ಕೆ.ಆರ್.ಪೇಟೆ: ತಾಲೂಕಿನ ಶೀಳನೆರೆ ಹೋಬಳಿಯ ಮುರುಕನಹಳ್ಳಿ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಪೂರ್ಣಿಮಾ ಆನಂದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷರಾದ ಜಗದೀಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು.ಅಧ್ಯಕ್ಷ ಸ್ಥಾನ ಬಯಸಿ ಪೂರ್ಣಿಮಾ ಆನಂದ್ ಹೊರತು ಪಡಿಸಿ ಉಳಿದ ಸದಸ್ಯರಿಂದ ನಾಮಪತ್ರ ಸಲ್ಲಿಕೆ ಯಾಗದ ಕಾರಣ ಅವಿರೋಧ ಆಯ್ಕೆ ನಡೆಯಿತು.
ಚುನಾವಣಾಧಿಕಾರಿಯಾಗಿ ಪಿಡಬ್ಲ್ಯೂಡಿ ಇಲಾಖೆಯ ಮುಖ್ಯ ಅಧಿಕಾರಿ ಬೋರಯ್ಯ,ಸಹ ಚುನಾವಣಾಧಿಕಾರಿಯಾಗಿ ಗ್ರಾ.ಪಂ ಪಿಡಿಓ ರವಿ ಕುಮಾರ್ ಕಾರ್ಯನಿರ್ವಹಿಸಿದರು.
ನೂತನ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ ಆನಂದ್ ಮಾತನಾಡಿ, ಮುರುಕನಹಳ್ಳಿ ನಮ್ಮ ಗ್ರಾ.ಪಂ ಸರ್ವಸದಸ್ಯರ ಸಹಕಾರದಿಂದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಲು ಸಹಕಾರ ನೀಡಿದ್ದು,ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಗ್ರಾ.ಪಂ.ನಲ್ಲಿ ಈ ಹಿಂದೆ ಆಡಳಿತ ನಡೆಸಿದ ಜಗದೀಶ್ ಹಾಗೂ ಅಧಿಕಾರಿ ವರ್ಗದವರ ಸಹಕಾರ ಪಡೆದು ಮುಂದಿನ ದಿನಗಳಲ್ಲಿ ನಮ್ಮ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ ಹಳ್ಳಿಗಳಲ್ಲಿ ಕುಡಿಯುವ ನೀರು, ಸ್ವಚ್ಚತೆ, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು.ಸರಕಾರದಿಂದ ಬರುವ ಅನುದಾನಗಳನ್ನು ಎಲ್ಲಾ ಸದಸ್ಯರಿಗೂ ಸಮಾನವಾಗಿ ಹಂಚಿಕೆ ಮಾಡುವುದರ ಜತೆಗೆ ಜತೆಗೆ ಬ್ರಷ್ಟಾಚಾರ ರಹಿತ ಆಡಳಿತ ನಡೆಸುವುದರ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದರು.
ಇದನ್ನು ಓದಿ: ಕೆ.ಆರ್.ಪೇಟೆ: ತಾಲ್ಲೂಕು ಜಯಕರ್ನಾಟಕ ಸಂಘಟನೆ ಹೋಬಳಿ ಘಟಕಗಳಿಗೆ ಪದಾಧಿಕಾರಿಗಳ ಆಯ್ಕೆ!
ನೂತನ ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬೆಂಬಲಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮುಖಂಡ ಹಿರಳಹಳ್ಳಿ ತಿಂಮೇಗೌಡ, ಮುರುಕನಹಳ್ಳಿಎಂ.ಸಿ ಚಂದ್ರು,ಗ್ರಾ.ಪಂ ಮಾಜಿ ಸದಸ್ಯ ಶಂಕರೇಗೌಡ, ಲಕ್ಷ್ಮಣ್, ಹೆಚ್.ಟಿ ಬಾಬು,ಹೆಚ್.ಬಿ ಸುಂದ್ರೇಶ್, ಹೆಮ್ಮನಹಳ್ಳಿ ಹೆಚ್.ಪಿ ಸತೀಶ್,ಹೆಚ್ ಎಸ್ ಗಂಗೆಗೌಡ,ಅಗಸರಹಳ್ಳಿ ಬಾಬು, ಹೊನ್ನೇನಹಳ್ಳಿ ಈಶ್ವರ್,ಗ್ರಾ.ಪಂ ಉಪಾಧ್ಯಕ್ಷ ನಂದಿನಿ,ಸದಸ್ಯರಾದ ಜಗದೀಶ್.ಧನಂಜಯ್, ಲಲಿತ, ದೇವರಾಜು, ಶೇಖರ್, ಕವಿತ, ಪುಷ್ಪ, ಕುಮಾರ್, ಜಗದೀಶ್, ಶಿವಸಾಗರ್, ಕುಮಾರಸ್ವಾಮಿ, ರುಕ್ಮಿಣಿ, ರತ್ನಮ್ಮ, ಲೀಲಾವತಿ, ಶೋಭ,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

[…] ಇದನ್ನು ಓದಿ: ಕೆ.ಆರ್.ಪೇಟೆ: ತಾಲೂಕಿನ ಶೀಳನೆರೆ ಹೋಬಳಿಯ ಮು… […]