ಅಕ್ಕಿ ಹೆಬ್ಬಾಳು ಗ್ರಾಮದಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ
ಕೆ. ಆರ್.ಪೇಟೆ: ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮತ್ತು ಜಿಲ್ಲಾ ಜಾಗೃತ ಸಮಿತಿ, ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಮನೆಗೊಂದು ಗ್ರಂಥಾಲಯ ಅಭಿಯಾನದಡಿ ಜುಲೈ ೧೯, ೨೦೨೬ ರ ಭಾನುವಾರ ಬೆಳಿಗ್ಗೆ ೧೦:೦೦ ಗಂಟೆಗೆ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಮೊದಲನೇ ಕಾರ್ಯಕ್ರಮವು ಲೇಖಕ ಶ್ರೀ ಮೊಹಮ್ಮದ್ ಅಜರುದ್ದೀನ್ ಅವರ ನಿವಾಸದಲ್ಲಿ ಬೆ.10ಕ್ಕೆ ನಡೆಯಲ್ಲಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ ಅವರು ಅಂದು ಅಕ್ಕಿಹೆಬ್ಬಾಳುನಲ್ಲಿ ಮೂರು ಮತ್ತು ಕೆ.ಆರ್.ಪೇಟೆಯಲ್ಲಿ ಎರಡು ಒಟ್ಟು ಐದು ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಂಡ್ಯ ಜಿಲ್ಲಾ ಜಾಗೃತ ಸಮಿತಿಯ ಸಂಚಾಲಕರು ಶ್ರೀ ಕಾರಸವಾಡಿ ಮಹಾದೇವ ಅವರು ಈ ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸುವರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು, ಕನ್ನಡ ಪ್ರಾದ್ಯಾಪಕರು ಡಾ. ಕುಶಾಲ್ ಬರಗೂರು ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಕವಿ ಮೊಹಮ್ಮದ್ ಅಜರುದ್ದೀನ್ ಮನೆಯ ಸಮಾರಂಭದಲ್ಲಿ ಎಸ್.ಡಿ.ಎಂ ಕಾಲೇಜಿನ ಕನ್ನಡ ಅಧ್ಯಾಪಕರಾದ ಪ್ರೊ. ಮಾರುತಿ ಪ್ರಸನ್ನ ಅವರು ‘ನಾ ಮೆಚ್ಚಿದ ಪುಸ್ತಕ – ಹೇಮಾವತಿ ತೀರ’ (ಲೇಖಕರು ಮೊಹಮ್ಮದ್ ಅಜರುದ್ದೀನ್) ಕೃತಿ ಕುರಿತು ಮಾತನಾಡುವರು. ,ಶ್ರೀ ಕೆ.ಎಸ್ ಸೋಮಶೇಖರ್, ಅಧ್ಯಕ್ಷರು, ಸುಜನ ಪ್ರತಿಷ್ಠಾನ, ಕೆ.ಆರ್. ಪೇಟೆ, ಶ್ರೀ ಕತ್ತರಘಟ್ಟ ವಾಸು, ಸದಸ್ಯರು ಜಿಲ್ಲಾ ಜಾಗೃತ ಸಮಿತಿ, ಶ್ರೀ ಪೂರ್ಣಚಂದ್ರ ತೇಜಸ್ವಿ, ಕೆ.ಆರ್.ಪೇಟೆ ತಾ. ಕ.ಸಾ.ಪ. ಹಾಗೂ ಶ್ರೀ ಬಲ್ಲೇನಹಳ್ಳಿ ಮಂಜುನಾಥ್, ಸಾಹಿತಿಗಳು ಕೆ.ಆರ್. ಪೇಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
2ನೇ ಕಾರ್ಯಕ್ರಮವು 11.05ಕ್ಕೆ ಸ್ಥಳೀಯ ಲೋಕಯಾನ ಕಲ್ಚರಲ್ ಫೌಂಡೇಶನ್ ಕಛೇರಿ ಆವರಣದಲ್ಲಿ ನಾ ಮೆಚ್ಚಿದ ಪುಸ್ತಕ ಕುವೆಂಪು ವಿರಚಿತ ಸ್ವಾಮಿ ವಿವೇಕಾನಂದ ಕುರಿತು ಶ್ರೀ ಚಿಕ್ಕಸ್ವಾಮಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಂಡ್ಯ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಶ್ರೀ ಮಾರೇಹಳ್ಳಿ ಲೋಕೇಶ್, ಮಕ್ಕಳ ಸಾಹಿತಿಗಳು, ಕೆ.ಆರ್. ಪೇಟೆ, ಶ್ರೀ ಶಿವರಾಮನಾಯ್ಕ, ಅಧ್ಯಕ್ಷರು, ಅಕ್ಕಿ ಹೆಬ್ಬಾಳು ರೈತ ಉತ್ಪಾದಕರ ಕಂಪನಿ ಲಿ.
ಶ್ರೀ ವಾಸು ಆರ್. ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್, ಅಕ್ಕಿಹೆಬ್ಬಾಳು ಭಾಗವಹಿಸುವರು.
12.05ಕ್ಕೆ ಶ್ರೀ ಅಭಿನಂದನ್ ಕೆ.ಎಂ. ಕನ್ನಡ ಉಪನ್ಯಾಸಕರು, ಎಂಐಟಿ ಕಾಲೇಜು, ಮೈಸೂರು ಇವರ ಅಕ್ಕಿಹೆಬ್ಬಾಳು ನಿವಾಸದಲ್ಲಿ ನಡೆಯುವ 3ನೇ ಕಾರ್ಯಕ್ರಮದಲ್ಲಿ ನಾ ಮೆಚ್ಚಿದ ಪುಸ್ತಕ ಗಾಂಧಿ ಕಥನಾ ಕುರಿತು
ಕತ್ತರಘಟ್ಟ ವಾಸು, ಸದಸ್ಯರು, ಜಿಲ್ಲಾ ಜಾಗೃತ ಸಮಿತಿ, ಮಂಡ್ಯ ಇವರು ಮಾತನಾಡುವರು.
ಮುಖ್ಯ ಅತಿಥಿಗಳಾಗಿ ಶ್ರೀ ಎಂ.ಕೆ. ಹರಿಚರಣ ತಿಲಕ್, ಮಾಜಿ ಅಧ್ಯಕ್ಷರು, ತಾ. ಕ.ಸಾ.ಪ.,
ಕೆ. ಆರ್. ಪೇಟಿ, ಶ್ರೀ ಗೊರೂರು ಅನಂತರಾಜು, ಸಾಹಿತಿಗಳು ಹಾಗೂ ಸಂಚಾಲಕರು, ಜಿಲ್ಲಾ ಜಾಗೃತಿ ಸಮಿತಿ ಹಾಸನ ಜಿಲ್ಲೆ ಭಾಗವಹಿಸುವರು. ಸಾಹಿತ್ಯಾಸಕ್ತರಲ್ಲಿ ಓದುವ ಸಂಸ್ಕೃತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಸಾಹಿತ್ಯ ಕಾರ್ಯಕ್ರಮಗಳು ಮಹತ್ವದ ಹೆಜ್ಜೆಯಾಗಿದೆ.
ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಯುವ ಸಾಹಿತಿ ಶ್ರೀ ಮೊಹಮ್ಮದ್ ಅಜರುದ್ದೀನ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
