ಕೊರಟಗೆರೆ:- ಸಸ್ಯಸಂಜೀವಿನಿ ಕ್ಷೇತ್ರ ಸಿದ್ದರಬೇಟ್ಟ ಶ್ರೀಮಠದಲ್ಲಿ ಜೂ.21ರ ಭಾನುವಾರ ನಡೆಯುವ 20ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಡಾ.ವಿರೇಂದ್ರ ಹೆಗಡೆ ಅವರಿಗೆ ಶ್ರೀಮಠದ ಸಿದ್ದಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಬಾಳೆಹೊನ್ನೂರು ಖಾಸಾ ಶಾಖಾ ಶ್ರೀಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕೊರಟಗೆರೆ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಸಿದ್ದರಬೇಟ್ಟ ಶ್ರೀಮಠ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ಜೂ.20ರ ತನಕ ಅರ್ಜಿ.. ಸಿದ್ದರಬೆಟ್ಟ ಶ್ರೀಮಠದಿಂದ ನಡೆಯಲಿರುವ 20ನೇ ವಾರ್ಷಿಕೋತ್ಸವ ಮತ್ತು ಧರ್ಮಜಾಗೃತಿ ಕಾರ್ಯಕ್ರಮಕ್ಕೆ ಈಗಾಗಲೇ 15ಜೋಡಿಗಳು ನೊಂದಾವಣಿ ಆಗಿದೆ. ಜೂ.20ರ ತನಕ ನೊಂದಾವಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀಗಳು ಮಾಹಿತಿ ನೀಡಿದರು.
ಸಚಿವರಿಗೆ ಆಹ್ವಾನ: ಈ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ಡಿಸಿಎಂ ಡಾ.ಜಿ ಪರಮೇಶ್ವರ, ಕೇಂದ್ರ ಜಲಶಕ್ತಿ ಮತ್ತು ರಾಜ್ಯ ರೈಲ್ವೆ ಖಾತೆ ವಿ.ಸೋಮಣ್ಣ, ಮಧುಗಿರಿ ಶಾಸಕ ಕೆ.ಎನ್ ರಾಜಣ್ಣ ಸೇರಿದಂತೆ ಹಲವು ಕ್ಷೇತ್ರದ ಗಣ್ಯರು, ರಾಜಕೀಯ ಮುಖಂಡರು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ವೀರಶೈವ ಸಮಾಜದ ಅಧ್ಯಕ್ಷ ವೀರಭದ್ರಯ್ಯ, ಸಿದ್ದರಬೆಟ್ಟ ರೋಟರಿ ಅಧ್ಯಕ್ಷ ದರ್ಶನ್, ಮುಖಂಡರಾದ ಎಲ್.ರಾಜಣ್ಣ, ಸದಾಶಿವಯ್ಯ, ಮಹಾಲಿಂಗಯ್ಯ, ಪವನ್ಕುಮಾರ್, ಎ.ಡಿ ಬಲರಾಮಯ್ಯ, ಕಾಮರಾಜು, ಪ್ರೇಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್, ಶಿವಾನಂದ್, ಕುಸುಮ ಜಗನ್ನಾಥ್, ದರ್ಶನ್ ಕೆ.ಎಲ್, ಕಾರ್ಮಹೇಶ್, ಕಾಲೋನಿ ರಾಜಣ್ಣ, ಮಲ್ಲಯ್ಯ ಡಿ.ಎಲ್, ಕಿರಣ್ಕುಮಾರ್, ಮಂಜುನಾಥ್ ಸೇರಿದಂತೆ ಇತರರು ಇದ್ದರು.
20ವರ್ಷಗಳಿಂದ ಶ್ರೀಮಠದಲ್ಲಿ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ, ಭಕ್ತರ ಸಹಕಾರದಿಂದ ಮುಂದಿನ ದಿನಗಳಲ್ಲಿ ಪುಣ್ಯಕ್ಷೇತ್ರದ ಅಧಿಪತಿ ಶ್ರೀಸಿದ್ದೇಶ್ವರ ಸ್ವಾಮಿಗೆ ಪ್ರಿಯವಾದ ಹೋಳಿಗೆ-ತುಪ್ಪ ಪ್ರಸಾದವನ್ನು ವರ್ಷಪೂರ್ತಿ, ಪ್ರತಿದಿನ ಆಗಮಿಸುವ ಭಕ್ತರಿಗೆ ವಿತರಿಸುವ ಯೋಜನೆ ರೂಪಿಸಲಾಗಿದೆ.
– ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀಮಠ
ಸಿದ್ಧರಬೆಟ್ಟ.
-ಶ್ರೀನಿವಾಸ್ ಕೊರಟಗೆರೆ.
