ನವದೆಹಲಿ, ಮೇ 25: India ಮೊದಲ ಬಾರಿಗೆ ಅಧಿಕೃತ ಫ್ರೀಡೈವಿಂಗ್ ತಂಡವನ್ನು ವಿಶ್ವ ಚಾಂಪಿಯನ್ಶಿಪ್ಗೆ ಕಳುಹಿಸುತ್ತಿದ್ದು, ಜೂನ್ 2, 2026ರಿಂದ ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆಯಲಿರುವ “World Apnea Pool Championship”ನಲ್ಲಿ ಭಾರತೀಯ ಅಥ್ಲೀಟ್ಗಳು ಭಾಗವಹಿಸಲಿದ್ದಾರೆ.
ಭಾರತೀಯ ತಂಡದಲ್ಲಿ ಅರ್ಚನಾ ತಿಯಾಗರಾಜನ್, ಅಕ್ಷಯ್ ಥಟ್ಟೆ ಹಾಗೂ ವಚನ್ ಎಚ್. ಯು. ಸ್ಥಾನ ಪಡೆದಿದ್ದಾರೆ.
ಫ್ರೀಡೈವಿಂಗ್ ಎನ್ನುವುದು ಉಸಿರನ್ನು ಹಿಡಿದು ನೀರಿನೊಳಗೆ ನಡೆಯುವ ಕ್ರೀಡೆಯಾಗಿದ್ದು, ಇದರಲ್ಲಿ ಪೂಲ್ ಮತ್ತು ಡೆಪ್ತ್ ವಿಭಾಗಗಳ ಸ್ಪರ್ಧೆಗಳು ಸೇರಿವೆ. “World Apnea Pool Championship” ಸ್ಪರ್ಧೆಯನ್ನು AIDA International ಆಯೋಜಿಸುತ್ತದೆ.
2025ರಲ್ಲಿ ಜಪಾನ್ನ ವಕಯಾಮಾದಲ್ಲಿ ನಡೆದ 34ನೇ AIDA ಫ್ರೀಡೈವಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವ ಮೂಲಕ ಅರ್ಚನಾ ತಿಯಾಗರಾಜನ್ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡ ಮೊದಲ ಭಾರತೀಯರಾಗಿದ್ದರು. ಅವರು ವಿವಿಧ ಪೂಲ್ ವಿಭಾಗಗಳಲ್ಲಿ ನಾಲ್ಕು ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದ್ದರು.
ಅರ್ಚನಾ ತಿಯಾಗರಾಜನ್ 11 ಬಾರಿ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಸಾಧಕಿ ಆಗಿದ್ದು, 2025ರ ಆಗಸ್ಟ್ನಲ್ಲಿ ಸ್ಪರ್ಧಾತ್ಮಕ ಫ್ರೀಡೈವಿಂಗ್ನಲ್ಲಿ 40 ಮೀಟರ್ ಗಡಿ ದಾಟಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಅಕ್ಷಯ್ ಥಟ್ಟೆ ಭಾರತದಲ್ಲಿನ ಮೊದಲ ಫ್ರೀಡೈವಿಂಗ್ ಇನ್ಸ್ಟ್ರಕ್ಟರ್ ಟ್ರೈನರ್ ಆಗಿದ್ದು, ನಾಲ್ಕು ಬಾರಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ವಚನ್ ಎಚ್. ಯು. (ವಚನ್ ಗೌಡ) ವೃತ್ತಿಯಲ್ಲಿ ವಕೀಲರಾಗಿದ್ದು, ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.
2026ರಲ್ಲಿ Freediving Association of India ಸ್ಥಾಪನೆಯಾಗಿದ್ದು, ಮಾರ್ಚ್ 2026ರಲ್ಲಿ AIDA International ಸಂಸ್ಥೆಯ Observer Member ಸ್ಥಾನಮಾನ ಪಡೆದಿದೆ. ಭಾರತೀಯ ಫ್ರೀಡೈವರ್ಗಳಿಗೆ ಜಾಗತಿಕ ಪ್ರತಿನಿಧಿತ್ವ ಒದಗಿಸುವ ಉದ್ದೇಶದಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
