ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿ ಬಳ್ಳೆಕೆರೆ ಗ್ರಾಮದ ಡೈರಿಗೆ ಹಾಗೂ ಕೆಲ ಮನೆಗಳಿಗೂ ಗ್ರಾಮದ ನೀರುಗಂಟಿ ನೀರು ಬಿಡದೆ ಉಡಾಫೆ ಉತ್ತರ ನೀಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಹಾಲು ಉತ್ಪಾದಕರು ಭಾರತಿಪುರ ಕ್ರಾಸ್ ಗ್ರಾ.ಪಂ ಮುಂದೆ ನೂರಾರು ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು ಹಾಗೂ ಹಾಲು ಉತ್ಪಾದಕರು ಡೈರಿಯ ಹಾಲಿನ ಕ್ಯಾನ್ಗಳನ್ನು ಹಿಡಿದು ನೀರುಗಂಟಿ ವಿರುದ್ಧ ಕಿಡಿಕಾರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಕೆಂಪರಾಜು ಡೈರಿಗೆ ಹಾಗೂ ಮನೆಗಳಿಗೆ ಸರಿಯಾಗಿ ನೀರು ಬಿಡುತ್ತಿಲ್ಲ. ನೀರಿನ ಬಗ್ಗೆ ಕೇಳಿದರೆ ಉಡಾಫೆಯಾಗಿ ಉತ್ತರ ದಿಂದ ಹಾಲು ಉತ್ಪಾದನೆಗೆ ನೀರು ಅತ್ಯವಶ್ಯಕವಾಗಿದ್ದು, ಡೈರಿಗೆ ನೀರು ಸಿಗದೆ ಹಾಲು ಉತ್ಪಾದಕರು ತೊಂದರೆ ಅನುಭವಿಸುತ್ತಿದ್ದಾರೆ.

ಕುಡಿಯಲು ಹಾಲು ಉತ್ಪಾದಿಸುವ ಹಾಗೂ ಸರಬರಾಜ ಮಾಡುವ ಕ್ಯಾನ್,ಪಾತ್ರೆಗಳನ್ನು ತೊಳೆಯಲು, ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದೆ ಪರದಾಡುವಂತಾಗಿದೆ ಎಂದು ಹಾಲು ಉತ್ಪಾದಕರು ಅಳಲು ತೋಡಿಕೊಂಡರು.ಇದೇ ರೀತಿ ಕೆಲ ಮನೆಗಳಿಗೂ ನೀರು ಬಿಡುತ್ತಿಲ್ಲ. ಗ್ರಾಮದ ಜನರು ಕುಡಿಯುವ ನೀರಿಗೂ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಹೇಳಿದರೂ ನೀರುಗಂಟಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ ಬಳಿಕ .ನೀರುಗಂಟಿ ವಿರುದ್ಧ ಕೂಡಲೇ ಕ್ರಮ ಕೈಗೊಂಡು, ಗ್ರಾಮದ ಡೈರಿಗೂ ಹಾಗೂ ಎಲ್ಲಾ ಮನೆಗಳಿಗೂ ಸರಿಯಾಗಿ ನೀರು ಬಿಡುವ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಹಾಗೂ ಹಾಲು ಉತ್ಪಾದಕರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಪುಟ್ಟರಾಜು,ಆಟೋ ಗೋವಿಂದಾ,ವಾಸು,ರಾಖಿ,ಮಹದೇವ್,ನೇತ್ರಾವತಿ,ರವಿಕುಮಾರ್,ಭವ್ಯ,ರೂಪ,ತಯಮ್ಮ,ಮಹದೇವಮ್ಮ,ಲಕ್ಷ್ಮಿ,ಸ್ವಮಣ್ಣ,ರಾಧಾಮಣಿ,ನಾಗೇಶ್,ಮಂಜೇಗೌಡ,ಕೆಂಪರಾಜು,ಮಹೇಶ್,ಗೌರಮ್ಮ,ದೇವಿರಮ್ಮ,ಸುನಂದಾ,ಕುಮಾರಿ,ಭಾಗ್ಯ,ಜಯಮ್ಮ ಶಿವಮ್ಮ ,ನಾಗರತ್ನ, ಗೀತಾ, ಸಾಕಮ್ಮ,ಪಾರ್ವತಮ್ಮ ಸೇರಿದಂತೆ ಗ್ರಾಮಸ್ಥರು ಇದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*
