ಕೆ.ಆರ್.ಪೇಟೆ : ಬೇರೆಯವರ ನೋವನ್ನು ಕಂಡು ಮರುಗುವ ಮತ್ತು ಅವರಿಗೆ ಸಹಾಯ ಮಾಡಲು ಮುಂದಾಗುವ ಮಲ್ಲಿಕಾರ್ಜುನ್ ರವರಂಥಹ ಹೃದಯ ಎಲ್ಲರಿಗೂ ಇರಬೇಕು ಎಂದು ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ ಶ್ರೀಶ್ರೀಶ್ರೀ ಸಿದ್ದಲಿಂಗಮಹಾಸ್ವಾಮೀಜಿ ಕರೆ ನೀಡಿದರು.
ಪಟ್ಟಣದ ಶ್ರೀ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ ವತಿಯಿಂದ ಸಮಾಜಸೇವಕ ಮಲ್ಲಿಕಾರ್ಜುನ್ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ. ಸಾಧಕರಿಗೆ ಸನ್ಮಾನ.ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉಧ್ಘಾಟಿಸಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ತಮ್ಮ ಹುಟ್ಟುಹಬ್ಬದ ನೆಪ ಮಾಡಿ ಸಮಾಜಸೇವೆ ಮಾಡುವ ಮೂಲಕ ಆರೋಗ್ಯ ಶಿಬಿರ ಸಾದಕರಿಗೆ ಸನ್ಮಾನ. ಪ್ರತಿಭಾ ಪುರಸ್ಕಾರ ಹಾಗೂ ಅಳಿವಿನ ಅಂಚಿನಲ್ಲಿರುವ ಜಾನಪದ ಕಲೆಯನ್ನು ಮುಂಚೂಣಗೆ ತರುವ ಕೆಲಸ ಮಾಡುತ್ತಿರುವುದು ಪ್ರಸಂಶನೀಯ. 53 ವರ್ಷದ ಯುವಕ ನೂರು ವರ್ಷದ ಸಾಧಕರು ಮಾಡದ ಕೆಲಸವನ್ಮು ಅರ್ಪಣಾ ಮನೋಭಾವದಿಂದ ಮಾಡುತ್ತಿರುವುದು ನಮಗೆಲ್ಲಾ ಮಾದರಿ.ಬೇರೆಯವರ ನೋವನ್ನು ಕಂಡು ಮರುಗುವ ಮಲ್ಲಿಕಾರ್ಜುನ್ ಹೃದಯದ ರೀತಿ ಎಲ್ಲರಿಗೂ ಇರಬೇಕು. ಇಂಥಹ ಮಕ್ಕಳನ್ನು ಹೆತ್ತ ಅವರ ತಂದೆತಾಯುಗಳಿಗೆ ನಮ್ಮ ನಮನಗಳು. ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎಂಬ ಉದ್ದೇಶದಿಂದ ತಮ್ಮ ತನು ಮನ ಧನ ಮುಂತಾದುವುಗಳನ್ನು ನೀಡಲು ಮುಂದೆ ಬಂದಿರುವುದು ಉತ್ತಮ ಬೆಳವಣಿಗೆ.

ಮಹಾನ್ ವ್ಯಕ್ತಿಗಳು ಹೇಳುವಂತೆ ಶಿಕ್ಷಣ ಮನುಷ್ಯನನ್ನು ಬದಲಾವಣೆ ಕಡೆಗೆ ಕೊಂಡೋಯ್ಯುತ್ತದೆ ಎಂಬುದು ಸತ್ಯವಾದ ಮಾತು ಈ ಆಶಯದಂತೆ ಶಿಕ್ಷಣ ಪಡೆಯುತ್ತಿರುವ ಪ್ರತಿಭೆಗಳಿಗೆ ನೆರವು, ಸಹಾಯ ಮಾಡುತ್ತಾ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲದೇ ಸಮಾಜದ ಎಲ್ಲಾ ವರ್ಗದ ಜನರು ಉತ್ಯಮ ಆರೋಗ್ಯವಂತರಾಗಬೇಕು ಎಂಬ ದೃಷ್ಟಿಯಿಂದ ಆರೋಗ್ಯ ತಪಾಸಣೆ ಮಾಡಿ ಆರೋಗ್ಯ ಕಾರ್ಡು ನೀಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅವರಿಗೆ ಶಸ್ತ್ರಚಿಕಿತ್ಸೆ ಕೂಡ ಮಾಡಿಸಲು ಮುಂದಾಗಿದ್ದಾರೆ. ಕಣ್ಣಿನ ಸಮಸ್ಯೆ ಇರುವವರಿಗೆ ತಪಾಸಣೆ ಜೊತೆಗೆ ಕನ್ನಡಕ ಮುಂತಾದುವುಗಳ ಜವಾಬ್ದಾರಿ ತೆಗೆದುಕೊಂಡಿರುವುದು ಅವರ ಸೇವಾ ಮನೋಭಾವನೆಯನ್ನು ಸೂಚಿಸುತ್ತದೆ. ಸಮಾಜಮುಖಿ ಕೆಲಸಗಳನ್ನು. ಮಾಡುತ್ತಾ ನಾಡಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಮಲ್ಲಿಕಾರ್ಜುನ್ ಕೆ ಆರ್ ಪೇಟೆ ತಾಲ್ಲೂಕಿನ ಪ್ರತಿ ಹಳ್ಳಿಹಳ್ಳಿಗಳ ಜನರನ್ನೂ ತಲುಪಿದ್ದಾರೆ.ಅವರಿಗೆ ದೇವರು ಹೆಚ್ವಿನ ಆಯಸ್ಸು ಆರೋಗ್ಯ ಎಲ್ಲವನ್ನೂ ನೀಡಲಿ ಇನ್ನೂ ಹೆಚ್ಚಿನ ಸೇವೆ ಮಾಡಲು ಅವರಿಗೆ ದೇವರು ಅವಕಾಶ ನೀಡಲಿ ಎಂದರು.

ಬಳಿಕ ಮಾತನಾಡಿದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ದಿನೇಶ್ ದೈನಂದಿನ ಜೀವನದಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದುದು ಅವಶ್ಯಕ. ಒತ್ತಡಗಳ ನಡುವ ಇಂದು ಮಾನವ ಸಿಲುಕಿರುವ ಪರಿಣಾಮ ಹೃದಯಾಘಾತ ಹೆಚ್ಚಾಗುತ್ತಿದೆ. ಇಂದಿನ ಯುವ ಜನತೆ ದುಶ್ಚಟಗಳಾದ ಧೂಮಪಾನ ಮಧ್ಯಪಾನ ಇತರೆ ಕೆಟ್ಟ ಚಟಗಳನ್ನು ಬಿಡಬೇಕು. ಎಣ್ಣೆ ಸಹಿತ ತಿನಿಸುಗಳನ್ನು ಕಡಿಮೆ ಮಾಡಬೇಕು. ವ್ಯಾಯಾಮ. ಪ್ರತಿದಿನ 40 ನಿಮಿಷ ವಾಕಿಂಗ್ ಮಾಡಬೇಕು. ಉತ್ಯಮ ಊಟ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಉತ್ತಮ ಜೀವನ ಶೈಲಿ ನಮ್ಮನ್ನು ಉತ್ತಮ ಆರೋಗ್ಯದ ಕಡೆಗೆ ಕೊಂಡೋಯ್ಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾಗಿನೆಲೆ ಶ್ರೀ ಶಿವಾನಂದಪುರಿ ಸ್ವಾಮೀಜಿ. ಬೇಬಿಮಠದ ಶ್ರೀ ಶಿವಬಸವ ಸ್ವಾಮೀಜಿ. ಬಾಳೇಹೊನ್ನೂರು ಶಾಖಾಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ. ಗವಿಮಠ ಶ್ರೀ ಸ್ವತಂತ್ರ ಚನ್ನವೀರ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದರು.

*ಸಾಧಕರಿಗೆ ಸನ್ಮಾನ.*
ತಾಲ್ಲೂಕಿನ ಸುಪುತ್ರ ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ಐಆರ್ಎಸ್ ಅಧಿಕಾರಿಯಾಗಿ ಆಯ್ಕೆಯಾದ ಡಾ.ಮುತ್ತೇಶ್ಗೌಡ. ಅಂತರರಾಷ್ಟ್ರೀಯ ಕ್ರೀಡಾಪಟು ವಿಜಯ್ಕುಮಾರಿ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಅತಿಹೆಚ್ಚು ಅಂಕ ಗಳಿಸಿದ ಅಂಶಿತ. ವಿಕಾಸ್ಗೌಡ. ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿರುವ ಲಾವಣ್ಯ ಮುಂತಾದವರನ್ನು ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.


*ಪ್ರತಿಭಾ ಪುರಸ್ಕಾರ.*
2025-26 ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 90% ಅಂಕಗಳಿಸಿದ ತಾಲ್ಲೂಕಿನ ಸುಮಾರು ಏಳುನೂರಕ್ಕೂ ಹೆಚ್ಚು ಮಕ್ಕಳಿಗೆ ಶ್ರೀ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
*ಆರೋಗ್ಯ ಶಿಬಿರಕ್ಕೆ ಹರಿದುಬಂದ ಜನಸಾಗರ*
ಮಲ್ಲಿಕಾರ್ಜುನ್ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಸಾವಿರಾರು ಮಂದಿ ತಮ್ಮ ಕಾಯಿಲೆಗಳಿಗೆ ಸಂಬಧಿಸಿದ ವಿಭಾಗಗಳಿಗೆ ತೆರಳಿ ತಪಾಸಣೆಗೆ ಒಳಗಾದರು. ರಕ್ತ ಪರೀಕ್ಷೆ. ಕಣ್ಣಿನ ತಪಾಸಣೆ. ಹೃದಯ. ಕೀಲು ಮತ್ತು ಮೂಳೆ. ನರರೋಗ. ಸೇರಿದಂತೆ. ಎಲ್ಲಾ ವಿಭಾಗಗಳಿಗೂ ಪ್ರತ್ಯೇಕ ಕೋಣೆಗಳನ್ನು ತೆರೆದು ತಪಾಸಣೆ ನಡೆಸಲಾಯಿತು.

ರಕ್ತದಾನ ಶಿಬಿರ.
ತಾಲ್ಲೂಕಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ ನೂರಾರು ಮಂದಿ ಸ್ವಯಂಪ್ರೇರಿತರಾಗಿ ಆಗಮಿಸಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ 25.ಸಾವಿರಕ್ಕೂ ಹೆಚ್ಚು ಮಂದಿಗೆ ಸಮರ್ಪಕವಾಗಿ ರಾತ್ರಿ,ಬೆಳಗಿನ, ತಿಂಡಿ ಹಾಗೂ ಮದ್ಯಾಹ್ನದ ಊಟ ಕುಡಿಯುವ ನೀರು ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.
*ದೇವಾಲಯದಲ್ಲಿ ಪೂಜೆ ಹಣ್ಣು ಹಂಪಲು ವಿತರಣೆ*
ಸುರಕ್ಷ ಗ್ರೂಪ್ ವತಿಯಿಂದ ಪಟ್ಟಣದ ನಾಮಂಗಲ ರಸ್ತೆಯಲ್ಲಿರುವ ಶ್ರೀ ಕಾರ್ಯಸಿದ್ದಿ ಆಂಜನೇಯ ದೇವಸ್ಥಾನದಲ್ಲಿ ಮುಂಜಾನೆಯಿಂದ ಅಭಿಷೇಕ ವಿಶೇಷ ಪೂಜೆ ಅನ್ನ ಸಂತರ್ಪಣೆ ಏರ್ಪಡಿಸಿ ಹುಟ್ಟು ಹಬ್ಬಕ್ಕೆ ಶುಭ ಕೋರಿದರು,ಇತ್ತ ಕೆ.ಆರ್.ಪೇಟೆ ತಾಲ್ಲೂಕು ಸಮಾಜ ಸೇವಕ ಆರ್ಟಿಓ ಮಲ್ಲಿಕಾರ್ಜುನ್ ಅಭಿಮಾನಿಗಳಿಂದ ಕೆ.ಆರ್.ಪೇಟೆ ತಾಲೂಕು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಅರ್ಥಪೂರ್ಣವಾಗಿ ಶುಭ ಕೋರಿದರು.

*ವಿವಿಧ ಬಗೆಯ ಕೇಕ್ ಹಾರಗಳು*
ವಿಶೇಷವಾಗಿ ಆರ್ಟಿಓ ಮಲ್ಲಿಕಾರ್ಜುನ್ ಅವರಿಗೆ ಸಾವಿರಾರು ಅಭಿಮಾನಿಗಳು ಸುಮಾರು 3.ಸಾವಿರಕ್ಕೂ ಹೆಚ್ಚು 1 ರಿಂದ 50.ಕೆಜಿ ವರೆಗೂ ವಿವಿಧ ಬಗೆಯ ಕೇಕ್ ಕತ್ತರಿಸಿ,50 ರೂ ನೋಟು,ಸೇಬು,ಕಿತ್ತಲೆ, ಮೂಸುಂಬಿ,ಗುಲಾಬಿ, ತಾವರೆ, ಸೇರಿದಂತೆ ವಿವಿಧ ಬಗ್ಗೆಯ ಬೃಹತ್ ಹಾರಗಳ ಹಾಕುವ ಮೂಲಕ ತನ್ನ ನೆಚ್ಚಿನ ಸಮಾಜ ಸೇವಕನಿಗೆ ಶುಭ ಕೋರಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೆತ್ರ ಧರ್ಮಸ್ಥಳ ಗಾಮಾಭಿವೃದ್ಧಿ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್,ಹೇಮಗಿರಿ ಬಿಜಿಎಸ್ ಶಾಖಾ ಮಠ ಆಡಳಿತಾಧಿಕಾರಿ ಡಾ. ಜೆ.ಎನ್.ರಾಮಕೃಷ್ಣೇಗೌಡ. ರುದ್ರಮುನಿ ಸ್ವಾಮೀಜಿ. ಬಿಗ್ ಬಾಸ್ ಖ್ಯಾತಿಯ ಗಿಲ್ಲಿನಟ. ಕಾವ್ಯಶೈವ. ಪವರ್ ಟಿವಿ ಮುಖ್ಯಸ್ಥ ರಾಖೇಶ್ ಶೆಟ್ಟಿ.ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ಗೌಡ. ಧರ್ಮಗುರುಗಳಾದ ರೆವರೆಂಡ್ ಥಾಮಸ್.ಉಪ ವಿಭಾಗಧಿಕಾರಿ ಶ್ರೀನಿವಾಸ್,ಖ್ಯಾತಹಾಸ್ಯ ಕಲಾವಿದ ಗಂಗಾವತಿ, ಪ್ರಾಣೇಶ್,ಮಾಜಿ ಶಾಸಕ ಬಿ ಪ್ರಕಾಶ್, ಕೆ.ಬಿ ಚಂದ್ರಶೇಖರ,ಕಾಂಗ್ರೆಸ್ ಹಿರೀಯ ಮುಖಂಡ ಬಿ.ಎಲ್.ದೇವರಾಜು. ಮನಮುಲ್ ನಿರ್ದೇಶಕರಾದ ಡಾಲು ರವಿ, ಎಂಬಿ ಹರೀಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಂಬರೀಶ್,ರಾಜ್ಯ ಜಂಟಿ ಆಯುಕ್ತರು ಶೋಭಾ,ರಾಜ್ಯ ಮಾರಾಟ ಮಂಡಳಿ ನಿರ್ದೇಶಕ ಶೀಳನೆರೆ ಮೋಹನ್, ರಾಜ್ಯ ಜೆಡಿಎಸ್ ಸಮಿತಿ ಸದಸ್ಯ ಅಕ್ಕಿಹೆಬ್ಬಾಳು ರಘು,ಮಂಡ್ಯ ಜಿಲ್ಲಾ ಕುರುಬರ ಸಂಘಧ ಆಧ್ಯಕ್ಷ ಸುರೇಶ್. ಕಾರ್ಯದರ್ಶಿ ಶಶಿಧರ,ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ್,ಕಾರ್ಯದರ್ಶಿ ಕೆ.ಎಸ್ ಚಂದ್ರು, ತಾಲ್ಕೂಕಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ ಮಲ್ಲಿಕಾರ್ಜುನ್ ಅಭಿಮಾನಿಗಳು ಸೇರಿದಂತೆ ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*
