ತುಮಕೂರು:ದ್ವಿತೀಯ ಪಿಯುಸಿ ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟಗೊಂಡಿದ್ದು ವಿದ್ಯಾನಿಧಿ ಕಾಲೇಜಿನ ಹರ್ಷಿತಾ.ಎಸ್. ಮತ್ತು ರೋಹನ್.ಎಂ. 598 ಅಂಕಗಳನ್ನು ಪಡೆಯುವುದರೊಂದಿಗೆ ರಾಜ್ಯಕ್ಕೆ 3ನೇ ರ್ಯಾಂಕ್ ಗಳಿಸಿದ್ದಾರೆ.
ಸಂಜನಾ ಎಲ್. ಮತ್ತು ನಂದಶ್ರೀ 597 ಅಂಕಗಳೊಂದಿಗೆ 4ನೇ ರ್ಯಾಂಕ್, ಶ್ರೇಯಾ 595 ಅಂಕಗಳೊAದಿಗೆ 6ನೇ ರ್ಯಾಂಕ್,ಸೃಷ್ಟಿ ಕುಂದಗೋಳ,ಮಮತಾಮತ್ತು ದೀಪ್ತಿ ಎಸ್. 594 ಅಂಕಗಳೊಂದಿಗೆ 7ನೇ ರ್ಯಾಂಕ್ಗೆ ಮುಂಭಡ್ತಿ ಪಡೆದಿದ್ದಾರೆ.ಕೃತಿಕಾ.ಎಂ.ಎ. 593 ಅಂಕಗಳೊಂದಿಗೆ 8ನೇ ರ್ಯಾಂಕ್ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶಶಾಂಕ.ಡಿ.ಕೆ ಮತ್ತು ನಿಹಾರಿಕಾ 592 ಅಂಕಗಳೊAದಿಗೆ ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೂ ಮೊದಲ ಮೌಲ್ಯಮಾಪನದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕಗಳು ಬಂದಿದ್ದವು.ಉಳಿದಂತೆ ಕನ್ನಡ, ಲೆಕ್ಕಶಾಸ್ತ್ರ, ರಸಾಯನಶಾಸ್ತ್ರಗಳಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿಸಲ್ಲಿಸಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕಗಳು ಬಂದಿವೆ.
ಮರು ಮೌಲ್ಯಮಾಪನದಲ್ಲಿ ಹೆಚ್ಚು ಅಂಕ ಪಡೆದ ಎಲ್ಲ ಸಾಧಕರಿಗೂ ಅಭಿನಂದನೆಗಳು ಎಂದು ವಿದ್ಯಾವಾಹಿನಿ ಶಿಕ್ಷಣಸಂಸ್ಥೆಗಳ ಕಾರ್ಯದರ್ಶಿಎನ್.ಬಿ. ಪ್ರದೀಪ್ ಕುಮಾರ್ ಶ್ಲಾಘಿಸಿದರು.
ವಿದ್ಯಾನಿಧಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಿದ್ದೇಶ್ವರಸ್ವಾಮಿ.ಎಸ್.ಆರ್, ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಾಧಕರನ್ನು ಅಭಿನಂದಿಸಲಾಯಿತು.
– ಕೆ.ಬಿ. ಚಂದ್ರಚುಡ
