ತುಮಕೂರು:ದುಡಿಯುವ ವರ್ಗಗಳಿಗೆ ರಾಜಕೀಯ ಶಕ್ತಿ ತುಂಬಬೇಕು. ಅವರ ಸಮಸ್ಯೆಗಳಿಗೆ ಜೆಡಿಎಸ್ ಧ್ವನಿಯಾಗಿ ಸ್ಪಂದಿಸಬೇಕು.ಈ ಆಶಯದಲ್ಲಿ ಕಾರ್ಮಿಕರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರ ಸಂಘಟನಾ ಸಾಮಥ್ಯ ಬೆಳೆಸಬೇಕು ಎಂದು ಜಿಲ್ಲಾ ಜೆಡಿಎಸ್ಅಧ್ಯಕ್ಷ ಹೆಚ್.ನಿಂಗಪ್ಪ ಹೇಳಿದರು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಮಿಕ ಘಟಕ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆ ಆಗುತ್ತಿದೆ. ಕಾರ್ಮಿಕ ವರ್ಗ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಅವರನ್ನು ಜೆಡಿಎಸ್ಗೆ ಕರೆತಂದು, ಅವರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಲು ಪಕ್ಷದ ಕಾರ್ಮಿಕ ಘಟಕ ಕಾಳಜಿ ವಹಿಸಬೇಕು ಎಂದು ಸಲಹೆ ಮಾಡಿದರು.
ಈ ವೇಳೆ ಜಿಲ್ಲಾ ಕಾರ್ಮಿಕಘಟಕ ಕಾರ್ಯದರ್ಶಿಯನ್ನಾಗಿ ಕೋಳಿಹಳ್ಳಿ ಅಶ್ವತ್ಥ್ ಹಾಗೂ ಗ್ರಾಮಾಂತರಘಟಕ ಅಧ್ಯಕ್ಷರನ್ನಾಗಿ ಕಾಂತರಾಜ್ ಅವರನ್ನು ಜಿಲ್ಲಾಧ್ಯಕ್ಷ ಹೆಚ್.ನಿಂಗಪ್ಪ ನೇಮಕ ಮಾಡಿ, ನೇಮಕಾತಿ ಪತ್ರ ನೀಡಿ ಶುಭಕೋರಿದರು.
ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಎಸ್.ಮೋಹನ್ಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಕಾರ್ಮಿಕರು ದುಡಿಯುವ ಜನರನ್ನು ಸಂಘಟನೆ ಮಾಡಿ ಅವರನ್ನು ರಾಜಕೀಯವಾಗಿ ಬೆಳೆಸಬೇಕು ಈ ಹಿಂದೆ ದಿವಂಗತ ಲಕ್ಷ್ಮೀನರಸಿಂಹಯ್ಯ,ಸಿ.ಎನ್.ಭಾಸ್ಕರಪ್ಪರವರಂತಹ ಮುಖಂಡರು ಎಲ್ಲಾ ಸ್ತರದ ಜನರನ್ನು ಸಂಘಟನೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತಂದಿದ್ದರು,ಈಗ ಹೆಚ್.ಡಿ.ಕುಮಾರಸ್ವಾಮಿರವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದು ಶ್ರಮಿಕರು,ಕಾರ್ಮಿಕರು,ಬೀದಿ ಬದಿ ವ್ಯಾಪಾರಿಗಳು ಹೆಚ್ಚು ಹೆಚ್ಚಾಗಿ ಜೆಡಿಎಸ್ ಗೆ ಬರಬೇಕು ಈ ನಿಟ್ಟಿನಲ್ಲಿ ನಾವುಗಳು ನಗರದಲ್ಲಿ ಸಂಘಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
– ಚಂದ್ರಚೂಡ ಕೆ.ಬಿ.
