ಹಾಸನ: ಶ್ರೀಕ್ಷೇತ್ರ ಸುತ್ತೂರು ಮಠದ ಜೆಎಸ್ಎಸ್ ಸಂಸ್ಥೆಗಳ ಸಹಾಯಕ ಆಡಳಿತಾಧಿಕಾರಿ ಶರಣ ಜಿ.ಎಲ್. ತ್ರಿಪುರಾಂತಕ ಅವರ ತಂದೆ ಹಾಗೂ ಟಿ. ನರಸೀಪುರದ ಮಾದಾಪುರ ಗ್ರಾಮದ ವಿದ್ಯೋದಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಜಿ. ಲಿಂಗಪ್ಪ (82) ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ ಶರಣೆ ಜಯಮ್ಮ, ಪುತ್ರರಾದ ಟಿ. ನರಸೀಪುರದ ಜೆಎಸ್ಎಸ್ ಸಭಾಭವನದ ಜಿ.ಎಲ್. ಯೋಗೇಶ್ ಹಾಗೂ ಜಿ.ಎಲ್. ಉಮೇಶ್, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಸ್ವಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಹರಗುರು ಚರಮೂರ್ತಿಗಳು, ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಶಿವಕುಮಾರಸ್ವಾಮಿಗಳು, ಆಡಳಿತಾಧಿಕಾರಿ ಉದಯಶಂಕರ್, ಸಹಾಯಕ ಸಂಯೋಜಕ ವೀರಭದ್ರಯ್ಯ, ಮುಖ್ಯ ಶಿಕ್ಷಕ ಜಿ.ಎಂ. ಷಡಾಕ್ಷರಿ ಶಿವಸ್ವಾಮಿ, ಶಿವರಾತ್ರೀಶ್ವರ ಬಳಗದ ಅಧ್ಯಕ್ಷ ಬಿ.ಆರ್. ಪಂಚಾಕ್ಷರಿ, ಸದಸ್ಯರಾದ ಪರಶಿವಮೂರ್ತಿ, ಯೋಗೇಶ್, ಮಹೇಶ್, ಕುಮಾರ್ ಸೇರಿದಂತೆ ಹಲವರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
– ಕುಮಾರಸ್ವಾಮಿ ಎಂ.ಎನ್.
