಘಾವಧಿಯ ಮೂಲಸೌಕರ್ಯ ಅಭಿವೃದ್ಧಿಗೆ ದೊಡ್ಡ ಮಟ್ಟದ ನೆರವು ಒದಗಿಸಲಿದೆ.
ಈ ಒಪ್ಪಂದದ ಕುರಿತು ಹರ್ಷ ವ್ಯಕ್ತಪಡಿಸಿ ಮಾತನಾಡಿದ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ. ಸಿ. ಜಾಫರ್ (ಐಎಎಸ್) ಅವರು, “ಬೆಂಗಳೂರಿನ ನಮ್ಮ ಮೆಟ್ರೋ ಮೂಲಸೌಕರ್ಯ ಅಭಿವೃದ್ಧಿ ಪಯಣದಲ್ಲಿ ಭಾರತದ ಮೊಟ್ಟಮೊದಲ ಡಬಲ್ ಯೂನಿಕಾರ್ನ್ ಕಂಪನಿಯಾದ ಇನ್ ಮೋಬಿಯನ್ನು ನಮ್ಮ ಪಾಲುದಾರರನ್ನಾಗಿ ಸ್ವಾಗತಿಸಲು ನಾವು ಅತ್ಯಂತ ಸಂತಸಪಡುತ್ತೇವೆ. ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಸಾರ್ವಜನಿಕ ಸಾರಿಗೆಯ ಬೆಳವಣಿಗೆಗೆ ಎಷ್ಟು ಅರ್ಥಪೂರ್ಣವಾಗಿ ಕೈಜೋಡಿಸಬಹುದು ಎಂಬುದಕ್ಕೆ ಈ ಪಾಲುದಾರಿಕೆಯೇ ಅತ್ಯುತ್ತಮ ಉದಾಹರಣೆ. ಈ ₹65 ಕೋಟಿ ವೆಚ್ಚದ ಒಪ್ಪಂದವು ಮೆಟ್ರೋ ಮೂಲಸೌಕರ್ಯ ನಿರ್ಮಾಣಕ್ಕೆ ಬಲ ನೀಡುವುದರ ಜೊತೆಗೆ, ಬಿಎಂಆರ್ಸಿಎಲ್ನ ನಾನ್-ಫೇರ್ ರೆವೆನ್ಯೂ ಸಂಗ್ರಹ ಯೋಜನೆಗಳಿಗೂ ದೊಡ್ಡ ಚೈತನ್ಯ ತರಲಿದೆ. ಬೆಂಗಳೂರಿನ ಕಾರ್ಪೊರೇಟ್ ವಲಯದೊಂದಿಗೆ ಇಂತಹ ಇನ್ನಷ್ಟು ಪ್ರಗತಿಪರ ಪಾಲುದಾರಿಕೆಗಳನ್ನು ನಾವು ಮುಂಬರುವ ದಿನಗಳಲ್ಲಿ ನಿರೀಕ್ಷಿಸುತ್ತಿದ್ದೇವೆ” ಎಂದು ತಿಳಿಸಿದರು.
ಇನ್ ಮೋಬಿ ಸಂಸ್ಥಾಪಕ ಹಾಗೂ ಸಿಇಒ ನವೀನ್ ತಿವಾರಿ ಅವರು ಮಾತನಾಡಿ, “ಜಾಗತಿಕ ಮಟ್ಟದ ಭವಿಷ್ಯವನ್ನು ಊಹಿಸಿಕೊಳ್ಳಲು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಲು ನಮಗೆ ಪೂರ್ಣ ಆತ್ಮವಿಶ್ವಾಸ ನೀಡಿದ್ದೇ ನಮ್ಮ ಬೆಂಗಳೂರು. ನಮ್ಮ ಸಂಸ್ಥೆ ಬೆಳೆದಂತೆಲ್ಲಾ, ನಮ್ಮ ಪಯಣಕ್ಕೆ ರೂಪ ಕೊಟ್ಟ ಈ ಮಹಾನಗರದ ಬಗೆಗಿನ ಜವಾಬ್ದಾರಿಯ ಪ್ರಜ್ಞೆಯೂ ನಮ್ಮಲ್ಲಿ ಇಮ್ಮಡಿಯಾಗಿದೆ. ಈ ಪಾಲುದಾರಿಕೆಯು ಬೆಂಗಳೂರು ನಗರಕ್ಕೆ ಪ್ರತಿಯಾಗಿ ಮರಳಿ ಕೊಡುಗೆ ನೀಡುವ ನಮ್ಮ ಪ್ರಾಮಾಣಿಕ ಬದ್ಧತೆಯನ್ನು ಸಾರುತ್ತದೆ. ಅಷ್ಟೇ ಅಲ್ಲದೆ, ಉದ್ಯಮಗಳು ತಾವು ನೆಲೆಸಿರುವ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂಬ ನಮ್ಮ ನಂಬಿಕೆಯನ್ನು ಇದು ಪುಷ್ಟೀಕರಿಸುತ್ತದೆ. ಭಾರತದ ನೆಲದಿಂದ ಇಡೀ ಜಗತ್ತಿಗಾಗಿ ಹೊಸ ತಂತ್ರಜ್ಞಾನವನ್ನು ರೂಪಿಸುವ ನಮ್ಮ ಕಾಯಕ ಮುಂದುವರಿದಿರುವಂತೆಯೇ, ನಮ್ಮ ಹೆಜ್ಜೆಯ ಪಯಣ ಆರಂಭವಾದ ಈ ತವರೂರಿಗೆ ಕೊಡುಗೆ ನೀಡುವುದಕ್ಕೂ ನಾವು ಅಷ್ಟೇ ಬದ್ಧರಾಗಿದ್ದೇವೆ” ಎಂದರು.
ಇನ್ ಮೋಬಿಯ ಜಾಗತಿಕ ಹಿರಿಯ ಉಪಾಧ್ಯಕ್ಷೆ ಹಾಗೂ ಕಾರ್ಪೊರೇಟ್ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥೆ ಡಾ. ಸುಬಿ ಚತುರ್ವೇದಿ ಅವರು ಮಾತನಾಡಿ, “ಯಾವುದೇ ಒಂದು ನಗರದ ನೈಜ ಪ್ರಗತಿಯು ಅಲ್ಲಿನ ನಾಗರಿಕರ ದೈನಂದಿನ ಜೀವನದಲ್ಲಿ ನೇರವಾಗಿ ಪ್ರತಿಫಲಿಸಬೇಕು. ಒಬ್ಬ ವಿದ್ಯಾರ್ಥಿ ಕಾಲೇಜನ್ನು ಎಷ್ಟು ಸರಾಗವಾಗಿ ತಲುಪುತ್ತಾನೆ, ಉದ್ಯೋಗಿಯೊಬ್ಬರು ನಿಗದಿತ ಸಮಯಕ್ಕೆ ಕೆಲಸದ ಸ್ಥಳಕ್ಕೆ ಹೇಗೆ ಮುಟ್ಟುತ್ತಾರೆ ಅಥವಾ ಒಂದು ಕುಟುಂಬ ನಗರದಾದ್ಯಂತ ಹೇಗೆ ಸುರಕ್ಷಿತವಾಗಿ ಸಂಚರಿಸುತ್ತದೆ ಎಂಬುದರ ಮೇಲೆ ಪ್ರಗತಿ ಅಳೆಯಲಾಗುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಅಂತಹ ಜನೋಪಯೋಗಿ ಸಂಪರ್ಕಗಳನ್ನು ಸಾಕಾರಗೊಳಿಸುತ್ತದೆ. ಬಿಎಂಆರ್ಸಿಎಲ್ ಜೊತೆಗಿನ ಒಡಂಬಡಿಕೆಯ ಮೂಲಕ, ನಗರ ನಿರ್ಮಾಣಕ್ಕೆ ಅತ್ಯಗತ್ಯವಾದ ತಾಳ್ಮೆ ಮತ್ತು ಹೊಣೆಗಾರಿಕೆಯೊಂದಿಗೆ ನಾವು ಬೆಂಗಳೂರಿನ ಭವಿಷ್ಯಕ್ಕೆ ಕಟಿಬದ್ಧರಾಗಿದ್ದೇವೆ. ತಲೆಮಾರುಗಳ ಕಾಲ ಸಾರ್ವಜನಿಕರಿಗೆ ಸೇವೆ ಒದಗಿಸುವ ಮೂಲಸೌಕರ್ಯಗಳ ಮೂಲಕ ಶಾಶ್ವತ ಸಾರ್ವಜನಿಕ ಮೌಲ್ಯವನ್ನು ಸೃಷ್ಟಿಸುವುದೇ ನಮ್ಮ ಮೂಲ ಉದ್ದೇಶ. ಇದು ಪ್ರತಿಯೊಬ್ಬ ಇನ್ ಮೋಬಿಯನ್ ಹೆಮ್ಮೆಪಡುವ ಐತಿಹಾಸಿಕ ಕ್ಷಣ” ಎಂದು ಹೇಳಿದರು.
ಇದೇ ಬೆಂಗಳೂರು ನಗರದಲ್ಲಿ ಉದಯಿಸಿ, ಇಂದು ಜಾಗತಿಕ ತಂತ್ರಜ್ಞಾನ ದಿಗ್ಗಜನಾಗಿ ಬೆಳೆದು ನಿಂತಿರುವ ಇನ್ ಮೋಬಿಗೆ, ಈ ಪಾಲುದಾರಿಕೆಯು ತನ್ನ ಉಗಮಕ್ಕೆ ಕಾರಣವಾದ ನಗರದ ಮೇಲಿನ ಶಾಶ್ವತ ಹಾಗೂ ಅರ್ಥಪೂರ್ಣ ಹೂಡಿಕೆಯಾಗಿದೆ. ಬೆಂಗಳೂರಿನ ನಿರಂತರ ಪ್ರಗತಿಯು ಕೆಲಸದ ಸ್ಥಳಗಳು, ಶಿಕ್ಷಣ, ವಿಫುಲ ಅವಕಾಶಗಳು ಮತ್ತು ಪರಸ್ಪರ ಮನುಷ್ಯರನ್ನು ಬೆಸೆಯುವ ಸಶಕ್ತ ಮೂಲಸೌಕರ್ಯಗಳ ಮೇಲೆ ಪ್ರಮುಖವಾಗಿ ಅವಲಂಬಿತವಾಗಿದೆ ಎಂಬ ವಾಸ್ತವವನ್ನು ಈ ಯೋಜನೆ ಸ್ಪಷ್ಟವಾಗಿ ಗುರುತಿಸುತ್ತದೆ.
ಸಂಚಾರ ಸೌಕರ್ಯ ಮತ್ತು ಆರ್ಥಿಕ ಅಭಿವೃದ್ಧಿ ಒಟ್ಟೊಟ್ಟಿಗೇ ಮುನ್ನಡೆಯುವ ನಗರ ಬೆಳವಣಿಗೆಯ ಒಂದು ವಿಶಾಲ ದೃಷ್ಟಿಕೋನಕ್ಕೆ ಈ ಪಾಲುದಾರಿಕೆ ಸಂಪೂರ್ಣ ಬೆಂಬಲ ನೀಡುತ್ತದೆ. ಮೆಟ್ರೋ ಮೂಲಸೌಕರ್ಯ ಜಾಲಕ್ಕೆ ಬೆನ್ನೆಲುಬಾಗಿ ನಿಲ್ಲುವ ಮೂಲಕ, ಸಾರ್ವಜನಿಕ ಸಾರಿಗೆಯ ಸದ್ಬಳಕೆಯನ್ನು ಜನರಲ್ಲಿ ಉತ್ತೇಜಿಸುವುದು ಹಾಗೂ ಬೆಂಗಳೂರಿನ ಬಹುದೊಡ್ಡ ಸವಾಲಾಗಿರುವ ಟ್ರಾಫಿಕ್ ದಟ್ಟಣೆ ಮತ್ತು ಪರಿಸರ ಮಾಲಿನ್ಯದ ಒತ್ತಡಗಳಿಗೆ ಪರಿಹಾರ ಒದಗಿಸಲು ಈ ಸಹಯೋಗವು ನೇರ ಕೊಡುಗೆ ನೀಡಲಿದೆ.
ಉದ್ಯೋಗಿಗಳು, ಕುಟುಂಬಗಳು ಹಾಗೂ ಸ್ಥಳೀಯ ಸಮುದಾಯಗಳು ನಿತ್ಯವೂ ಅವಲಂಬಿಸಿರುವ ಸಾರ್ವಜನಿಕ ಸಾರಿಗೆ ಮೂಲಸೌಕರ್ಯದ ಗುಣಮಟ್ಟದೊಂದಿಗೆ ವ್ಯಾಪಾರೋದ್ಯಮದ ಯಶಸ್ಸನ್ನು ಜೋಡಿಸುವ ಕೆಲಸವನ್ನು ಇದು ಮಾಡುತ್ತದೆ. ಆ ಮೂಲಕ ನಗರದ ಸಮಗ್ರ ಅಭಿವೃದ್ಧಿಯಲ್ಲಿ ವಾಣಿಜ್ಯ ಸಂಸ್ಥೆಗಳು ದೀರ್ಘಾವಧಿಯ ಪಾಲುದಾರರಾಗಿ ಮಹತ್ವದ ಪಾತ್ರ ವಹಿಸಬಹುದು ಎಂಬುದನ್ನು ಈ ಒಪ್ಪಂದ ಸಾಬೀತುಪಡಿಸಿದೆ. ಬಿಎಂಆರ್ಸಿಎಲ್ ಮತ್ತು ಇನ್ ಮೋಬಿ ಈ ಒಪ್ಪಂದವನ್ನು ಬೆಂಗಳೂರಿನ ದೀರ್ಘಾವಧಿಯ ಸ್ಥಿರತೆಗೆ ಸಂದ ಗೌರವವೆಂದು ಭಾವಿಸಿದ್ದು, ನಗರವನ್ನು ಇನ್ನಷ್ಟು ವಾಸಯೋಗ್ಯವಾಗಿಸಲು ಸಾಂಸ್ಥಿಕ ಸಹಯೋಗ ಮತ್ತು ನಿರಂತರ ಬಂಡವಾಳ ಹೂಡಿಕೆಯನ್ನು ಒಟ್ಟಾಗಿ ತಂದಿವೆ.
ಬಿಎಂಆರ್ಸಿಎಲ್:
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಬೆಂಗಳೂರು ಮೆಟ್ರೋ ರೈಲು ಯೋಜನೆಯನ್ನು ಕಾರ್ಯಗತಗೊಳಿಸಲು ಸ್ಥಾಪಿಸಲಾದ ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಜಂಟಿ ಉದ್ಯಮವಾಗಿದೆ. ‘ನಮ್ಮ ಮೆಟ್ರೋ’ ಯೋಜನೆಯ ಮೂಲಕ ಬಿಎಂಆರ್ಸಿಎಲ್ ನಗರದ ಸಂಪರ್ಕ ವ್ಯವಸ್ಥೆಯನ್ನು ನಿರಂತರವಾಗಿ ಬಲಪಡಿಸುತ್ತಿದ್ದು, ಬೆಂಗಳೂರಿಗೆ ಪರಿಸರಸ್ನೇಹಿ ಮತ್ತು ಸುಸ್ಥಿರ ಸಾರ್ವಜನಿಕ ಸಾರಿಗೆಯನ್ನು ಒದಗಿಸುತ್ತಿದೆ. ನಿಗಮದ ವಿಸ್ತರಿಸುತ್ತಿರುವ ಮೆಟ್ರೋ ಜಾಲವು ಜನವಸತಿ ಪ್ರದೇಶಗಳನ್ನು ಹಾಗೂ ಪ್ರಮುಖ ಉದ್ಯೋಗ ಕೇಂದ್ರಗಳನ್ನು ಬೆಸೆದು, ನಗರದ ಸಾರಿಗೆ ಅಗತ್ಯತೆಗಳಿಗೆ ಮತ್ತು ಸುದೀರ್ಘ ಅಭಿವೃದ್ಧಿಗೆ ನಿರಂತರ ಬೆಂಬಲವಾಗಿ ನಿಂತಿದೆ.
ಇನ್ ಮೋಬಿ:
ಇನ್ ಮೋಬಿ ಸಂಸ್ಥೆಯು ಏಜೆಂಟಿಕ್ ಕಾಮರ್ಸ್ ಮತ್ತು ಡಿಜಿಟಲ್ ಜಾಹೀರಾತು ರಂಗದ ಭವಿಷ್ಯವನ್ನು ಹೊಸದಾಗಿ ರೂಪಿಸುತ್ತಿರುವ ಮುಂಚೂಣಿಯ ಜಾಗತಿಕ ತಂತ್ರಜ್ಞಾನ ಕಂಪನಿಯಾಗಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಪ್ರಸಿದ್ಧ ಕನ್ಸ್ಯೂಮರ್ ಪ್ಲಾಟ್ಫಾರ್ಮ್ ಗ್ಲಾನ್ಸ್ ಸೇರಿದಂತೆ ತನ್ನ ಸಮಗ್ರ ವಹಿವಾಟು ವ್ಯವಸ್ಥೆಯ ಮೂಲಕ, ಬ್ರ್ಯಾಂಡ್ಗಳು ನಿರ್ದಿಷ್ಟ ಗ್ರಾಹಕರನ್ನು ತಲುಪಲು ಹಾಗೂ ಗ್ರಾಹಕರು ತಮಗೆ ಬೇಕಾದ ಉತ್ಪನ್ನಗಳನ್ನು ಸುಲಭವಾಗಿ ಕಂಡುಕೊಳ್ಳಲು ಇನ್ ಮೋಬಿ ಡೇಟಾ, ಮೆಷಿನ್ ಲರ್ನಿಂಗ್ ಮತ್ತು ಜನರೇಟಿವ್ ಎಐ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ. ಏಜೆಂಟಿಕ್ ಕಾಮರ್ಸ್ನ ನೂತನ ಮಾದರಿಗಳನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿರುವ ಗ್ಲಾನ್ಸ್ ವೇದಿಕೆಯನ್ನು ಇನ್ ಮೋಬಿ ಟೆಕ್ನಾಲಜಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನ ಸಹವರ್ತಿ ಸಂಸ್ಥೆಯಾದ ಗ್ಲಾನ್ಸ್ ಇನ್ ಮೋಬಿ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದೆ. ಸಂಸ್ಥೆಯ ಕುರಿತು ಹೆಚ್ಚಿನ ವಿವರಗಳಿಗಾಗಿ advertising.inmobi.com ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.
