ಬೆಂಗಳೂರು: ಎಲೆಕ್ಟ್ರಿಕ್ ವಾಹನಗಳ ಬಳಕೆದಾರರಿಗೆ ಚಾರ್ಜಿಂಗ್ ಪಾವತಿಯನ್ನು ಸುಲಭಗೊಳಿಸುವ ಉದ್ದೇಶದಿಂದ Paytm ಸಂಸ್ಥೆಯು ChargeZone ಜೊತೆ ಸಹಭಾಗಿತ್ವ ಮಾಡಿಕೊಂಡಿದೆ. ಈ ಮೂಲಕ ದೇಶಾದ್ಯಂತ 15,000ಕ್ಕೂ ಹೆಚ್ಚು ಹೈ-ಸ್ಪೀಡ್ ಇವಿ ಚಾರ್ಜಿಂಗ್ ಪಾಯಿಂಟ್ಗಳಲ್ಲಿ Paytm QR ಮೂಲಕ ಪಾವತಿ ಮಾಡುವ ಸೌಲಭ್ಯ ಲಭ್ಯವಾಗಲಿದೆ.
ChargeZone ದೇಶದ 1,200ಕ್ಕೂ ಹೆಚ್ಚು ಸ್ಥಳಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ನಿರ್ವಹಿಸುತ್ತಿದ್ದು, ಪ್ರಮುಖ ಹೆದ್ದಾರಿಗಳು, ನಗರ ಪ್ರದೇಶಗಳು ಹಾಗೂ ವಾಣಿಜ್ಯ ಕೇಂದ್ರಗಳಲ್ಲಿ ಈ ಸೌಲಭ್ಯ ದೊರೆಯಲಿದೆ.
ಇವಿ ವಾಹನ ಚಾಲಕರು ಚಾರ್ಜಿಂಗ್ ಕೇಂದ್ರದಲ್ಲಿರುವ ವಿಶೇಷ Paytm QR ಕೋಡ್ ಸ್ಕ್ಯಾನ್ ಮಾಡಿ, ಪಾವತಿಸಬೇಕಾದ ಮೊತ್ತ ನಮೂದಿಸಿ ಹಣ ಪಾವತಿಸಬಹುದು. ಪಾವತಿ ಯಶಸ್ವಿಯಾದ ಬಳಿಕ ಚಾರ್ಜಿಂಗ್ ಪ್ರಾರಂಭಿಸಬಹುದು.
ChargeIndia ತಂತ್ರಜ್ಞಾನ ವೇದಿಕೆಯ ಮೂಲಕ ಈ ಪಾವತಿ ವ್ಯವಸ್ಥೆಯನ್ನು ವಿವಿಧ ಚಾರ್ಜಿಂಗ್ ನೆಟ್ವರ್ಕ್ಗಳೊಂದಿಗೆ ಸಂಯೋಜಿಸಲಾಗಿದೆ. 2030ರ ವೇಳೆಗೆ 10 ಲಕ್ಷ ಚಾರ್ಜಿಂಗ್ ಪಾಯಿಂಟ್ಗಳನ್ನು ಸ್ಥಾಪಿಸುವ ChargeZone ಗುರಿಗೂ ಈ ಸಹಭಾಗಿತ್ವ ನೆರವಾಗಲಿದೆ ಎಂದು ಸಂಸ್ಥೆಗಳು ತಿಳಿಸಿವೆ.
Paytm ವಕ್ತಾರರು ಮಾತನಾಡಿ, QR ಆಧಾರಿತ ಪಾವತಿ ವ್ಯವಸ್ಥೆಯ ಅನುಕೂಲತೆಯನ್ನು ಇವಿ ಚಾರ್ಜಿಂಗ್ ಕ್ಷೇತ್ರಕ್ಕೂ ವಿಸ್ತರಿಸಲಾಗುತ್ತಿದೆ ಎಂದರು.
ChargeZone ಸಂಸ್ಥಾಪಕ ಹಾಗೂ ಸಿಇಒ ಕಾರ್ತಿಕೇಯ ಹರಿಯಾಣಿ ಮಾತನಾಡಿ, ಚಾರ್ಜಿಂಗ್ ಕೇಂದ್ರಗಳ ಲಭ್ಯತೆಯ ಜೊತೆಗೆ ಪಾವತಿ ಪ್ರಕ್ರಿಯೆಯನ್ನೂ ಸರಳಗೊಳಿಸುವುದು ಮುಖ್ಯವಾಗಿದೆ. Paytm ಸಹಭಾಗಿತ್ವವು ಗ್ರಾಹಕರಿಗೆ ಸುಲಭ ಹಾಗೂ ಪರಿಚಿತ ಪಾವತಿ ಅನುಭವ ನೀಡಲಿದೆ ಎಂದು ತಿಳಿಸಿದರು.
