ಕೊರಟಗೆರೆ: ತಾಲೂಕಿನ ಜೆಟ್ಟಿಅಗ್ರಹಾರ ಗ್ರಾಮದ ಯಲ್ಲಮ್ಮ ಓಬಯ್ಯ ಅವರ ಪುತ್ರ ರಮೇಶ್ ಅವರು ಆ.12ರಂದು ತುಮಕೂರು ತಾಲೂಕಿನ ಬೆಳಧರ ಗ್ರಾಮದಿಂದ ಕಾಣೆಯಾಗಿದ್ದು, ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಮೇಶ್ ಅವರು ಕಳೆದ ಕೆಲವು ದಿನಗಳಿಂದ ಬೆಳಧರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಎರಡು ಬಾರಿ ಅಪಘಾತಕ್ಕೊಳಗಾಗಿ ತಲೆಗೆ ಪೆಟ್ಟು ಬಿದ್ದಿದ್ದರಿಂದ ಮಾನಸಿಕ ಅಸ್ವಸ್ಥರಾಗಿದ್ದರು ಎನ್ನಲಾಗಿದೆ. ಆ.12ರಂದು ಮನೆಯಿಂದ ಹೊರಗೆ ಹೋದವರು ಇದುವರೆಗೆ ವಾಪಸ್ ಬಂದಿಲ್ಲ.
ಕಾಣೆಯಾಗಿರುವ ರಮೇಶ್ ಅವರು ಸುಮಾರು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ ಹಾಗೂ ಗೋಧಿ ಮೈಬಣ್ಣ ಹೊಂದಿದ್ದಾರೆ. ಕಾಣೆಯಾದ ಸಂದರ್ಭದಲ್ಲಿ ಕಪ್ಪು ಬಣ್ಣದ ತುಂಬು ತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ರಮೇಶ್ ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ 0816-2242006, 9480802949, 9900913510 ಸಂಖ್ಯೆಗೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
– ಶ್ರೀನಿವಾಸ್ ಕೊರಟೆಗೆರೆ.
