ಕೆ.ಆರ್.ಪೇಟೆ: ಪಟ್ಟಣದ ತಾಲ್ಲೂಕು ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥ ಪಾಲಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ಅವರ ಹುಟ್ಟು ಹಬ್ಬದ ದಿನವನ್ನು ದೇಶಾದ್ಯಂತ ಗ್ರಂಥ ಪಾಲಕರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಕೆ.ಆರ್.ಪೇಟೆ ಪಟ್ಟಣದ ಹಳೆ ಎಲ್.ಐ.ಸಿ ಕಟ್ಟಡದಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಡಾ.ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪತ್ರಕರ್ತರಾದ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್ ಅವರಯ ಕಾರ್ಯಕ್ರಮ ಕುರಿತು ಮಾತನಾಡಿ ಗ್ರಂಥಾಲಯಗಳು ಜ್ಞಾನದ ದೇಗುಲಗಳು.ಈ ದೇಗುಲಗಳನ್ನು ವ್ಯವಸ್ಥಿತವಾಗಿಪಾಲಿಸಿ ಓದುಗರಿಗೆ ಮಾರ್ಗದರ್ಶನ ನೀಡುವವರು ಗ್ರಂಥಪಾಲಕರು.ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಲು ರಾಷ್ಟ್ರೀಯ ಗ್ರಂಥಪಾಲಕರ ದಿನ ಸಹಕಾರಿಯಾಗಿದೆ .ಡಾ. ಎಸ್.ಆರ್. ರಂಗನಾಥನ್ ಅವರು ಭಾರತದ ಗ್ರಂಥಾಲಯ ವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಅವರು ಮಂಡಿಸಿದ ‘ಗ್ರಂಥಾಲಯ ವಿಜ್ಞಾನದ ಐದು ಸೂತ್ರಗಳು’ ಜಗತ್ಪ್ರಸಿದ್ಧ.ಭಾರತದಲ್ಲಿ ಉನ್ನತ ಗ್ರಂಥಾಲಯ ಶಿಕ್ಷಣ ಹಾಗೂ ವರ್ಗೀಕರಣ ಪದ್ಧತಿಯನ್ನು ಪರಿಚಯಿಸಿದರು.ಗ್ರಂಥಪಾಲಕರ ಪಾತ್ರ ಮತ್ತು ಮಹತ್ವಪುಸ್ತಕಗಳನ್ನು ಸೂಕ್ತ ಕ್ರಮದಲ್ಲಿ ಜೋಡಿಸಿ ಓದುಗರ ಸಮಯ ಉಳಿಸುವುದು.ಡಿಜಿಟಲ್ ಯುಗದಲ್ಲೂ ಮಾಹಿತಿಯ ಸರಿಯಾದ ಮೂಲವನ್ನು ಒದಗಿಸುವುದು.ವಿದ್ಯಾರ್ಥಿಗಳಲ್ಲಿ ಮತ್ತು ಸಮಾಜದಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವುದು. ಗ್ರಂಥಪಾಲಕರು ಕೇವಲ ಪುಸ್ತಕ ರಕ್ಷಕರಲ್ಲ, ಅವರು ಜ್ಞಾನದ ದೀಪಸ್ತಂಭಗಳು.
ಗ್ರಂಥಪಾಲಕರ ದಿನವು ನಮಗೆ ಗ್ರಂಥಾಲಯಗಳ ಮೌಲ್ಯವನ್ನು ಮತ್ತು ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ನೆನಪಿಸುತ್ತದೆ ಎಂದರು. ಗ್ರಂಥಪಾಲಕಿ ಹೆಚ್.ಆರ್.ಕಲ್ಪನ, ಗ್ರಂಥಾಲಯ ಸಹಾಯಕ ಚಂದ್ರು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಪತ್ರಕರ್ತರಾದ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಗ್ರಂಥಾಲಯ ಓದುಗರ ವೇದಿಕೆಯ ಸದಸ್ಯರಾದ ಚರಿತ್ರೆ ಕುಮಾರ್, ಶೀಳನೆರೆಕೊಪ್ಪಲು ಕೆ.ಎಂ.ಮಂಜುನಾಥ್, ಶಿವಕುಮಾರ್, ಆರ್.ಪಿ.ಸ್ಪೂರ್ತಿ ಇತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
