ಕೆ.ಆರ್. ಪೇಟೆ: ತಾಲ್ಲೂಕಿನ ಅಣ್ಣೇಚಾಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷೆಯಾಗಿ ದ್ರಾಕ್ಷಾಯಿಣಿ ಪ್ರಸನ್ನ ಹಾಗೂ ಉಪಾಧ್ಯಕ್ಷೆಯಾಗಿ ಸುಲೋಚನಾ ನಾಗರಾಜು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಹಿಂದಿನ ಅಧ್ಯಕ್ಷೆ ಮಮತಾ ಲೋಕೇಶ್ ಹಾಗೂ ಉಪಾಧ್ಯಕ್ಷೆ ರೇಣುಕಾ ನಾಗರಾಜು ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಗಳಿಗೆ ಇಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ದ್ರಾಕ್ಷಾಯಿಣಿ ಪ್ರಸನ್ನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸುಲೋಚನಾ ನಾಗರಾಜು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು. ಸಂಘದ ಕಾರ್ಯದರ್ಶಿ ಅಂಬುಜ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷೆ ದ್ರಾಕ್ಷಾಯಿಣಿ ಪ್ರಸನ್ನ ಹಾಗೂ ಉಪಾಧ್ಯಕ್ಷೆ ಸುಲೋಚನಾ ನಾಗರಾಜು ಅವರನ್ನು ಹಿರಿಯ ಮುಖಂಡರಾದ ಎ.ಬಿ. ಜವರೇಗೌಡ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಎ.ಬಿ. ನಾಗರಾಜು, ವೈ.ಬಿ. ಶಿವೇಗೌಡ, ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ದೇವರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಜೆ. ಚಂದ್ರಹಾಸ್, ಲೋಕೇಶ್, ಶಿವರಾಜು, ಸಣ್ಣಸ್ವಾಮಣ್ಣ, ಪಟೇಲ್ ಜಗದೀಶ್, ಕೆಂಪಯ್ಯನ ಶಿವಣ್ಣ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂತರಾಜು, ತಮ್ಮಣ್ಣ, ಸಿದ್ದರಾಮು, ಪ್ರಸನ್ನ, ರಾಮಕೃಷ್ಣೇಗೌಡ, ನಂಜುಂಡಸ್ವಾಮಿ, ದಿನೇಶ್, ಶಿವಪ್ಪ, ಗಡ್ಡಪ್ಪನ ನಾಗರಾಜು, ಕಾಯಿ ಮಂಜೇಗೌಡ, ಜೆಸಿಬಿ ಶಂಕರ್, ದುಬೈ ರಾಜೇಶ್ ಹಾಗೂ ದೊಡ್ಡನಿಂಗೇಗೌಡ ಸೇರಿದಂತೆ ಹಲವು ಮುಖಂಡರು ಅಭಿನಂದಿಸಿದರು.
ಸಂಘದ ನಿರ್ದೇಶಕರಾದ ಸುಧಾ, ಜಯಲಕ್ಷ್ಮಿ, ಜಯಮ್ಮ, ಮಮತಾ, ನಾಗಮ್ಮ, ಸುಧಾಮಣಿ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಮಹಿಳಾ ಮುಖಂಡರು ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
– ಶ್ರೀನಿವಾಸ್ ಆರ್.
