ಕೆ.ಆರ್.ಪೇಟೆ: ಪಟ್ಟಣದ ಸುಭಾಸ್ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜ್ಞಾನ ಮಂದಿರ ನಿರ್ಮಾಣಕ್ಕೆ ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ಆರ್ಥಿಕವಾಗಿ ಸಹಾಯ ನೀಡಿದರು.
ಕೆ ಆರ್ ಪೇಟೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಬಿ.ಕೆ ಸವಿತಾಕ್ಕ ಮಾತನಾಡಿ ಆಧ್ಯಾತ್ಮಿಕ ಚಿಂತನೆ ಮಾನವೀಯ ಮೌಲ್ಯಗಳು ನೈತಿಕ ಶಿಕ್ಷಣ ಹಾಗೂ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಬೆಳೆಸುವ ಉದ್ದೇಶದಿಂದ ಬ್ರಹ್ಮಕುಮಾರಿ ಸಂಸ್ಥೆಯು ದೇಶಾದ್ಯಂತ ಜ್ಞಾನ ಮಂದಿರಗಳನ್ನು ನಿರ್ಮಿಸುತ್ತಿದೆ ಅದರ ಭಾಗವಾಗಿ ಕೆ.ಆರ್.ಪೇಟೆ ಪಟ್ಟಣದ ಸುಭಾಸ್ ನಗರದಲ್ಲಿ ಜ್ಞಾನ ಮಂದಿರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.ಈ ಸತ್ಕಾರ್ಯಕ್ಕೆ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ಶ್ರೀ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ವತಿಯಿಂದ ಆರ್ಥಿಕ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ ಅವರ ಈ ಸಹಾಯಕ್ಕೆ ಬ್ರಹ್ಮಕುಮಾರಿ ಸಂಸ್ಥೆಯ ಸಹೋದರಿಯರು ಪರವಾಗಿ ಧನ್ಯವಾದಗಳು ಎಂದರು.
ಆರ್ಥಿಕ ಧನ ಸಹಾಯ ನೀಡಿದ ಬಳಿಕ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಮಾತನಾಡಿ ಸಮಾಜದಲ್ಲಿ ಇಂತಹ ಆಧ್ಯಾತ್ಮಿಕ ಕೇಂದ್ರಗಳ ಅವಶ್ಯಕತೆ ಇರುವ ಕಾರಣ ಕೈಜೋಡಿಸುವ ಜೋಡಿಸುವುದು ಮಾನವನ ಆದ್ಯ ಕರ್ತವ್ಯ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸುಧಾ ದಿವಾಕರ್,ಹಿರಿಯ ಪತ್ರಕರ್ತ ಕೆ.ಆರ್ ನೀಲಕಂಠ, ತಾಲ್ಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಗಂಜಿಗೆರೆ ಮಹೇಶ್ ಸೇರಿದಂತೆ ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ.
