ತುಮಕೂರು:ನಗರದ ಹೊರಪೇಟೆಯ ನೀಲಕಂಠೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಮಾರಂ¨ ಆಗಸ್ಟ್ 2ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಏರ್ಪಾಟಾಗಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಹಕಾರ ಸಂಘದ ಅಧ್ಯಕ್ಷ ಟಿ.ಹೆಚ್. ಶಿವಾನಂದ್ ಅವರು, 2001ರಲ್ಲಿ ಆರಂಭವಾದ ನೀಲಕಂಠೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಇಂದಿಗೆ 25 ವರ್ಷತುಂಬಿದೆ.ಈ ಅವಧಿಯತಲ್ಲಿ ಹಂತಹಂತವಾಗಿ ಪ್ರಗತಿ ಸಾಧಿಸುತ್ತಾ ಸಂಘ ಬೆಳವಣಿಗೆ ಕಂಡಿದೆ.11 ಲಕ್ಷ ಷೇರು ಮೊತ್ತ ಹಾಗೂ 31 ಲಕ್ಷರೂ.ಪ್ರಾಥಮಿಕ ಬಂಡವಾಳದಿಂದ ಸಂಘ ಆರಂಭವಾಯಿತು ಎಂದರು.
ಕುರುಹಿನಶೆಟ್ಟಿ ಸಮಾಜ, ನೀಲಕಂಠೇಶ್ವರಸ್ವಾಮಿ ಸೇವಾ ಟ್ರಸ್ಟ್, ಮಹಿಳಾ ಸಂಘ ಹಾಗೂ ಸಮಾಜದ ಮುಖಂಡರ ಸಹಕಾರದಿಂದ ಸಂಘ ಬೆಳವಣಿಗೆ ಕಂಡಿದೆ.55 ಕೋಟಿ ರೂ.ವ್ಯವಹಾರ ನಡೆಸಿದ್ದು ಶೇಕಡ 93ರಷ್ಟು ಸಾಲ ವಸೂಲಾತಿಯಾಗಿದೆ.ಈ ವರ್ಷ ಸಂಘ 55 ಲಕ್ಷರೂ.ನಿವ್ವಳ ಲಾಭ ಗಳಿಸಿದೆ. ಮಾಜಿ ಸಚಿವ, ಕೆ.ಎನ್. ರಾಜಣ್ಣನವರ ಸಹಕಾರ, ಮಾರ್ಗದರ್ಶನದಿಂದ ನಮ್ಮ ಪತ್ತಿನ ಸಹಕಾರ ಸಂಘ ಪ್ರಗತಿಕಾಣುತ್ತಿದೆ ಎಂದು ಟಿ.ಹೆಚ್. ಶಿವಾನಂದ್ ಹೇಳಿದರು.
ರಜತ ಮಹೋತ್ಸವಸಮಾರಂಭದಲ್ಲಿ ಕುರುಹಿನಶೆಟ್ಟಿ ಸಮಾಜದ ಹುಬ್ಬಳ್ಳಿಯ ನೀಲಕಂಠಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಕೇಂದ್ರ ಜಲಶಕ್ತಿ ಮತ್ತು ರೈಲ್ವೆಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಮಾಜಿ ಸಚಿವ, ಶಾಸಕ ಕೆ.ಎನ್. ರಾಜಣ್ಣ, ಮಾಜಿ ಸಚಿವ ಗಂಗಾವತಿಯ ಮಲ್ಲಿಕಾರ್ಜುನ ನಾಗಪ್ಪ, ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ್, ಕುರುಹಿನಶೆಟ್ಟಿಕೇಂದ್ರ ಸಂಘದ ಅಧ್ಯಕ್ಷ ಬಿ.ಲಿಂಗೇಶ್ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು
ನೀಲಕಂಠೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಸ್.ಎನ್,ಬಸವರಾಜು, ನಿರ್ದೇಶಕರಾದ ಬಿ.ಎನ್.ಜಯಚಂದ್ರ, ಬಿ.ಎಲ್.ಗೋವಿಂದಶೆಟ್ಟಿ, ಎನ್.ಎಸ್.ಕೃಷ್ಣಮೂರ್ತಿ, ಟಿ.ಆರ್.ದಿನೇಶ್ಕುಮಾರ್, ಎಸ್.ಎಸ್.ಸೋಮಶೇಖರ್, ಟಿ.ಆರ್.ಮುಕ್ತಾಂಭ ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
