ಚನ್ನರಾಯಪಟ್ಟಣ: ಮೈಸೂರಿನಲ್ಲಿ ನಡೆದ 31ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಚನ್ನರಾಯಪಟ್ಟಣದ ಶ್ರೀ ವಿವೇಕಾನಂದ ಅಂತರಾಷ್ಟ್ರೀಯ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಮಾಸ್ಟರ್ ಸಿದ್ದಾರ್ಥ್ ಎಂ. ಚಕ್ರವರ್ತಿ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಪತ್ರಕರ್ತ ಐ.ಕೆ. ಮಂಜುನಾಥ್ ಮತ್ತು ಎ.ವೈ. ಸರಿತಾ ದಂಪತಿಯ ಪುತ್ರನಾದ ಸಿದ್ದಾರ್ಥ್ ಅವರ ಸಾಧನೆಗೆ ಕರಾಟೆ ಗುರು ಮಹಾಂತೇಶ್ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

ಶಾಲೆಯ ಪ್ರಾಂಶುಪಾಲ ಮಹಾದೇವ್ ಅವರು ವಿದ್ಯಾರ್ಥಿಯ ಸಾಧನೆಯನ್ನು ಶ್ಲಾಘಿಸಿ, ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಕರಾಟೆಯಲ್ಲಿ ಚಾಂಪಿಯನ್ ಆಗುವಂತಾಗಲಿ ಎಂದು ಹಾರೈಸಿದ್ದಾರೆ.
