ಕೆ.ಆರ್.ಪೇಟೆ : ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಸದಸ್ಯರು ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಮನ್ಮುಲ್ ನಿರ್ದೇಶಕ ಡಾಲು ರವಿ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಸಾಧುಗೋನಹಳ್ಳಿ ಗ್ರಾಮದ ಹಾಲು ಉತ್ಪದಕಾರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷೆ ಪದ್ಮ ಅಣ್ಣೆಗೌಡ ಅಧ್ಯಕ್ಷತೆಯಲ್ಲಿ ನಡೆದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯ ರೈತರನ್ನು ಹೈನೋದ್ಯಮ ಉಳಿಸಿಕೊಂಡು ಬರುತ್ತಿದೆ ಯಾವ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಇರುವುದಿಲ್ಲ.ಆ ಗ್ರಾಮಗಳಲ್ಲಿ ರೈತರ ಅಭಿವೃದ್ಧಿ ಸಾಧ್ಯವಿಲ್ಲ.ಜಿಲ್ಲೆಯಲ್ಲಿ ನಮ್ಮ ತಾಲೂಕು ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ,ಇವತ್ತು ನಂದಿನಿ ಹಾಲು ದೇಶದಲ್ಲಿ ಅಷ್ಟೇ ಅಲ್ಲದೆ ಹೊರ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ.
ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.ಮಾರುಕಟ್ಟೆಯಲ್ಲಿ ಗುಣಮಟ್ಟದ ನಂದಿನಿ ಹಾಲು ಹಾಗೂ ಅದರ ಉತ್ಪನ್ನ ಕಡಿಮೆ ಬೆಲೆ ದೊರೆಯುತ್ತವೆ.ಪ್ರತಿಯೊಬ್ಬರು ನಂದಿನಿ ಉತ್ಪನ್ನ ಬಳಸಿದರೆ ಪರೋಕ್ಷವಾಗಿ ರೈತರಿಗೆ ಹೆಚ್ಚು ಬೆಂಬಲ ನೀಡಿದಂತಾಗುತ್ತದೆ.ಹಾಲು ಉತ್ಪಾದಿಸುವ ರೈತರು ನಂದಿನಿ ಹಾಲಿನ ಉತ್ಪನ್ನ ಬಳಸಬೇಕು ಪ್ರತಿಯೊಬ್ಬ ರೈತರು ತಮ್ಮ ರಾಸುಗಳಿಗೆ ಜೀವ ವಿಮೆ ಮಾಡಿಸುವ ಮೂಲಕ ಆಕಸ್ಮಿಕವಾಗಿ ಜರುಗುವ ರಾಸುಗಳ ಜೀವ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು.ಇದಕ್ಕಾಗಿ ಮನ್ಮುಲ್ ವಿಶೇಷ ವಿಮೆ ಯೋಜನೆ ರೂಪಿಸದೆ ರೈತರು ಅರ್ಧ ವಿಮೆ ಪಾವತಿ ಮಾಡಿದರೆ ಉಳಿದ ವಿಮೆ ಹಣವನ್ನು ಮನ್ಮುಲ್ ತುಂಬುತ್ತದೆ ಹಾಗೂ ಸಂಘ ಸದಸ್ಯರಿಗೆ ನಂದಿನಿ ತುಪ್ಪ ನೀಡುತ್ತ ನಿಮ್ಮ ಪರಿಶ್ರಮ ಪಟ್ಟ ನಂದಿನಿ ಪದಾರ್ಥಗಳ್ಳನ್ನ ಮೊದಲು ನೀವು ಖರೀದಿಸಿ ಗ್ರಾಹಕರಿಗೂ ಮಾದರಿಯಾಗಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ಪದ್ಮ ಅಣ್ಣೇಗೌಡ ನನ್ನ ಆಡಳಿತ ಅವಧಿಯಲ್ಲಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸದಸ್ಯರ ಸಹಕಾರದಿಂದ ಸಂಘ ಲಾಭದಾಯಕವಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಹಾಲು ಶೇಖರಣೆ ಹೆಚ್ಚಿಸಲು, ಸದಸ್ಯರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು 2025-26ನೇ ಸಾಲಿನಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಪ್ರಥಮ ಮೂವರು ಉತ್ಪಾದಕರಿಗೆ ಮನ್ಮುಲ್ ನಿರ್ದೇಶಕ ಡಾಲು ರವಿ ಅವರು ಶಾಲು, ಹಾರ, ನಂದಿನಿ ತುಪ್ಪ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಸಂಘಕ್ಕೆ ಗುಣಮಟ್ಟದ ಹಾಲು ಹೆಚ್ಚು ಹಾಕಿ ಇತರ ಸದಸ್ಯರಿಗೆ ಮಾದರಿಯಾದ ನಿಮಗೆ ಅಭಿನಂದನೆಗಳು. ನಿಮ್ಮಂತೆ ಎಲ್ಲರೂ ಹಾಲು ಉತ್ಪಾದನೆ ಹೆಚ್ಚಿಸಬೇಕು ಎಂದು ಶ್ಲಾಘಿಸಿದರು.
ಸಭೆಯಲ್ಲಿ ಮನ್ಮುಲ್ ವಿಸ್ತರಣಾಧಿಕಾರಿಗಳಾದ ನಾಗಪ್ಪ ಅಲ್ಲಿಬಾದಿ ಈ ವರ್ಷದ ಆಯ್ಯವ್ಯಯ ಮತ್ತು ಮುಂದಿನ ವರ್ಷದ ಬಜೆಟ್ನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಪಾರ್ವತಮ್ಮ ರಂಗೇಗೌಡ, ನಿರ್ದೇಶಕರಾದ ಅನಿತ ಮಂಜೇಗೌಡ, ಆಶಾ ಶ್ರೀನಿವಾಸ್, ಚಂದ್ರಕಲಾ ರಾಜು, ಅನ್ನಪೂರ್ಣ ನಂಜೇಗೌಡ, ರೇಖಾ ಲೋಕೇಶ್, ಪ್ರೇಮ ಚಂದ್ರಹಾಸೆಗೌಡ, ಹೇಮ ಮಂಜು, ಗೀತಾ ಶೇಖರೇಗೌಡ, ದಿವ್ಯ ರಾಮೇಗೌಡ, ಗ್ರಾ.ಪಂ ಸದಸ್ಯ ಆರ್ ಕುಮಾರ್, ಯುವ ಮುಖಂಡರಾದ ಉದ್ಯಮಿ ಎಸ್.ಎಂ ಲೋಕೇಶ್,ಸುರೇಶ, ಲೋಕೇಶ್,ಸಂಘದ ಕಾರ್ಯದರ್ಶಿ ಪವಿತ್ರ ತಿಮ್ಮೆಗೌಡ,ಹಾಲು ಪರೀಕ್ಷಕಿ ರಮ್ಯ,ಸಹಾಯಕಿ ಶೋಭ, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
