ಹೊಳೆನರಸೀಪುರ, ಮೇ 24: ಪ್ರಸಿದ್ಧ ನಾಟಕಕಾರ ದಿವಂಗತ ಬಿ. ಪುಟ್ಟಸ್ವಾಮಯ್ಯ ಅವರ ಜನ್ಮದಿನದ ಅಂಗವಾಗಿ ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ವತಿಯಿಂದ ರಾಜ್ಯ ಮಟ್ಟದ ರಂಗಗೀತೆ ಗಾಯನ ಮತ್ತು ಅವರ ಬದುಕು-ಬರಹ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಹೊಳೆನರಸೀಪುರ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ರಾಮೇನಹಳ್ಳಿ ಪುಟ್ಟಸ್ವಾಮಿಗೌಡರು ಹಾಗೂ ಆರ್.ಕೆ. ಕದಂಬ ಸೈನ್ಯ ಹೊಳೆನರಸೀಪುರ ತಾಲ್ಲೂಕು ಅಧ್ಯಕ್ಷರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಬಿ. ಪುಟ್ಟಸ್ವಾಮಯ್ಯ ಅವರ ಸಾಹಿತ್ಯ, ರಂಗಭೂಮಿ ಸೇವೆ ಹಾಗೂ ಕನ್ನಡ ರಂಗಸಂಸ್ಕೃತಿಗೆ ನೀಡಿದ ಕೊಡುಗೆ ಕುರಿತು ಉಪನ್ಯಾಸಗಳು ನಡೆಯಲಿವೆ. ಜೊತೆಗೆ ರಾಜ್ಯಮಟ್ಟದ ರಂಗಗೀತೆ ಗಾಯನ ಸ್ಪರ್ಧೆಗೂ ವೇದಿಕೆ ಕಲ್ಪಿಸಲಾಗಿದೆ.
ರಂಗಗೀತೆ ಗಾಯನದಲ್ಲಿ ಭಾಗವಹಿಸಲು ಇಚ್ಛಿಸುವ ಕಲಾವಿದರು ತಮ್ಮ ಹೆಸರನ್ನು ಮಧು ನಾಯ್ಕ ಲಂಬಾಣಿ, ರಾಜ್ಯಾಧ್ಯಕ್ಷರು (ಮೊ: 9902992912) ಅವರಿಗೆ ಮುಂಚಿತವಾಗಿ ಕಳುಹಿಸಲು ಸಂಘಟಕರು ಕೋರಿದ್ದಾರೆ.
ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಪರಂಪರೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
