ತುಮಕೂರು: ವಿಶ್ವ ಪೋಲಿಯೊ ದಿನದ ಅಂಗವಾಗಿ ನಗರದ ವಿವಿಧ ರೋಟರಿ, ಇನ್ನರ್ ವ್ಹೀಲ್ ಸಂಸ್ಥೆಗಳು ಶನಿವಾರ ನಗರದಲ್ಲಿ ಪಲ್ಸ್ ಪೋಲಿಯೊ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ಹಮ್ಮಿಕೊಂಡಿದ್ದವು. ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಬಿಜಿಎಸ್ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ ಸಾರ್ವಜನಿಕರ ಗಮನ ಸೆಳೆದರು.ವಿವಿಧ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಿಜಿಎಸ್ ವೃತ್ತದಲ್ಲಿ ಜಿಲ್ಲಾ ಆಸ್ಪತ್ರೆಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್ ಪೋಲಿಯೊ ಜಾಥಾಗೆ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಡಾ.ಅಸ್ಗರ್ ಬೇಗ್, ಪ್ರತಿ ವರ್ಷ ಅಕ್ಟೋಬರ್ 24ರಂದು ವಿಶ್ವ ಪೋಲಿಯೊ ದಿನ ಆಚರಿಸಲಾಗುತ್ತದೆ.ಪೋಲಿಯೋ ಎಂಬ ಗಂಭೀರ ಹಾಗೂ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಅದನ್ನು ನಿರ್ಮೂಲನೆ ಮಾಡಲು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಗೌರವಿಸುವುದು ಈ ದಿನದ ಉದ್ದೇಶವಾಗಿದೆ ಎಂದು ಹೇಳಿದರು.
ರೋಟರಿ ಜಿಲ್ಲಾ ಲೆಫ್ಟಿನೆಂಟ್ ಗೌರ್ನರ್ ಬಿಳಿಗಿರೆ ಶಿವಕುಮಾರ್ ಮಾತನಾಡಿ, ಪ್ರಪಂಚದಾದ್ಯAತ ಪೋಲಿಯೊವನ್ನು ನಿರ್ಮೂಲನೆ ಮಾಡಬೇಕು ಎಂದು ಎಲ್ಲಾ ದೇಶಗಳ ಸರ್ಕಾರಗಳು, ಆರೋಗ್ಯ ಸಂಸ್ಥೆಗಳು, ವೈದ್ಯಕೀಯ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ವಿವಿಧರೂಪದಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ತುಮಕೂರಿನಲ್ಲಿ ಎಲ್ಲಾ ರೋಟರಿ ಸಂಸ್ಥೆಗಳು, ಇನ್ನರ್ ವ್ಹೀಲ್ ಸಂಸ್ಥೆಗಳ ಸದಸ್ಯರು ಈ ದಿನದ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಎಲ್ಲಾ ತಾಯಂದಿರು ಮಗು ಹುಟ್ಟಿದಾಗಿನಿಂದ ಐದು ವರ್ಷದವರೆಗೆ ಪ್ರತಿ ವರ್ಷ ತಪ್ಪದೇ ಪೋಲಿಯೋ ಹನಿ ಹಾಕಿಸಬೇಕು ಎಂದು ಮನವಿ ಮಾಡಿದರು.
ರೋಟರಿ ವಲಯ ರಾಜ್ಯಪಾಲೆ ಪ್ರಮೀಳಾ ಶಿವಕುಮಾರ್,ಆಶಾಪ್ರಸನ್ನಕುಮಾರ್, ಸಿ. ನಾಗರಾಜ್ ಭಾಗ್ಯಲಕ್ಷ್ಮಿ ನಾಗರಾಜ್, ಕಿಶೋರ್, ಕೃಷ್ಣಕುಮಾರ್, ಎಸ್. ರಘು, ಚಂದ್ರಶೇಖರ್, ಇನ್ನರ್ ವ್ಹೀಲ್, ತುಮಕೂರು ಅಧ್ಯಕ್ಷೆ ರೇಖಾ ಶಿವಕುಮಾರ್, ಲೀಲಾವತಿ ಅಶೋಕ್, ಪ್ರಿಯದರ್ಶಿನಿ, ಲತಾ, ರೊಟೇರಿಯನ್ಗಳಾದ ಬೆಳ್ಳಿ ಲೋಕೇಶ್, ಟಿ.ಆರ್. ಸದಾಶಿವಯ್ಯ,
ಕಾಂತಿಲಾಲ್ ಹಾಜರಿದ್ದರು.
ಕಾಂತಿಲಾಲ್ ಹಾಜರಿದ್ದರು.
– ಚಂದ್ರಚೂಡ ಕೆ.ಬಿ.
