ಹಾಸನ : ಕನ್ನಡ ಪುಸ್ತಕ ಪ್ರಾಧಿಕಾರದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿ ಎರಡು ಚುಟುಕು ಸಾಹಿತ್ಯ ರಚನಕಾರರಿಗೆ ಪ್ರಶಸ್ತಿ ದೊರೆತಿರುವುದು ಚುಟುಕು ಸಾಹಿತ್ಯ ಕವಿಗಳಿಗೆ ಸಂತೋಷದ ವಿಚಾರವಾಗಿದೆ ಎಂದು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ ನಂ ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾಸನ ಜಿಲ್ಲೆಯವರೇ ಆದ ಚುಟುಕು ಸಾಹಿತಿ ವೀರಭದ್ರೇಗೌಡ ಆಂದಲೇ ಯವರ ಚುಟುಕು ಮುಂಗಾರು ಹನಿಗಳು ಚುಟುಕು ಸಂಕಲನಕ್ಕೆ ಚುಟುಕು ಯುಗಾಚಾರ್ಯ ಡಾ. ಎಂ ಜಿ ಆರ್ ಅರಸ್ ದತ್ತಿ ಪ್ರಶಸ್ತಿ ಹಾಗೂ ಶ್ರೀಮತಿ ವಿ ಸೀತಾಲಕ್ಷ್ಮಿ ವರ್ಮಾ ವಿಟ್ಲ ಅರಮನೆ ಇವರ ಬೊಗಸೆಯೊಳಗಿನ ಚುಟುಕು ಸಾಗರ ಚುಟುಕು ಕೃತಿಗೆ ಡಾ. ಅಂಬಾ ಎಂ ಜಿ ಆರ್ ಅರಸ್ ದತ್ತಿ ಬಹುಮಾನ ದೊರೆತಿರುತ್ತದೆ.

ಈ ಇಬ್ಬರು ಚುಟುಕು ಸಾಹಿತಿಗಳಿಗೆ ಅಭಿನಂದನೆಯನ್ನು ಹಾಸನ ಜಿಲ್ಲೆಯ ಎಲ್ಲ ತಾಲ್ಲೂಕಿನ ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಚುಟುಕು ಸಾಹಿತಿಗಳು ಅಭಿನಂದಿಸಿದ್ದಾರೆ.
