ರಾಮನಾಥಪುರ- ಶ್ರೀ ಭಗೀರಥ ಮಹಾರಾಜರ ತಪಸ್ಸು, ಧೈರ್ಯ ಮತ್ತು ಸಮರ್ಪಣೆಯ ಜೀವನ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ.ಅವರ ಆದರ್ಶಗಳನ್ನು ಅನುಸರಿಸಿ ನಮ್ಮ ಜೀವನವನ್ನು ಉನ್ನತಗೊಳಿಸೋಣ ಎಂದು ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ನಿರ್ಧೇಶಕರಾದ ರಾಮನಾಥಪುರ ಅಂಬಿಕಾ ಟ್ರೈಡೆರ್ಸ್ ಮಾಲೀಕರು ಪ್ರಕಾಶ್ ತಿಳಿಸಿದರು.
ರಾಮನಾಥಪುರದ ಶ್ರೀ ಬಸವೇಶ್ವರ ವೃತ್ತದಲ್ಲಿ ಇಂದು ಗುರುವಾರ ಬೆಳಿಗ್ಗೆ ಉಪ್ಪಾರ ಸಮಾಜದವತೊಯಿಂದ ಶ್ರೀ ಭಗೀರಥ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಭಗೀರಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಈ ಶುಭ ದಿನವು ನಿಮ್ಮ ಹಾಗೂ ನಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ತರಲಿ ಎಂದು ಭಗೀರಥ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.
ರಾಮಾನಾಥಪುರದ ಹೋಬಳಿ ಉಪ್ಪಾರಸಂಂಘದ ಅಧ್ಯಕ್ಷರು ವೆಂಕಟೇಶ್ , ಕಾರ್ಯದರ್ಶಿ S y ರವಿಕುಮಾರ್, ಪ್ರದಾನಕಾರ್ಯದರ್ಶಿ ಲೋಕೇಶ್, ರಾಜ್ಯ ರೈತ ಕಲ್ಯಾಣ ಸಂಘ ಗಣೇಶ್ ಬಾಂದಹಳ್ಳಿ, ರಾಮು. ಧರ್ಮ. ಶಂಕ್ರಣ್ಣ. ಗಿರಿ. ಹೇಮಂತ ಉಪ್ಪಾರ ಕೊಪ್ಪಲು. ರಮೇಶ್ ಮುಂತಾದವರು .ಭಾಗಿಯಾಗಿ ಭಗೀರಥ ಜಯಂಥೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು.
