ತುಮಕೂರು: ಕರ್ನಾಟಕವು ಸಂಸ್ಥೆಗೆ ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ರಾಜ್ಯದಲ್ಲಿ 200 ಮಳಿಗೆಗಳ ಮೈಲಿಗಲ್ಲು ತಲುಪಿರುವುದು ಸಂತಸದ ಸಂಗತಿಯಾಗಿದೆ. ಒಂದೇ ದಿನದಲ್ಲಿ 50 ಮಳಿಗೆಗಳನ್ನು ಆರಂಭಿಸಿರುವುದು ಸಂಸ್ಥೆಯ ವೇಗದ ಬೆಳವಣಿಗೆ ಹಾಗೂ ವಿತರಣಾ ಪಾಲುದಾರರು ಬ್ರ್ಯಾಂಡ್ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಗ್ರಾಹಕರಿಗೆ ನವೀನ ಉತ್ಪನ್ನಗಳು ಮತ್ತು ಉತ್ತಮ ಗುಣಮಟ್ಟದ ಪೇಂಟಿಂಗ್ ಪರಿಹಾರಗಳನ್ನು ಇನ್ನಷ್ಟು ಹತ್ತಿರವಾಗಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಬಿರ್ಲಾ ಓಪಸ್ ಪೇಂಟ್ಸ್ನ ಸಿಇಒ ಸಚಿನ್ ಸಹಾಯ್ ರವರು ತಿಳಿಸಿದರು.
ನಗರದ ಕುಣಿಗಲ್ ರಸ್ತೆಯಲ್ಲಿರುವ ಎಸ್.ಎಸ್.ಐ.ಟಿ. ಹಿಂಭಾಗದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಮಳಿಗೆಯಾದ ಸನ್ಮತಿ ಬಿಲ್ಡ್ ಪ್ರೊ ಉದ್ಘಾಟಿಸಿ ಮಾತನಾಡಿದ ಸಚಿನ್ ಸಹಾಯ್ರವರು, ಆದಿತ್ಯ ಬಿರ್ಲಾ ಸಮೂಹದ ಗ್ರಾಸಿಮ್ ಇಂಡಸ್ಟ್ರೀಸ್ನ ಅಂಗಸಂಸ್ಥೆಯಾಗಿರುವ ಬಿರ್ಲಾ ಓಪಸ್ ಪೇಂಟ್ಸ್, ಕರ್ನಾಟಕದಾದ್ಯಂತ ಒಂದೇ ದಿನದಲ್ಲಿ 50 ಹೊಸ ಫ್ರಾಂಚೈಸಿ ಮಳಿಗೆಗಳನ್ನು ಆರಂಭಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ.

ಈ ಮೂಲಕ ರಾಜ್ಯದಲ್ಲಿ ಸಂಸ್ಥೆಯ ಒಟ್ಟು ಫ್ರಾಂಚೈಸಿ ಮಳಿಗೆಗಳ ಸಂಖ್ಯೆ 200ಕ್ಕೆ ತಲುಪಿದ್ದು, ಪೇಂಟ್ ಉದ್ಯಮದಲ್ಲಿ ತನ್ನ ರಿಟೇಲ್ ಜಾಲವನ್ನು ಮತ್ತಷ್ಟು ಬಲಪಡಿಸಿದೆ.
ಬೆಂಗಳೂರು, ಮೈಸೂರು, ತುಮಕೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಶಿವಮೊಗ್ಗ, ಹೊಸಪೇಟೆ, ವಿಜಯಪುರ, ದಾವಣಗೆರೆ ಹಾಗೂ ಹಾಸನ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಹೊಸ ಮಳಿಗೆಗಳನ್ನು ಆರಂಭಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 11, ತುಮಕೂರಿನಲ್ಲಿ 7, ಮೈಸೂರು ಮತ್ತು ಹೊಸಪೇಟೆಯಲ್ಲಿ ತಲಾ 5 ಹೊಸ ಮಳಿಗೆಗಳನ್ನು ಪ್ರಾರಂಭಿಸಲಾಗಿದೆ. ಹೊಸ ಮಳಿಗೆಗಳ ಮೂಲಕ ಗ್ರಾಹಕರಿಗೆ ಗುಣಮಟ್ಟದ ಅಲಂಕಾರಿಕ ಪೇಂಟ್ಸ್, ಪ್ರೀಮಿಯಂ ಫಿನಿಶ್ಗಳು, ವಾಲ್ಪೇಪರ್ಗಳು ಹಾಗೂ ವಿವಿಧ ನವೀನ ಪೇಂಟಂಗ್ ಪರಿಹಾರಗಳು ಸುಲಭವಾಗಿ ಲಭ್ಯವಾಗಲಿವೆ. ಗ್ರಾಹಕರ ಮನೆ ಮತ್ತು ಕಟ್ಟಡಗಳ ಅಗತ್ಯಕ್ಕೆ ಅನುಗುಣವಾಗಿ ಬಣ್ಣಗಳ ಆಯ್ಕೆ, ಪರಿಣಿತ ಸಲಹೆ ಹಾಗೂ ವೈಯಕ್ತಿಕ ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನೂ ಮಳಿಗೆಗಳಲ್ಲಿ ಕಲ್ಪಿಸಲಾಗಿದೆ.

ಇದೇ ಸಂದರ್ಭದಲ್ಲಿ ಸನ್ಮತಿ ಬಿಲ್ಡ್ ಪ್ರೊ ಪಾಲುದಾರರಾದ ಆಶಿಷ್ ಮಾತನಾಡಿ, ಬಿರ್ಲಾ ಓಪಸ್ ಪೇಂಟ್ಸ್ ನೊಂದಿಗೆ ಪಾಲುದಾರಿಕೆ ಹೊಂದಿರುವುದು ಸಂತಸ ತಂದಿದೆ. ಸಂಸ್ಥೆಯ ಗುಣಮಟ್ಟದ ಪೇಂಟ್ಸ್, ವೈವಿಧ್ಯಮಯ ಉತ್ಪನ್ನಗಳು ಹಾಗೂ ನಿರಂತರ ಸಹಕಾರದಿಂದ ತುಮಕೂರಿನ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದರ ಜೊತೆಗೆ ನಮ್ಮ ವ್ಯವಹಾರವನ್ನೂ ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ,ಹೊಸದಾಗಿ ಆರಂಭಿಸಿರುವ ಫ್ರಾಂಚೈಸಿ ಮಳಿಗೆಗಳು ಗ್ರಾಹಕರಿಗೆ ಪೇಂಟಿಂಗ್ಗೆ ಸಂಬಂಧಿಸಿದ ಎಲ್ಲ ಅಗತ್ಯಗಳಿಗೂ ಒಂದೇ ಸ್ಥಳದಲ್ಲಿ ಪರಿಹಾರ ಒದಗಿಸುವ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ,ಗ್ರಾಹಕರಿಗೆ ಇಎಂಐ ಸೌಲಭ್ಯ ಸಹ ಇದೆ, ಅತ್ಯಾಧುನಿಕ ಉತ್ಪಾದನಾ ಘಟಕಗಳು ಹಾಗೂ ದೇಶಾದ್ಯಂತ ವಿಸ್ತರಿಸುತ್ತಿರುವ ವಿತರಣಾ ಜಾಲದ ಬೆಂಬಲದೊಂದಿಗೆ ಸಂಸ್ಥೆಯು ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ಈ ಮೂಲಕ ಕರ್ನಾಟಕದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿರುವ ಬಿರ್ಲಾ ಓಪಸ್ ಪೇಂಟ್ಸ್, ಡೀಲರ್ಗಳು, ಫ್ರಾಂಚೈಸಿ ಪಾಲುದಾರರು ಹಾಗೂ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಬೆಳೆಸುವ ಮೂಲಕ ಪೇಂಟ್ ಉದ್ಯಮದಲ್ಲಿ ತನ್ನ ಬೆಳವಣಿಗೆಯ ಪಯಣವನ್ನು ಮುಂದುವರಿಸಿದೆ ಎಂದು ವಿವರಿಸಿದರು.
ಸನ್ಮತಿ ಪೇಂಟ್ಸ್ ಪಾಲುದಾರರಾದ ಯಶಸ್ ರವರು ಮಾತನಾಡುತ್ತಾ ನಮ್ಮ ತಂದೆಯವರಾದ ದಿವಂಗತ ಅಜಿತ್ ಜೈನ್ ರವರ ಕನಸು ಇದು ಕೈಗೆಟುಕುವ ದರದಲ್ಲಿ ಉತ್ತಮ ದರ್ಜೆಯ ಉತ್ತಮ ಕಂಪೆನಿಯ ಪೇಂಟ್ಸ್ ಮಾರಾಟ ಮಾಡುವುದು,ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವುದು,ಮಧ್ಯಮ ಮತ್ತು ಬಡ ವರ್ಗದ ಜನರು ಕಟ್ಟುವ ಮನೆಗಳಿಗೆ ಉತ್ತಮ ವಿಶ್ವ ದರ್ಜೆಯ ಬಿರ್ಲಾ ಓಪಸ್ ಪೇಂಟ್ಸ್ ಮಾರಾಟ ಮಾಡುವ ಮೂಲಕ ಜನರ ಕನಸನ್ನು ನನಸು ಮಾಡುವುದು ನಮ್ಮ ಗುರಿ, ನಮ್ಮ ತಂದೆಯವರ ಕನಸು ಇಂದು ನಮ್ಮಗಳ ಮೂಲಕ ಕನಸಾಗಿದೆ ತುಮಕೂರು ನಗರದ ಎಲ್ಲ ಜನರು ನಮ್ಮ ಅಂಗಡಿಗೆ ಒಮ್ಮೆ ಭೇಟಿ ನೀಡಿ ನಮ್ಮನ್ನು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ಶಾಂತಲಾಅಜಿತ್ ಜೈನ್,ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
-ಚಂದ್ರಚೂಡ ಕೆ.ಬಿ.
