ಕೊರಟಗೆರೆ:-ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕೋಡ್ಲಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಜಿ. ಜಗದೀಶ್ ಅವರನ್ನ ಎಲ್ಲಾ ನಿರ್ದೇಶಕರ ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿದ್ದ ಪ್ರದೀಪ್ಕುಮಾರ್ ಅವರು ಕಾರಣಾಂತರದಿಂದ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಜಗದೀಶ್ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಎಲ್ಲಾ 12 ಜನ ನಿರ್ದೇಶಕರು ಹಾಗೂ ಊರಿನ ಮುಖಂಡರ ನಿರ್ಧಾರದಿಂದ ಕೆ.ಜಿ. ಜಗದೀಶ್ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇನ್ನೂ ಉಪಾಧ್ಯಕ್ಷೆಯಾಗಿ ಸಿ.ಎಸ್. ಲಕ್ಷ್ಮಿ ರಂಗಧಾಮಯ್ಯ ಅವರು ಮುಂದುವರೆಯಲಿದ್ದಾರೆ ಎಂದು ಚನಾವಣಾಧಿಕಾರಿಯಾದ ಇಬ್ರಾಹಿಂ ಖಾಲೀಲ್ ಘೋಷಣೆ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಶ್ವಥ್ನಾರಾಯಣ್ ಮಾತನಾಡಿ ರಾಜ್ಯ ಸರಕಾರದ ಉಪ ಮುಖ್ಯಮಂತ್ರಿಯಾದ ಡಾ.ಜಿ.ಪರಮೇಶ್ವರ್ ಅವರ ಆದೇಶದಂತೆ ಕೋಡ್ಲಹಳ್ಳಿ ಗ್ರಾಮದ ವಿ.ಎಸ್ಎಸ್ಎನ್ ಅಧ್ಯಕ್ಷರಾಗಿ ಕೆ.ಜಿ. ಜಗದೀಶ್ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಿದ್ದು, ಸಹಕಾರ ಸಂಘದ ಅಭಿವೃದ್ದಿಗಾಗಿ ಎಲ್ಲಾ ನಿರ್ದೇಶಕರುಗಳು ಸಹಕಾರ ನೀಡಬೇಕು ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಹನುಮಾನ್ ಮಾತನಾಡಿ ಈ ಹಿಂದೆ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಒಬ್ಬರೆ ನಾಮಪತ್ರ ಸಲ್ಲಿಸಿದ ಹಿನ್ನಲೆ ಕೆ.ಜಿ.ಜಗದೀಶ್ ಅವರು ಮುಂದಿನ ಅವಧಿಗೆ ಆಧ್ಯಕ್ಷರಾಗಿ ಆಯ್ಕೆಯಾಗಿದ್ದು, ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಹಾಗೂ ಎಂಎಲ್ಸಿ ರಾಜೇಂದ್ರ ಅವರ ಮಾರ್ಗದರ್ಶನದಂತೆ ಕೋಡ್ಲಹಳ್ಳಿ ಸಹಕಾರ ಸಂಘದ ಅಭಿವೃದ್ಧಿಗೆ ಜಿಲ್ಲಾ ಸಂಘದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಕೆ.ಜಿ.ಜಗದೀಶ್ ಮಾತನಾಡಿ, ಉಪ ಮುಖ್ಯಮಂತ್ರಿಯಾದ ಡಾ.ಜಿ.ಪರಮೇಶ್ವರ್, ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಹಾಗೂ ಎಂಎಲ್ಸಿ ರಾಜೇಂದ್ರ ಅವರ ಮಾರ್ಗದರ್ಶನದಂತೆ ನಮ್ಮ ಕೋಡ್ಲಹಳ್ಳಿ ಸಹಕಾರ ಸಂಘವನ್ನ ಮಾದರಿ ಸಂಘವನ್ನಾಗಿ ಮಾಡಲಾಗುವುದು, ಗ್ರಾಮೀಣ ಭಾಗದ ರೈತರಿಗೆ ಸರಕಾರದಿಂದ ಬರುವ ಸವಲತ್ತುಗಳನ್ನ ಸಮರ್ಪಕವಾಗಿ ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಬೋರಣ್ಣ, ಸಿಇಒ ಇಬ್ರಾಹಿಂ ಖಾಲೀಲ್, ನಿರ್ದೇಶಕರಾದ ರಾಜಗೋಪಾಲ ರೆಡ್ಡಿ, ಕೆಂಪಣ್ಣ, ಪ್ರದೀಪ್, ಶಿವರಾಜು, ಲಕ್ಷ್ಮೀದೇವಮ್ಮ, ಬಸವರಾಜು, ಬಲರಾಜು, ಮಂಜುನಾಥ್ ಶ್ರೀನಿವಾಸ್ಮೂರ್ತಿ, ಸಿದ್ದಲಿಂಗಪ್ಪ, ಸಿ .ಎಸ್ . ಲಕ್ಷ್ಮಿ ರಂಗಧಾಮಯ್ಯ, ನರಸಿಂಹಮೂರ್ತಿ, ಪಾರ್ವತಮ್ಮ, ಮುಖಂಡರಾದ ಉಮಶಂಕರಾಧ್ಯ, ಶಶಿಕುಮಾರ್, ಸದಶಿವಯ್ಯ, ಚಂದ್ರಶೇಖರ್, ಚಂದ್ರರೆಡ್ಡಿ, ತ್ರೀಯಾಂಬಕರಾಧ್ಯ, ಸುಚಿತ್ಬಾಬು, ರಾಘವೇಂದ್ರ, ನರಸಿಂಹಮೂರ್ತಿ, ಮೂರ್ತಪ್ಪ, ವೆಂಕಟಶಾಮಯ್ಯ, ಸೇರಿದಂತೆ ಇತರರು ಇದ್ದರು.
– ಶ್ರೀನಿವಾಸ್, ಕೊರಟಗೆರೆ.
