ಚನ್ನರಾಯಪಟ್ಟಣ/ಬೆಂಗಳೂರು, ಜೂನ್ 25: ಕನ್ನಡ ಪುಸ್ತಕ ಪ್ರಾಧಿಕಾರವು 2025ನೇ ಸಾಲಿನ ಪುಸ್ತಕ ಮತ್ತು ಮುದ್ರಣ ಸೊಗಸು ಬಹುಮಾನಗಳನ್ನು ಪ್ರಕಟಿಸಿದ್ದು, ಪುಸ್ತಕ ಸೊಗಸು ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದ ‘ಶಿಲ್ಪಕಲೆಯಲ್ಲಿ ರಾಮಾಯಣ’ ಕೃತಿಯ ಲೇಖಕರಾದ ಪುಂಡಲೀಕ ಕಲ್ಲಿಗನೂರ ಹಾಗೂ ಕೃತಿಯ ಮುದ್ರಣ ಮತ್ತು ಪ್ರಕಾಶನ ಸಂಸ್ಥೆಯಾದ ವೀರಲೋಕ ಪ್ರಕಾಶನ, ಚಾಮರಾಜಪೇಟೆ, ಬೆಂಗಳೂರು ಅವರಿಗೆ ಚನ್ನರಾಯಪಟ್ಟಣದ ಶ್ರೀಮತಿ ದೀಪಶ್ರೀ ಪ್ರಮೋದ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ವಿವಿಧ ದೇವಾಲಯಗಳ ಶಿಲ್ಪಕಲೆಯಲ್ಲಿ ಮೂಡಿಬಂದಿರುವ ರಾಮಾಯಣದ ಪ್ರಸಂಗಗಳು, ಪಾತ್ರಗಳು ಹಾಗೂ ಕಲಾತ್ಮಕ ವೈಶಿಷ್ಟ್ಯಗಳನ್ನು ಸಮಗ್ರವಾಗಿ ದಾಖಲಿಸಿರುವ ಈ ಕೃತಿ ಓದುಗರ ಗಮನ ಸೆಳೆದಿದೆ ಎಂದು ತಿಳಿಸಿದ್ದಾರೆ.
ರಾಮಾಯಣದ ಕಥಾವಸ್ತುವನ್ನು ದೇವಾಲಯಗಳ ಶಿಲ್ಪಕಲೆಯೊಂದಿಗೆ ಸಂಯೋಜಿಸಿ, ಅಪರೂಪದ ಮಾಹಿತಿಗಳನ್ನು ಒಳಗೊಂಡಿರುವ ಈ ಕೃತಿ ಸಾಹಿತ್ಯ ಹಾಗೂ ಕಲಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ, ಕನ್ನಡ ಪುಸ್ತಕ ಪ್ರಾಧಿಕಾರದಿಂದ 2025ನೇ ಸಾಲಿನ ವಿವಿಧ ವಿಭಾಗಗಳಲ್ಲಿ ಬಹುಮಾನ ಪಡೆದ ಎಲ್ಲಾ ಲೇಖಕರು, ಪುಸ್ತಕಗಳು ಹಾಗೂ ಮುದ್ರಣ ಸಂಸ್ಥೆಗಳಿಗೆ ಸಹ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

