ಕೊರಟಗೆರೆ :- ಹೊರವಲಯದ ತೋಟದ ಮನೆಯಲ್ಲಿ ಒಂಟಿ ಇದ್ದ 75 ವರ್ಷದ ವೃದ್ಧೆಯನ್ನ ಕೈ ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಹತ್ಯೆಗೈದು ಚಿನ್ನಾಭರಣ ದೋಚಿ ಪರಾರಿಯಾಗಿರುವ ಭೀಕರ ದುರ್ಘಟನೆ ಮಂಗಳವಾರ ರಾತ್ರಿ ಕೊರಟಗೆರೆ ತಾಲೂಕಿನಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ಸಿಎನ್ ದುರ್ಗಾ ಹೋಬಳಿ
ದಾಸಾಲಕುಂಟೆ ಗ್ರಾಮದ ಲೇಟ್ ತಿಮ್ಮರಾಯಪ್ಪ ಅವರ ಪತ್ನಿ ರತ್ನಮ್ಮ (72) ಕೊಲೆಯಾದ ದುರ್ದೈವಿ. ತೋಟದ ಮನೆಯ ಮುಂಭಾಗ ಒಂಟಿಯಾಗಿ ಕುಳಿತಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಮಂಗಳವಾರ ಸಂಜೆ ಸುಮಾರು 6.30ರ ವೇಳೆಗೆ ತೋಟದ ಮನೆ ಬಳಿ ಇದ್ದ ರತ್ನಮ್ಮ ಅವರ ಕೈಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿ ಬಳಿಕ ಕೊರಳಲ್ಲಿದ್ದ ಮಾಂಗಲ್ಯ ಸರ, ಕಿವಿಯೋಲೆ, ಮೂಗಿನ ನತ್ತು ಸೇರಿದಂತೆ ಚಿನ್ನಾಭರಣಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಕಳೆದ 2-3 ದಿನಗಳಿಂದ ಒಂಟಿ ತೋಟದ ಮನೆಗಳನ್ನು ಗುರಿಯಾಗಿಸಿಕೊಂಡು ಡಕಾಯಿತ ಗುಂಪೊಂದು ಸಂಚರಿಸುತ್ತಿತ್ತು. ಎರಡು ದಿನಗಳ ಹಿಂದೆ ವಕೀಲ ತಿಮ್ಮರಾಜು ಅವರ ತಾಯಿ ಚಿಕ್ಕತಾಯಮ್ಮ ಅವರ ಮೇಲೆ ಕಳ್ಳತನಕ್ಕೆ ಯತ್ನ ನಡೆದಿದ್ದು, ಅವರು ಅದೃಷ್ಟವಶಾತ್ ಪಾರಾಗಿದ್ದರು. ಇದೇ ಮಾದರಿಯಲ್ಲಿ ಮತ್ತೊಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ಮೇಲೂ ಕಳ್ಳತನಕ್ಕೆ ಯತ್ನ ನಡೆದಿದ್ದರೂ ವಿಫಲವಾಗಿತ್ತು ಎಂದು ತಿಳಿದುಬಂದಿದೆ.
*ಉಡುತ್ತೆ (ಅಳಿಲು) ಒಡೆಯುವ ನೆಪದಲ್ಲಿ ಡಕಾಯಿತರ ಗುಂಪು ಅಲೆದಾಟ*
ತೋಟದ ಉಡುತೆ (ಅಳಿಲು) ಗಳನ್ನ ಹೊಡೆಯುವ ನೆಪದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸುತ್ತಾಡುತ್ತಿದ್ದ ಇಬ್ಬರು ಮೂರು ಜನ ಡಕಾಯಿತರ ಗುಂಪು ಸಾರ್ವಜನಿಕರು ಏಕೆ ತೋಟದ ಬಳಿ ಓಡಾಡುತ್ತಿದ್ದೀರ ಎಂದು ಪ್ರಶ್ನಿಸಿದಾಗ ನಿಮ್ಮ ತೋಟದಲ್ಲಿ ಉಡುತೆಳಿದ್ದರ ಒಡೆದುಕೊಳ್ಳುತ್ತೇವೆ , ಉಡುತೆ ಒಡೆಯುವ ಕೆಲಸ ಮಾಡುತ್ತೇವೆ ಇದ್ದರೆ ಹೇಳಿ ಎಂದು ಕಳೆದ ಮೂರ್ನಾಲ್ಕು ದಿನಗಳಿಂದ ಹೊಂಚು ಹಾಕಿ ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡುತ್ತಿದ್ದ ಡಕಾಯಿತ ಗುಂಪು ಒಂಟಿಯಿದ್ದ ವೃದ್ದೆಯವನ್ನ ಸಂಚುರೂಪಿಸಿ ಒಡವೆ ವಸ್ತ್ರಗಳನ್ನು ಕಸಿದು ವೃದ್ಧೆಯ ಕೈಕಾಲುಗಳನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರ್ಕಿ ಅಮಾನವೀಯ ರೀತಿಯಲ್ಲಿ ಉಸಿರುಗಟ್ಟಿಸಿ ಸಾಯಿಸಿ ಒಡವೆಗಳನ್ನ ಹೊತ್ತು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕೊರಟಗೆರೆ ಸಿಪಿಐ ಪುರುಷೋತ್ತಮ್ ಹಾಗೂ ಪಿಎಸ್ಐ ತೀರ್ಥೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಹಾಗೂ ಡಿವೈಎಸ್ಪಿ ಮಂಜುನಾಥ್ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ವ್ಯಾಪಕ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ,
ಈ ಘಟನೆ ದಾಸಾಲಕುಂಟೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದ್ದು, ಒಂಟಿ ತೋಟದ ಮನೆಗಳಲ್ಲಿ ಒಂಟಿತನವಾಗಿರುವುದು ಮಹಿಳೆಯರು ಸೇರಿದಂತೆ ಪುರುಷರು ಆತಂಕ ಪಡುವಂತಾಗಿದೆ.
– ಶ್ರೀನಿವಾಸ್ ಕೊರಟಗೆರೆ.
