ತುಮಕೂರು:ಮಾದಕವಸ್ತುಗಳು,ಬೀಡಿ,ಸಿಗರೇಟು,ಗಾಂಜಾ,ಅಫೀಮು,ಡ್ರಗ್ಸ್ ಗಳಿಂದ ದೂರವಿದ್ದು ವಿದ್ಯಾರ್ಥಿಗಳು ತಮ್ಮ ಜೀವನವನ್ನು ಹಸನುಮಾಡಿಕೊಳ್ಳಿ,ಒಮ್ಮೆ ಮಾದಕ ವಸ್ತುಗಳಿಗೆ ಮನಸ್ಸು ನೀಡಿದರೆ ಅದು ತಮ್ಮ ಜೀವನವನ್ನೇ ಸರ್ವನಾಶ ಮಾಡುತ್ತದೆ,ಮೊಬೈಲ್ ಒಂದು ಗೀಳಾಗಿದ್ದು ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಅದಕ್ಕೆ ದಾಸರಾಗಿದ್ದಾರೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿಯುವವರೆಗೂ ಮೊಬೈಲ್ ಬಳಸಬಾರದು,ರೀಲ್ಸ್ ಹುಚ್ಚಿಗೆ ಬಿದ್ದು ವಿದ್ಯಾರ್ಥಿಗಳು ತಮ್ಮ ಜೀವನವನ್ನೇ ಕೊನೆಯಾಗಿಸಿಕೊಂಡ ಅನೇಕ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ ಆದ್ದರಿಂದ ವಿದ್ಯಾರ್ಥಿಗಳು ಮದ್ಯಪಾನ,ಧೂಮಪಾನ, ಮಾದಕ ಪದಾರ್ಥಗಳಿಂದ ದೂರವಿದ್ದು ಸಂಸ್ಕಾರವಂತರಾಗಿ ಉತ್ತಮ ವಿದ್ಯಾರ್ಥಿಗಳಾಗಿ ಸಮಾಜಕ್ಕೆ ಆಶಾಕಿರಣವಾಗಿ ಎಂದು ಹಿರಿಯ ಪತ್ರಕರ್ತರು ಮತ್ತು ವಕೀಲರು ಆದ ಕೆ.ಬಿ.ಚಂದ್ರಚೂಡರವರು ಕರೆ ನೀಡಿದರು.
ಅವರು ಇಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನಗರದ ಎಸ್.ಆರ್.ಎಸ್.ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಮಾದಕವಸ್ತು ವಿರೋಧಿ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಶ್ರೀಮತಿ ನಯನಚರಣ್ ರವರು ವಿದ್ಯಾರ್ಥಿಗಳು ಉತ್ತಮ ಅಭ್ಯಾಸ-ಹವ್ಯಾಸಗಳೊಂದಿಗೆ ವ್ಯಾಸಂಗ ಮಾಡಬೇಕು,ಯಾವುದೇ ಕೆಟ್ಟ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸಬಾರದು, ಚಟಗಳು ಫ್ಯಾಶನ್ ನೊಂದಿಗೆ ಪ್ರಾರಂಭವಾಗಿ ಅದಕ್ಕೆ ದಾಸನಾಗಿ ತಮ್ಮ ಜೀವನನ್ನೇ ಕೊನೆಗಾಣಿಸಿಕೊಂಡ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನ ಯೋಜನಾಧಿಕಾರಿ ಪ್ರಭಾಕರ್ ನಾಯಕ್ ರವರು ಯೋಜನೆಯ ಕಾರ್ಯಕ್ರಮಗಳಾದ ಕೆರೆ ಊಳೆತ್ತುವುದು,ದೇವಸ್ಥಾನಗಳ ಪುನರುಜ್ಜೀವನ,ಶುದ್ಧಗಂಗಾ,ವಯಸ್ಸಾದವರಿಗೆವಾಟರ್ ಬೆಡ್,ವೀಲ್ ಚೇರ್ ವಿತರಣೆ,ಶಾಲಾ ಕಾಲೇಜುಗಳಿಗೆ ಬೆಂಚ್ ವಿತರಣೆ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ವೇದಿಕೆಯಲ್ಲಿ ಮೇಲ್ವಿಚಾರಕರಾದ ಮಹಂತೇಶ್,ಸೇವಾಪ್ರತಿನಿಧಿ ಶೋಭ,ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
-ಚಂದ್ರಚೂಡ ಕೆ.ಬಿ.
