ತಾಲೂಕಿನ ದಂಡಿಗನಹಳ್ಳಿ ಹೋಬಳಿ ಬರಗೂರು ಹ್ಯಾಂಡ್ ಪೋಸ್ಟ್ ನಲ್ಲಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ನವದೆಹಲಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಇಲಾಖೆಯ ಸಹಯೋಗದಲ್ಲಿ, “ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನ” ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.
“ನಮ್ಮಗೆ ಅನಾರೋಗ್ಯ ಉಂಟುಮಾಡುವ ಮಾದಕ ವಸ್ತುಗಳಿಂದ ದೂರ ಇರೋಣ,
ಸಮಾಜದ ಸ್ವಾಸ್ಥ್ಯ ಕೆಡಿಸುವ ಮಾದಕೇಶನದಿಂದ ದೂರ ಸರಿಯೋಣ,
ವಿದ್ಯಾಭ್ಯಾಸಕ್ಕೆ ಮಾರಕವಾಗುವ ಮಾದಕವೇಶನಕ್ಕೆ ಬಲಿಯಾಗದಿರೋಣ,
ನಮ್ಮ ಭವಿಷ್ಯ ಮತ್ತು ದೇಶದ ಅಭಿವೃದ್ಧಿಗೆ ತಡೆಯಾಗುವ ನಶೆಗೆ ಒಳಗಾಗಬೇಡೋಣ,
ನಶಾಮುಕ್ತ ಕರ್ನಾಟಕ ನಿರ್ಮಾಣ ಮಾಡೋಣ”
— ಎಂಬ ಘೋಷವಾಕ್ಯಗಳೊಂದಿಗೆ ಕುವೆಂಪು ಇಂಟರ್ನ್ಯಾಷನಲ್ ಶಾಲೆ ವತಿಯಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮವನ್ನು ಕುವೆಂಪು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಕೋಮಲ ಶಿವಸ್ವಾಮಿ ಉದ್ಘಾಟಿಸಿದರು.
9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆ ನಡೆಸಿದರು. ನಿರೂಪಣೆಯನ್ನು ವಿ.ಆರ್.ಡಬ್ಲ್ಯೂ. ಶ್ರೀನಿವಾಸ್ ಬಿ.ಟಿ. ನಿರ್ವಹಿಸಿದರು.

ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಅರಿವು ಮೂಡಿಸಲು ರಂಗೋಲಿ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಹಾಗೂ ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ಈ ಸಂದರ್ಭ ಪ್ರಾಂಶುಪಾಲ ಭೂಮಿಕಾ ಮೋಹನ್, ಬರಗೂರು ಕೆನರಾ ಬ್ಯಾಂಕ್ ಮ್ಯಾನೇಜರ್ ಚಂದ್ರಕಾಂತ್, ಪುನರ್ವಸತಿ ಕಾರ್ಯಕರ್ತ ಎಂ.ಆರ್.ಡಬ್ಲ್ಯೂ. ಸುಬ್ರಹ್ಮಣ್ಯ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಫಯಾಜ್ ಯು.ಎನ್., ಉಪಾಧ್ಯಕ್ಷ ಅನಿಲ್ ಕೆ.ಗೌಡ, ಬರಗೂರು ಪಂ.ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಡಿ.ಆರ್., ಶಿಕ್ಷಕರು ಹಾಗೂ ಶಿಕ್ಷಕಿಯರಾದ ಕಲ್ಪನಾ ಎಂ.ಆರ್., ಮಹೇಶ್ ಎಂ.ಎನ್., ರೋಶನ್, ಕಾವ್ಯ, ಲೀಲಾ, ಸುಪ್ರಿಯಾ, ಯುವದಿತ, ಜಯಪ್ರಕಾಶ್, ಸ್ಪಂದನ, ಸಂಧ್ಯಾ, ನೇತ್ರ, ಚೈತ್ರ, ವರ್ದಿನಿ, ವೀಣಾ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು “ನಶಾಮುಕ್ತ ಸಮಾಜವೇ ಸುಸಂಸ್ಕೃತ ಸಮಾಜ” ಎಂಬ ಸಂದೇಶವನ್ನು ಸಾರಿದರು.
– ಮಂಜುನಾಥ್ ಐ. ಕೆ

[…] […]