Oplus_16908288
ಶ್ಲೋಕ – 17
ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುಧಾಹೃತಃ ।
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ ॥೧೭॥
ಉತ್ತಮಃ ಪುರುಷಃ ತು ಅನ್ಯಃ ಪರಮ ಆತ್ಮಾ ಇತಿ ಉಧಾಹೃತಃ ।
ಯಃ ಲೋಕತ್ರಯಮ್ ಆವಿಶ್ಯ ಬಿಭರ್ತಿ ಅವ್ಯಯಃ ಈಶ್ವರಃ –ಈ ಎರಡಕ್ಕೂ ಮಿಗಿಲಾದವನು ಪುರುಷೋತ್ತಮ. ಅವನನ್ನೇ ಪರಮಾತ್ಮ ಎನ್ನುತ್ತಾರೆ. ಅಳಿವಿರದ ಆ ಪರಮೇಶ್ವರನೆ ಮೂರು ಲೋಕದೊಳಗಿದ್ದು ಸಲಹುತ್ತಾನೆ.
ಕ್ಷರ ಮತ್ತು ಅಕ್ಷರವನ್ನು ಮೀರಿ ನಿಂತಿರುವ ಪರಮಪುರುಷ ಆ ಭಗವಂತ. ಅವನನ್ನೇ ‘ಪರಮಾತ್ಮ’ ಎಂದು ಕರೆಯುತ್ತಾರೆ. ಯಾರು ಈ ಮೂರು ಲೋಕದೊಳಗೆ, (ಭೂಃ ಭುವಃ ಸ್ವಃ ಅಥವಾ ಇಡೀ ಬ್ರಹ್ಮಾಂಡ-ಇದನ್ನು ಏಳು ಅಥವಾ ಹದಿನಾಲ್ಕು ಲೋಕವನ್ನಾಗಿಯೂ ವಿಭಾಗ ಮಾಡಿ ಹೇಳುತ್ತಾರೆ.) ತುಂಬಿ ಧಾರಣೆ ಮಾಡಿ ರಕ್ಷಿಸುತ್ತಿದ್ದಾನೋ ಅವನು ಸರ್ವಶಕ್ತ(ಈಶ್ವರ)ನಾದ ಭಗವಂತ.
