ಹಾಸನದ ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ ನಡೆದ ‘ಎಲೈಟ್ ಸೈನ್ಸ್ ಸ್ಪೆಕ್ಟ್ರಾ-2026′ ಕಾರ್ಯಕ್ರಮವನ್ನು ದಿನಾಂಕ 20ನೇ ನವೆಂಬರ್ 2026ರಂದು ಕೆ.ಪಿ.ಎಸ್. ಶಾಲೆ, ಅರಸೀಕೆರೆ ಇಲ್ಲಿನ ಶಿಕ್ಷಣ ತಜ್ಞರಾದ ಡಾ. ಸಚ್ಚಿದಾನಂದರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀಯುತರು ಶಾಲೆಯನ್ನು ಹಾಗೂ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿಜ್ಞಾನ ವಸ್ತುಪ್ರದರ್ಶನವೆಂಬುದು ವಿದ್ಯಾರ್ಥಿಗಳು ತಾವು ಕಲಿತ ಜ್ಞಾನವನ್ನು ಬಳಸಿ ಸ್ವಂತ ಮಾದರಿಗಳನ್ನು ಮತ್ತು ಪ್ರಯೋಗಗಳನ್ನು ತಯಾರಿಸಿ ಪ್ರದರ್ಶಿಸುವ ಶೈಕ್ಷಣಿಕ ಸಹಪಠ್ಯ ಚಟುವಟಿಕೆಯಾಗಿದೆ. ನಮ್ಮ ದೇಶ ಸಾಧಿಸಿರುವ ವಿಜ್ಞಾನ, ತಂತ್ರಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರಗಳ ಸಾಧನೆಗಳನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಶಾಲೆಯ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಪಿ. ಕಿರಣ್ ಗೌಡರವರು ಮಾತನಾಡಿ, ವಿಜ್ಞಾನವು ವಿದ್ಯಾರ್ಥಿಗಳಲ್ಲಿ ಆಸಕ್ತಿ, ಕುತೂಹಲ, ಕೌಶಲ್ಯ, ಸಮಯಪ್ರಜ್ಞೆ, ಜೀವನ ಶೈಲಿ ಹಾಗೂ ಪ್ರಶ್ನಾತ್ಮಕ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿ ವೇಗವಾಗಿ ಹರಡುತ್ತಿರುವ ಎ.ಐ. ತಂತ್ರಜ್ಞಾನವನ್ನು ಒಳ್ಳೆಯ ನಿಟ್ಟಿನಲ್ಲಿ ಬಳಸಿದಾಗ ದೇಶದ ಭವಿಷ್ಯ ಉಜ್ವಲವಾಗಿ ಬೆಳಗುವುದರಲ್ಲಿ ಅನುಮಾನವಿಲ್ಲ ಎಂದರು.
ಈ ದಿನದ ಅತಿಥಿಗಳಾದ, ಶಾಲೆಯ ಖಜಾಂಚಿಗಳಾದ ಶ್ರೀಮತಿ ಸಪ್ನ ಕಿರಣ್ರವರು ಮಾತನಾಡಿ, ಶಾಲೆಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನಗಳನ್ನು ಏರ್ಪಡಿಸುವುದರಿಂದ ಮಕ್ಕಳು ಕಲ್ಪನಾಶಕ್ತಿ, ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪೋಷಕರು ಈ ನಿಟ್ಟಿನಲ್ಲಿ ಮಕ್ಕಳಿಗೆ ಸಹಕಾರ ನೀಡಬೇಕೆಂದು ತಿಳಿಸಿದರು.
ಶಾಲೆಯಲ್ಲಿ ಏರ್ಪಡಿಸಲಾದ ಎಲೈಟ್ ಸ್ಪೆಕ್ಟ್ರಾ-2026 ಕಾರ್ಯಕ್ರಮದಲ್ಲಿ ಪ್ರಮುಖವಾಗಿ ವಿವಿಧ ಸೈನ್ಸ್ ಜೋನ್, ಕಂಪ್ಯೂಟರ್ ಜೋನ್, ಎಐ ಗೆ ಸಂಬಂಧಿಸಿದಂತೆ ರೊಬೋಟಿಕ್ ಜೋನ್, ಮ್ಯಾನ್ಸ್ ಜೋನ್, ಆರ್ಟ್ ಗ್ಯಾಲರಿ, ಕ್ರಾಫ್ಟ್ ಗ್ಯಾಲರಿ, ಟೆರಾರಿಯಮ್-ಪರಿಸರ ಸಂರಕ್ಷಣೆ (ಮಿನಿಯೇಚರ್ ಆರ್ಟ್), ಸೋಷಿಯಲ್ ಜೋನ್, ಗೇಮ್ ಜೋನ್ ಹಾಗೂ ಫುಡ್ ಜೋನ್ ಎಂಬಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸುಮಾರು 500 ಮಾದರಿಗಳನ್ನು ಪ್ರದರ್ಶಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ಕೆ.ಎಂ. ನಾಗರಾಜು, ಪ್ರಾಂಶುಪಾಲರು, ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು, ಪೋಷಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
