ಕೊರಟಗೆರೆ:– ನಮ್ಮ ಸಂಸ್ಕೃತಿಯಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಪಾಪ, ಪುಣ್ಯ, ಕರ್ಮದ ಫಲ ಸೇರಿದಂತೆ ಹಲವು ಧರ್ಮದ ಸಾರಂಶದಿಂದ ಜನರು ಒಳ್ಳೆಯ ಜೀವನ ನಡೆಸಲು ಪ್ರಯತ್ನಿಸುತ್ತಾರೆ ಎಂದು ಶನೇಶ್ಚರ ಸೇವಾ ಟ್ರಸ್ಟ್ ಅದ್ಯಕ್ಷ ಎಂ.ಜಿ.ಸುಧೀರ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ತೇರಿನ ಮತ್ತು ಕೋಟೆ ಬೀದಿ ಮದ್ಯ ಭಾಗದಲ್ಲಿರುವ ಶನೇಶ್ಚರ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ವಿಶೇಷ ಪೂಜಾ ದಿನಗಳನ್ನು ಮುಗಿಸಿ ಕೊನೆಯ ಪೂಜೆಯ ದಿನದಂದು ಮಾತನಾಡಿ ನಮ್ಮ ಪುರಾತನ ಪಾರಂಪರಿಕ ಪುರಾಣಗಳಲ್ಲಿ ಧರ್ಮಕ್ಕೆ ಒಳಿತು ಅಧರ್ಮಕ್ಕೆ ಶಿಕ್ಷೆ ಎನ್ನುವ ಹಲವಾರು ಉದಾಹರಣೆ ಸಹಿತ ಕೆಥೆಗಳಿವೆ, ಅದರಲ್ಲಿ ಶನೇಶ್ಚರಸ್ವಾಮಿ ಯು ಅಧರ್ಮದಲ್ಲಿ ನಡೆದವರಿಗೆ, ಅಹಂಕಾರದಲ್ಲಿ ಮೆರದವರಿಗೆ, ಇತರರಿಗೆ ಅನ್ಯಾಯ ಮಾಡಿದವರಿಗೆ ಕಷ್ಟಗಳನ್ನು ಶಿಕ್ಷೆಯನ್ನು ನೀಡುವರು ಎನ್ನುವ ನಂಬಿಕೆ ಇದೆ, ಇದರಿಂದ ಜನರು ವಿಶೇಷವಾಗಿ ಶ್ರಾವಣ ಶನಿವಾರ ದೇವರಿಗೆ ಶ್ರದ್ದಾ ಭಕ್ತಿಯಿಂದ ಪೂಜೆಸಲ್ಲಿಸುತ್ತಾರೆ ಜನರ ಈ ನಂಬಿಕೆಯಿಂದ ಉತ್ತಮವಾದ ಸಮಾಜ ನಿರ್ಮಾಣವಾಗುತ್ತೆದೆ ಎಂದರು.
ಕಾರ್ಯದರ್ಶಿ ಹೆಚ್.ಎಲ್.ನಾರಾಯಣ ಮಾತನಾಡಿ ನಮ್ಮ ಶನೇಶ್ಚರ ದೇವಾಲಯದಲ್ಲಿ ಶ್ರಾವಣ ಮಾಸ ನಾಲ್ಕು ಶನಿವಾರಗಳು ಮತ್ತು ಒಂದು ದಿನದ ಅಮಾವಾಸ್ಯೆಯೊಂದು ವಿಶೇಷ ಪೂಜೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ್ದು ಎಲ್ಲಾ ವಾರಗಳಲ್ಲೂ ನೂರಾರು ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ತೆಯನ್ನು ಭಕ್ತಾಧಿಗಳಿಂದ ನಡೆಸಿದ್ದೇವೆ, ನಮ್ಮ ಆಡಳಿತ ಮಂಡಳಿ ಈ ಧಾರ್ಮಿಕ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿದೆ, ಜನರು ವೈಜ್ಞಾನಿಕತೆಯಲ್ಲಿ ಧಾರ್ಮಿಕತೆಯನ್ನು ಮರೆಯಬಾರದಾಗಿದ್ದು ಯುವಕರು ಇದನ್ನು ಪಾಲಿಸಿದರೆ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಂಡಳಿ ನಿರ್ದೇಶಕರಾದ ಕೆ.ವಿ.ಪುರುಷೋತ್ತಮ್, ಕೆ.ಪರಶುರಾಮ್, ರಾಮ್ ದೇವ್ ಎಲೆಟ್ರಿಕಲ್ ಮಾಲಿಕ ಅರ್ಜನ್ ಸಿಂಗ್, ಆರ್ಚಕ ವೆಂಕಟೇಶ್, ಸಿಬ್ಬಂದಿಗಳಾದ ಲಕ್ಷ್ಮಮ್ಮ, ಜಯಮ್ಮ, ಸೇರಿದಂತೆ ಹಲವರು ಹಾಜರಿದ್ದರು.
– ಶ್ರೀನಿವಾಸ್ ಕೊರಟಗೆರೆ.
