ನವದೆಹಲಿ: Indian Railways ಅಡಿಯಲ್ಲಿ ಕಾರ್ಯನಿರ್ವಹಿಸುವ Railway Recruitment Board (ಆರ್ಆರ್ಬಿ) ವತಿಯಿಂದ ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ದೇಶದಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ಒಟ್ಟು 11,127 ಹುದ್ದೆಗಳು ಭರ್ತಿಯಾಗಲಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆ ವಿವರ:
- ಹುದ್ದೆ: ಅಸಿಸ್ಟೆಂಟ್ ಲೋಕೋ ಪೈಲಟ್ (ALP)
- ಒಟ್ಟು ಹುದ್ದೆಗಳು: 11,127

ವಯೋಮಿತಿ:
- ಕನಿಷ್ಠ: 18 ವರ್ಷ
- ಗರಿಷ್ಠ: 30 ವರ್ಷ
(01-07-2026ರಂತೆ ಲೆಕ್ಕಿಸಲಾಗುತ್ತದೆ)
ಅರ್ಜಿ ದಿನಾಂಕ:
- ಅರ್ಜಿ ಪ್ರಾರಂಭ: 15-05-2026
- ಅರ್ಜಿ ಕೊನೆಯ ದಿನಾಂಕ: 14-06-2026 (ರಾತ್ರಿ 11:59 ಗಂಟೆವರೆಗೆ)
ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ rrbapply.gov.in ಮೂಲಕ ಅರ್ಜಿ ಸಲ್ಲಿಸಬೇಕು.
ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ಸಮಯ ಮೀರದಂತೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
