ಬೆಂಗಳೂರು: ಬೆಂಗಳೂರಿನ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಆರನೇ ನಿಯೋ ಹೋಮ್ಸ್ ಮಳಿಗೆಯನ್ನು ಆರಂಭಿಸುವ ಮೂಲಕ ನಿಪ್ಪಾನ್ ಪೇಂಟ್ ಇಂಡಿಯಾ ತನ್ನ ಅನುಭವ ಆಧಾರಿತ ರಿಟೇಲ್ ಜಾಲವನ್ನು ಮತ್ತಷ್ಟು ವಿಸ್ತರಿಸಿದೆ.
ಜಪಾನ್ನ ನಿಪ್ಪಾನ್ ಪೇಂಟ್ ಹೋಲ್ಡಿಂಗ್ಸ್ ಕಂ. ಲಿಮಿಟೆಡ್ನ ಅಂಗಸಂಸ್ಥೆ ಹಾಗೂ ನಿಪ್ಸಿಯಾ ಸಮೂಹದ ಭಾಗವಾಗಿರುವ ನಿಪ್ಪಾನ್ ಪೇಂಟ್ ಇಂಡಿಯಾ, ಕಾರ್ತಿಕ್ ಡೋರ್ಸ್ ಆ್ಯಂಡ್ ವಿಂಡೋಸ್ ಸಹಭಾಗಿತ್ವದಲ್ಲಿ ನೂತನ ಮಳಿಗೆಯನ್ನು ಆರಂಭಿಸಿದೆ.
ಮನೆ ಬಣ್ಣ ಬಳಿಯುವ ಮತ್ತು ನವೀಕರಣಕ್ಕೆ ಸಂಬಂಧಿಸಿದಂತೆ ಉನ್ನತ ಗುಣಮಟ್ಟದ ಬಣ್ಣಗಳು, ನವೀನ ಪರಿಹಾರಗಳು, ಪರಿಣಿತರ ಮಾರ್ಗದರ್ಶನ ಹಾಗೂ ಅಧಿಕೃತ ಪೇಂಟಿಂಗ್ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವುದು ನಿಯೋ ಹೋಮ್ಸ್ ಮಳಿಗೆಯ ಪ್ರಮುಖ ಉದ್ದೇಶವಾಗಿದೆ. ಮನೆಮಾಲೀಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಬಣ್ಣ ಹಾಗೂ ಪೇಂಟಿಂಗ್ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಲು ಇಲ್ಲಿ ತಜ್ಞರ ಸಲಹೆ ಪಡೆಯಬಹುದಾಗಿದೆ.
ವೃತ್ತಿಪರ ಪೇಂಟಿಂಗ್ ಸೇವೆಗೆ ಒತ್ತು
ನಿಪ್ಪಾನ್ ಪೇಂಟ್ ಇಂಡಿಯಾ ಪರಿಚಯಿಸಿರುವ ನಿಯೋ ಹೋಮ್ ಸ್ಟೈಲಿಸ್ಟ್ ಸೇವೆಯ ಮೂಲಕ ಸಾಂಪ್ರದಾಯಿಕ ಪೇಂಟರ್ಗಳಿಗೆ ತಾಂತ್ರಿಕ ತರಬೇತಿ ನೀಡಿ, ಅವರನ್ನು ಹೆಚ್ಚು ನುರಿತ ಮತ್ತು ವೃತ್ತಿಪರ ಗೃಹ-ಪೇಂಟಿಂಗ್ ಪರಿಣಿತರನ್ನಾಗಿ ರೂಪಿಸಲಾಗುತ್ತಿದೆ.
ತರಬೇತಿಯಲ್ಲಿ ಉತ್ಪನ್ನ ಜ್ಞಾನ ಮತ್ತು ತಾಂತ್ರಿಕ ಕೌಶಲ್ಯದ ಜೊತೆಗೆ ಗ್ರಾಹಕರೊಂದಿಗೆ ಸಂವಹನ, ವೃತ್ತಿಪರ ಶಿಸ್ತು, ಸುರಕ್ಷತಾ ಕ್ರಮಗಳು, ಕೆಲಸದ ಸ್ಥಳದ ಸ್ವಚ್ಛತೆ ಹಾಗೂ ಸೇವೆಯ ಗುಣಮಟ್ಟಕ್ಕೂ ಆದ್ಯತೆ ನೀಡಲಾಗುತ್ತಿದೆ.
3-ಇನ್-1 ಸ್ವಿಫ್ಟ್ ಯುನಿಕೋಟ್
ಗೃಹ ಪೇಂಟಿಂಗ್ ಕ್ಷೇತ್ರದಲ್ಲಿ ವೇಗ ಮತ್ತು ದಕ್ಷತೆಗೆ ಒತ್ತು ನೀಡಿರುವ ಸಂಸ್ಥೆ, 3-ಇನ್-1 ಒಳಾಂಗಣ ಗೋಡೆ ಬಣ್ಣದ ಪರಿಹಾರವಾದ ಸ್ವಿಫ್ಟ್ ಯುನಿಕೋಟ್ ಅನ್ನು ಪರಿಚಯಿಸಿದೆ.
ಪ್ರೈಮರ್ ಹಾಗೂ ಎರಡು ಕೋಟ್ಗಳ ಫಿನಿಶಿಂಗ್ ಸಾಮರ್ಥ್ಯವನ್ನು ಒಂದೇ ಲೇಪನದಲ್ಲಿ ಒದಗಿಸುವ ಈ ಉತ್ಪನ್ನವು ಪೇಂಟಿಂಗ್ ಕಾರ್ಯವನ್ನು ವೇಗವಾಗಿ ಪೂರ್ಣಗೊಳಿಸಲು ನೆರವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಇದರಿಂದ ಯೋಜನೆಯ ಒಟ್ಟಾರೆ ಸಮಯ, ಸಾಮಗ್ರಿಗಳ ಬಳಕೆ ಮತ್ತು ವೆಚ್ಚದಲ್ಲಿ ಉಳಿತಾಯ ಸಾಧ್ಯವಾಗಲಿದೆ.
ಸ್ವಿಫ್ಟ್ ಯುನಿಕೋಟ್ ಪೇಂಟಿಂಗ್ ಕೆಲಸವನ್ನು ಮೂರು ಪಟ್ಟು ವೇಗವಾಗಿ ಪೂರ್ಣಗೊಳಿಸಲು ನೆರವಾಗಲಿದ್ದು, ಒಟ್ಟಾರೆ ಸಮಯ ಮತ್ತು ವೆಚ್ಚದಲ್ಲಿ ಶೇ.40ರಷ್ಟು ಉಳಿತಾಯ ಸಾಧ್ಯ ಎಂದು ಕಂಪನಿ ಹೇಳಿದೆ. ಜೊತೆಗೆ ಬ್ಯಾಕ್ಟೀರಿಯಾ ವಿರೋಧಿ ರಕ್ಷಣೆ, ಕಡಿಮೆ ವಿಒಸಿ ಹೊರಸೂಸುವಿಕೆ ಹಾಗೂ ಮೂರು ವರ್ಷಗಳ ಅಧಿಕೃತ ವಾರಂಟಿಯನ್ನೂ ಒದಗಿಸುತ್ತದೆ.
ಬೆಂಗಳೂರಿಗೆ ಹೆಚ್ಚಿನ ಆದ್ಯತೆ
ನೂತನ ಮಳಿಗೆಯ ಕುರಿತು ಮಾತನಾಡಿದ ನಿಪ್ಪಾನ್ ಪೇಂಟ್ ಇಂಡಿಯಾದ ಡೆಕೋರೇಟಿವ್ ಬಿಸಿನೆಸ್ ವಿಭಾಗದ ಅಧ್ಯಕ್ಷ ಮಾರ್ಕ್ ಟೈಟಸ್, ನಿಯೋ ಹೋಮ್ಸ್ ವಿಸ್ತರಣೆ ಕೇವಲ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸುವುದಲ್ಲ. ಬಣ್ಣದ ಆಯ್ಕೆಯಿಂದ ಹಿಡಿದು ನುರಿತ ವೃತ್ತಿಪರರ ಸೇವೆ ಹಾಗೂ ಪೇಂಟಿಂಗ್ ಯೋಜನೆ ಪೂರ್ಣಗೊಳ್ಳುವವರೆಗೆ ಗ್ರಾಹಕರ ಸಂಪೂರ್ಣ ಅನುಭವವನ್ನು ಉತ್ತಮಗೊಳಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.
ಬೆಂಗಳೂರು ಪ್ರಮುಖ ಮಾರುಕಟ್ಟೆಯಾಗಿದ್ದು, ಹೊಸ ಮಳಿಗೆಯ ಮೂಲಕ ಗ್ರಾಹಕರಿಗೆ ಉತ್ತಮ ಪೇಂಟಿಂಗ್ ಅನುಭವವನ್ನು ಮತ್ತಷ್ಟು ಹತ್ತಿರಕ್ಕೆ ತರಲು ಸಾಧ್ಯವಾಗಿದೆ. ನಿಯೋ ಹೋಮ್ ಸ್ಟೈಲಿಸ್ಟ್ ಮತ್ತು ಸ್ವಿಫ್ಟ್ ಯುನಿಕೋಟ್ನಂತಹ ಉಪಕ್ರಮಗಳು ಗೃಹ-ಪೇಂಟಿಂಗ್ ಕ್ಷೇತ್ರವನ್ನು ಹೆಚ್ಚು ವೃತ್ತಿಪರ, ದಕ್ಷ ಮತ್ತು ಅನುಕೂಲಕರವಾಗಿಸುವ ಪ್ರಯತ್ನದ ಭಾಗವಾಗಿವೆ ಎಂದು ತಿಳಿಸಿದರು.
ದೇಶಾದ್ಯಂತ 27 ನಿಯೋ ಹೋಮ್ಸ್ ಮಳಿಗೆ
ನಿಯೋ ಹೋಮ್ಸ್ ಮಳಿಗೆಗಳಲ್ಲಿ ಡೆಕೋರೇಟಿವ್ ಕೋಟಿಂಗ್ಸ್, ಬಣ್ಣದ ಪರಿಹಾರಗಳು, ಪೇಂಟಿಂಗ್ ಪರಿಕರಗಳು ಹಾಗೂ ತಜ್ಞರ ಸಲಹೆ ಒಂದೇ ಸ್ಥಳದಲ್ಲಿ ಲಭ್ಯವಾಗಲಿದೆ. ಮನೆಮಾಲೀಕರ ಜೊತೆಗೆ ಆರ್ಕಿಟೆಕ್ಟ್ಗಳು, ಗುತ್ತಿಗೆದಾರರು, ಒಳಾಂಗಣ ವಿನ್ಯಾಸಕರು ಹಾಗೂ ಪೇಂಟರ್ಗಳಿಗೂ ಈ ಮಳಿಗೆಗಳು ನೆರವಾಗಲಿವೆ.
ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಆರನೇ ಮಳಿಗೆ ಆರಂಭವಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿಯೋ ಹೋಮ್ಸ್ ಮಳಿಗೆಗಳ ಸಂಖ್ಯೆ ಆರಕ್ಕೆ ಏರಿದ್ದು, ದೇಶಾದ್ಯಂತ ಒಟ್ಟು 27 ನಿಯೋ ಹೋಮ್ಸ್ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಂಸ್ಥೆ ತಿಳಿಸಿದೆ.
ಮುಂದಿನ ದಿನಗಳಲ್ಲಿ ಭಾರತದ ಇತರೆ ಪ್ರಮುಖ ಮಾರುಕಟ್ಟೆಗಳಿಗೂ ನಿಯೋ ಹೋಮ್ಸ್ ಜಾಲವನ್ನು ವಿಸ್ತರಿಸುವ ಯೋಜನೆಯನ್ನು ನಿಪ್ಪಾನ್ ಪೇಂಟ್ ಇಂಡಿಯಾ ಹೊಂದಿದೆ.
