ರಾಮನಾಥಪುರ – ನಮ್ಮ ಭವ್ಯ ಭಾರತದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಹಿರಿಯರು ಸಮಾಜ ಸೇವಕರು, ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ಬಲಿದಾನ ಮಾಡಿದ್ದಾರೆ. ಅಂತಹ ಮಹನಿಯರನ್ನು ಇಂದು ಅಲ್ಲದೇ ಪ್ರತಿನಿತ್ಯ ಅವರನ್ನು ಸ್ಮರಿಸವುದು ನಮ್ಮ ನಿಮ್ಮೆಲ್ಲರ ಅಧ್ಯ ಕರ್ತವ್ಯವಾಗಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಸ್ಮರಿಸಿದರು.
ರಾಮನಾಥಪುರ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಶ್ರೀ ವಿನಾಯಕ ಅಟೋ ಮಾಲೀಕರು ಹಾಗೂ ಚಾಲಕರ ಅಟೋ ನಿಲ್ದಾಣದ ಅವರಣದಲ್ಲಿ 80 ನೇ ಸ್ವಾತಂತ್ರ್ಯ, ದಿನಾಚರಣೆಯಲ್ಲಿ ಧ್ವಜಾರೋಹಣ ನೇರವೇರಿಸಿದ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು ನಮ ಭಾರತದ ರಾಷ್ಟ್ರಧ್ವಜವು ಏಕತೆ, ಸ್ವಾತಂತ್ರ, ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ. ರಾಷ್ಟ್ರಧ್ವಜ ವಿವಿಧ ಧರ್ಮ, ವಿವಿಧ ಪ್ರದೇಶ ಮತ್ತು ವಿವಿಧ ಸಂಸ್ಕೃತಿಗಳು ಒಂದು ಸಂಕೇತದ ಅಡಿಯಲ್ಲಿ ಒಂದಾಗಿರುವುದನ್ನು ಸೂಚಿಸುತ್ತದೆ ಎಂದು ಮಂಜು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ವಿನಾಯಕ ಅಟೋ ಮಾಲಿಕರ ಸಂಘದ ಅಟೋ ರಾಜಣ್ಣ, ಉಪಾಧ್ಯಕ್ಷರು ಲಕ್ಮಣ, ಕಾರ್ಯದರ್ಶಿ ಸ್ವಾಮಿ, ಖಜಾಂಚಿ ಎಸ್.ಟಿ. ಮಂಜು, ಶ್ರೀ ಕಾವೇರಿ ಗ್ಲೂಡ್ಸ್ ಮಾಲಿಕರ ಸಂಘದ ಅಧ್ಯಕ್ಷರು ಕೆ.ಸಿ. ಮಂಜು, ಉಪಾಧ್ಯಕ್ಷರು ಸುರೇಶ್, ಕಾರ್ಯದರ್ಶಿ ಶಾಮ್, ಖಜಾಂಚಿ ವಿರುಪಾನ್, ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸೇವಾ ಸಹಕಾರ ಸಂಘದ ಅಧ್ಯಕ್ಷರು ಎಂ.ಇ.ತಿಮ್ಮೇಗೌಡ, ಉಪಾಧ್ಯಕ್ಷರು ಎಂ.ಅರ್. ಸತೀಶ್, ವ್ಯವಸ್ಥಾಪಕರು ಜಿ.ಕೆ. ವೇಣುಗೋಪಾಲ್, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಂ.ಎನ್. ಕುಮಾರಸ್ವಾಮಿ, ಕಾರ್ಯದರ್ಶಿ ರೇವಣ್ಣ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಜಯಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.
