ರಾಮನಾಥಪುರ– ಪಟ್ಟಣದ ಸಾರಿಗೆ ಘಟಕದಿಂದ ಬೆಳಿಗ್ಗೆ 8-30 ಕ್ಕೆ ರಾಮನಾಥಪುರ ಮುತಗದಹೋಸೂರು, ದೊಡ್ಡಹಳ್ಳಿ, ಬೇಲಿಕರ್ಪೂರವಳ್ಳಿ ಹಾಗೂ ಬೆಳವಾಡಿ ಮಾರ್ಗದಲ್ಲಿ ಹೊಳೆನರಸಿಪುರಕ್ಕೆ ತಲುಪಿದ ನಂತರ ಹೊಳೆನರಸಿಪುರದಿಂದ ಅದೇ ಮಾರ್ಗ ರಾಮನಾಥಪುರಕ್ಕೆ ತಲಪುತ್ತದೆ. ಇದರಿಂದ ಈ ಭಾಗದ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ನೂತನ ಬಸ್ ಮಾರ್ಗದ ಸಂಚಾರಕ್ಕೆ ಶಾಸಕರಾದ ಎ. ಮಂಜು ಅವರು ಚಾಲನೆ ನೀಡಿದರು.

ರಾಮನಾಥಪುರ ಘಟಕದ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುತ್ತಿರುವುದರಿಂದ
ಈ ಭಾಗದ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ವೃದ್ಧರು ಸಾರಿಗೆ ಸೌಲಭ್ಯವಿಲ್ಲದೆ ಎದುರಿಸುತ್ತಿದ್ದ ತೊಂದರೆಗಳನ್ನು ಮನಗಂಡು, ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ಬಸ್ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಶೇಷವಾಗಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ವೃದ್ಧರು ಮತ್ತು ಸಾರ್ವಜನಿಕರ ದೈನಂದಿನ ಪ್ರಯಾಣಕ್ಕೆ ಈ ಬಸ್ ಸೌಲಭ್ಯ ಹೆಚ್ಚಿನ ಅನುಕೂಲವಾಗಲಿದೆ. ಗ್ರಾಮೀಣ ಭಾಗದ ಜನರ ಸಾರಿಗೆ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ.

ನೂತನ ಬಸ್ ಮಾರ್ಗದ ಸೌಲಭ್ಯವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಅಭಿನಂದನೆ.
ಈ ಸಂದರ್ಭದಲ್ಲಿ ದೊಡ್ಡಹಳ್ಳಿ, ಬೇಲಿಕರ್ಪೂರವಳ್ಳಿ, ಬೆಳವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಮುಖಂಡರು ಹಾಗೂ ಸಾರ್ವಜನಿಕರು ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಅವರಿಗೆ ಗೌರವಿಸಿದ್ದಾರೆ.
– ಕುಮಾರಸ್ವಾಮಿ ಎಂ.ಎನ್.
