ಐಪಿಎಲ್ 2026ರ ಪಂದ್ಯಾವಳಿಗಳು ಭರದಿಂದ ಸಾಗುತ್ತಿರುವ ಬೆನ್ನಲ್ಲೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಟಗಾರರು ಮತ್ತು ತಂಡದ ಅಧಿಕಾರಿಗಳಿಗೆ ಅತ್ಯಂತ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸುರಕ್ಷತೆ ಮತ್ತು ಭ್ರಷ್ಟಾಚಾರ ತಡೆಗಟ್ಟುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬಿಬಿಸಿಐನ ಈ ದಿಢೀರ್ ಕ್ರಮಕ್ಕೆ ಪ್ರಮುಖ ಕಾರಣಗಳು ಮತ್ತು ಹೊಸ ನಿಯಮಗಳ ವಿವರ ಇಲ್ಲಿದೆ:
ಹೊಸ ನಿಯಮಗಳು ಬರಲು ಕಾರಣಗಳೇನು?
-
ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಹಾವಳಿ: ಯುವ ಆಟಗಾರರು ತಮ್ಮ ವೈಯಕ್ತಿಕ ಸೋಷಿಯಲ್ ಮೀಡಿಯಾ ಖಾತೆಗಳಿಗಾಗಿ ರೀಲ್ಸ್ ಮತ್ತು ವಿಡಿಯೋ ಮಾಡಲು ಹೊರಗಿನ ಇನ್ಫ್ಲುಯೆನ್ಸರ್ಸ್ ಅಥವಾ ಬ್ಲಾಗರ್ಗಳ ಸಹಾಯ ಪಡೆಯುತ್ತಿರುವುದು ಬಿಸಿಸಿಐ ಗಮನಕ್ಕೆ ಬಂದಿದೆ.
-
ಭದ್ರತಾ ಉಲ್ಲಂಘನೆ: ತಂಡದ ಅಭ್ಯಾಸದ ಅವಧಿಯಲ್ಲಿ ಮತ್ತು ಆಟಗಾರರ ಹೋಟೆಲ್ ಕೊಠಡಿಗಳಲ್ಲಿ ಅನಧಿಕೃತವಾಗಿ ವಿಡಿಯೋ ಚಿತ್ರೀಕರಣ ಮಾಡುವುದು ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
-
ಹನಿ ಟ್ರ್ಯಾಪ್ ಭೀತಿ: ಆಟಗಾರರ ಹೋಟೆಲ್ ಕೊಠಡಿಗಳಿಗೆ ಅನಧಿಕೃತ ಅತಿಥಿಗಳು ಬರುವುದನ್ನು ಭ್ರಷ್ಟಾಚಾರ ನಿರೋಧಕ ಘಟಕ (ACU) ಗಂಭೀರವಾಗಿ ಪರಿಗಣಿಸಿದೆ. ಇದು ‘ಹನಿ ಟ್ರ್ಯಾಪ್’ಗೆ ದಾರಿಯಾಗಬಹುದು ಎಂದು ಎಚ್ಚರಿಸಿದೆ.
ಬಿಬಿಸಿಐ ಜಾರಿಗೊಳಿಸಿರುವ ಕಟ್ಟುನಿಟ್ಟಿನ ನಿರ್ಬಂಧಗಳು:
-
ಅನಧಿಕೃತ ಅತಿಥಿಗಳಿಗೆ ನಿರ್ಬಂಧ: ಆಟಗಾರರು, ಸಹಾಯಕ ಸಿಬ್ಬಂದಿ ಅಥವಾ ತಂಡದ ಅಧಿಕಾರಿಗಳ ಹೋಟೆಲ್ ಕೊಠಡಿಗಳಿಗೆ ಯಾವುದೇ ಅನಧಿಕೃತ ವ್ಯಕ್ತಿಗಳು ಅಥವಾ ಅತಿಥಿಗಳು ಭೇಟಿ ನೀಡುವಂತಿಲ್ಲ.
-
ಮಾಹಿತಿ ನೀಡುವುದು ಕಡ್ಡಾಯ: ಆಟಗಾರರು ತಾವು ಎಲ್ಲೇ ಹೋದರೂ ಅಥವಾ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೂ ತಂಡದ ಭದ್ರತಾ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು.
-
ಸೋಷಿಯಲ್ ಮೀಡಿಯಾ ಕಂಟೆಂಟ್ ಟೀಮ್ ಕಡಿತ: ತಂಡಗಳು ತಮ್ಮ ಸೋಷಿಯಲ್ ಮೀಡಿಯಾ ಚಟುವಟಿಕೆಗಳಿಗಾಗಿ ನೇಮಿಸಿಕೊಳ್ಳುವ ಕಂಟೆಂಟ್ ಕ್ರಿಯೇಟರ್ಗಳ ಸಂಖ್ಯೆಯನ್ನು ಕಡಿತಗೊಳಿಸಲು ಸೂಚಿಸಲಾಗಿದೆ.
-
ನಿರ್ಬಂಧಿತ ಪ್ರದೇಶಗಳಲ್ಲಿ ಶೂಟಿಂಗ್ ನಿಷೇಧ: ಮೈದಾನದ ಒಳಗೆ ಅಥವಾ ಹೋಟೆಲ್ ಕೊಠಡಿಗಳಲ್ಲಿ ವೈಯಕ್ತಿಕ ಪ್ರಚಾರಕ್ಕಾಗಿ ವಿಡಿಯೋ ಅಥವಾ ಫೋಟೋ ಶೂಟ್ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಯುವ ಆಟಗಾರರಿಗೆ ಎಚ್ಚರಿಕೆ:
ಹಿರಿಯ ಆಟಗಾರರಿಗೆ ನಿಯಮಗಳ ಬಗ್ಗೆ ಅರಿವಿದ್ದರೂ, ಮೊದಲ ಬಾರಿ ಐಪಿಎಲ್ ಆಡುತ್ತಿರುವ ಯುವ ಆಟಗಾರರು ಲೈಕ್ಸ್ ಮತ್ತು ಕಾಮೆಂಟ್ಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗುತ್ತಿದ್ದಾರೆ. ಈ ಆಟಗಾರರಲ್ಲಿ ಜಾಗೃತಿ ಮೂಡಿಸಲು ಫ್ರಾಂಚೈಸಿಗಳಿಗೆ ಸೂಚನೆ ನೀಡಲಾಗಿದೆ. ನಿಯಮಗಳನ್ನು ಉಲ್ಲಂಘಿಸುವ ಆಟಗಾರರು ತಂಡದ ಮಾಲೀಕರಿಗೆ ಎಷ್ಟೇ ಹತ್ತಿರವಿದ್ದರೂ, ಬಿಸಿಸಿಐ ಶಿಸ್ತು ಕ್ರಮ ಕೈಗೊಳ್ಳುವುದು ಖಚಿತ ಎಂದು ವರದಿಯಾಗಿದೆ.
