ಹಾಸನ : ಚುಟುಕು ಸಾಹಿತ್ಯ ಪರಿಷತ್ತು, ಚನ್ನರಾಯಪಟ್ಟಣ ತಾಲ್ಲೂಕು ಘಟಕ,ಹಾಗೂ ಶ್ರೀ ಸಿದ್ದಿ ವಿನಾಯಕ ಸೇವಾ ಸಮಿತಿ ಚನ್ನರಾಯಪಟ್ಟಣ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ದಸರಾ ಕವಿಗೋಷ್ಠಿ ಮತ್ತು ಸಾಹಿತಿ ದಿನೇಶ್ ಡಿ. ಎಸ್. ಅವರ ೨ನೇ ಕವನ ಸಂಕಲನ ‘ಕಾವ್ಯ ಕೊಳಲು’ ಲೋಕಾರ್ಪಣಾ ಕಾರ್ಯಕ್ರಮವನ್ನು ಅಕ್ಟೋಬರ್ 25ರಂದು ಏರ್ಪಡಿಸಲಾಗಿದೆ ಎಂದು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ ನಂ ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಕಾವ್ಯ ವಿಮರ್ಶೆ, ವಿಚಾರ ಸಂಕೀರ್ಣ, ಚುಟುಕು ಹಾಗೂ ಕವನ ವಾಚನ, ನೃತ್ಯ ಹಾಗೂ ಸುಪ್ರಸಿದ್ದ ಗಾಯಕರಿಂದ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕವಿಗೋಷ್ಠಿಯಲ್ಲಿ, ಗೀತಗಾಯನ ಹಾಗೂ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವವರು ದಿನೇಶ್ ಕಾರ್ಯದರ್ಶಿ :9008131272,ಶಂಕರಾಚಾರ್ ಅಧ್ಯಕ್ಷರು :9740133827 ಈ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ತಿಳಿಸಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಿರಿ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನೂ ಗೌರವಿಸಲಾಗುವುದು ಎಂದು ಚನ್ನರಾಯಪಟ್ಟಣ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಕರಾಚಾರ್ ತಿಳಿಸಿದ್ದಾರೆ.
