ಬೆಂಗಳೂರು, ಆಗಸ್ಟ್ 18, 2026: ಭಾರತದ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಅಂಗವಾಗಿ ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ ಮನಾ ಪ್ರಾಜೆಕ್ಟ್ಸ್, ‘ಮನಾ ಫ್ರೀಡಂ ಮಂಥ್ 2026’ ಅಭಿಯಾನವನ್ನು ಘೋಷಿಸಿದೆ. ಆಗಸ್ಟ್ 5ರಿಂದ 31ರವರೆಗೆ ನಡೆಯಲಿರುವ ಈ ವಿಶೇಷ ಕೊಡುಗೆಯಲ್ಲಿ ಅರ್ಹ ಮನೆ ಖರೀದಿದಾರರಿಗೆ ದೇಶದಾದ್ಯಂತ 80 ದಿನಗಳ ಸ್ಟೇಕೇಶನ್ ಅನುಭವಿಸುವ ಅವಕಾಶ ದೊರೆಯಲಿದೆ.
‘Vacation at Home. Vacation Across India.’ ಎಂಬ ಪರಿಕಲ್ಪನೆಯಡಿ ರೂಪಿಸಿರುವ ಈ ಅಭಿಯಾನದಲ್ಲಿ, ಅರ್ಹ ಮನೆ ಖರೀದಿದಾರರಿಗೆ ದೇಶದ ವಿವಿಧ ಭಾಗಗಳಲ್ಲಿ ಸ್ಟೇಕೇಶನ್ಗಾಗಿ 80 ದಿನಗಳ ಮೌಲ್ಯಕ್ಕೆ ಸಮನಾದ ಟ್ರಾವೆಲ್ ವೋಚರ್ ನೀಡಲಾಗುತ್ತದೆ. ನಿಗದಿತ ಷರತ್ತುಗಳನ್ನು ಪೂರೈಸಿದ ಬಳಿಕ ನವೆಂಬರ್ 2026ರಲ್ಲಿ ವೋಚರ್ ವಿತರಿಸಲಾಗುತ್ತದೆ.
ಇದರೊಂದಿಗೆ ಫ್ರೀಡಂ ಮಂಥ್ ಲಕ್ಕಿ ಡ್ರಾ ಮೂಲಕ ಹಲವು ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಇದೆ. ಮೊದಲ ಬಹುಮಾನವಾಗಿ ₹4 ಲಕ್ಷ ಮೌಲ್ಯದ ತನಿಷ್ಕ್ ಗೋಲ್ಡ್ ವೋಚರ್, ಎರಡನೇ ಬಹುಮಾನವಾಗಿ ರೈಡಿಂಗ್ ಗೇರ್ ಪ್ಯಾಕೇಜ್ನೊಂದಿಗೆ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಬೈಕ್ ನೀಡಲಾಗುತ್ತದೆ. ಮತ್ತಷ್ಟು ನಾಲ್ವರು ವಿಜೇತರಿಗೆ ತಲಾ ₹1 ಲಕ್ಷ ಮೌಲ್ಯದ ಹೋಮ್ ಮೇಕ್ಓವರ್ ವೋಚರ್ ದೊರೆಯಲಿದೆ.
ಮನ ಪ್ರಾಜೆಕ್ಟ್ಸ್ ತನ್ನ ಗ್ರಾಹಕರಿಗಾಗಿ ‘ಮನಾ ಫ್ರೀಡಂ ಹಾನರ್ಸ್ 2026’ ಕಾರ್ಯಕ್ರಮವನ್ನೂ ಆಯೋಜಿಸುತ್ತಿದೆ. ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸುವ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್ಸ್ ಹಾಗೂ 12 ವರ್ಷದೊಳಗಿನ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷ ಧರಿಸಿ ಭಾಗವಹಿಸುವ ಫ್ರೀಡಂ ಹೀರೋಸ್ ಶೋಕೇಸ್ ಇದರ ಪ್ರಮುಖ ಆಕರ್ಷಣೆಗಳಾಗಿವೆ. ಆನ್ಲೈನ್ ಮತದಾನದ ಮೂಲಕ ‘ಪೀಪಲ್ಸ್ ಚಾಯ್ಸ್’ ಗೌರವ ನೀಡಲಾಗುತ್ತದೆ. ವಿಜೇತರನ್ನು ಆಗಸ್ಟ್ 29ರಂದು ನಡೆಯುವ ವಿಶೇಷ ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ.
ಈ ಕುರಿತು ಮಾತನಾಡಿದ ಮನಾ ಪ್ರಾಜೆಕ್ಟ್ಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ. ಕಿಶೋರ್ ರೆಡ್ಡಿ, “ಇಂದಿನ ಮನೆ ಖರೀದಿದಾರರು ಕೇವಲ ಮನೆಯನ್ನು ಮಾತ್ರವಲ್ಲ, ಉತ್ತಮ ಜೀವನಶೈಲಿ ಮತ್ತು ನೆನಪುಗಳನ್ನು ನೀಡುವ ಅನುಭವಗಳನ್ನೂ ಬಯಸುತ್ತಾರೆ. ಸ್ವಾತಂತ್ರ್ಯದ 80ನೇ ವರ್ಷದ ಸಂಭ್ರಮದಲ್ಲಿ, ಪ್ರಯಾಣ, ಅನ್ವೇಷಣೆ ಮತ್ತು ಕುಟುಂಬದೊಂದಿಗೆ ನೆನಪುಗಳನ್ನು ಸೃಷ್ಟಿಸುವ ಅವಕಾಶ ನೀಡುವ ಮೂಲಕ ಈ ವಿಶೇಷ ಅಭಿಯಾನವನ್ನು ರೂಪಿಸಿದ್ದೇವೆ. ‘ಮನಾ ಫ್ರೀಡಂ ಹಾನರ್ಸ್’ ಮೂಲಕ ಮುಂದಿನ ಪೀಳಿಗೆಯ ಪ್ರತಿಭೆ ಮತ್ತು ಸಾಧನೆಗಳನ್ನು ಗೌರವಿಸುತ್ತಿದ್ದೇವೆ,” ಎಂದರು.
ಈ ಕೊಡುಗೆ ಆಗಸ್ಟ್ 5ರಿಂದ 31ರವರೆಗೆ ನಡೆಯುವ ಅರ್ಹ ಬುಕ್ಕಿಂಗ್ಗಳಿಗೆ ಅನ್ವಯವಾಗಲಿದ್ದು, ನಿಗದಿತ ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ.
