ಅರಕಲಗೂಡು: ತಾಲೂಕಿನ ಶ್ರೀ ಚನ್ನಬಸವೇಶ್ವರ ಸುಕ್ಷೇತ್ರ ದೊಡ್ಡಮಠದಲ್ಲಿ ನೂತನ ಕರ್ತೃ ಗದ್ದುಗೆಗೆ ಸಂಬಂಧಿಸಿದ ಮೊದಲನೇ ವರ್ಷದ ವಾರ್ಷಿಕೋತ್ಸವ, ಶಿವದೀಕ್ಷೆ ಹಾಗೂ ಧಾರ್ಮಿಕ ಸಮಾರಂಭವನ್ನು ಏಪ್ರಿಲ್ 15ರಂದು (ಬುಧವಾರ) ಭಕ್ತಿಭಾವದಿಂದ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಶ್ರೀಮಠದ ಶಿಷ್ಯ ಲೋಕೇಶ್, ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಬೆಳಿಗ್ಗೆ 11 ಗಂಟೆಗೆ ಧಾರ್ಮಿಕ ಸಭೆ ಹಾಗೂ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮವು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನಸ್ವಾಮಿಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಬೆಟ್ಟದಪುರ ಮಠದ ಶ್ರೀ ಚನ್ನಬಸವದೇಶಿಕೇಂದ್ರ ಸ್ವಾಮೀಜಿ, ವಿಜಯಪುರದ ಶ್ರೀ ಶಿವಕುಮಾರಸ್ವಾಮೀಜಿ, ತೇಜೂರು ಮಠದ ಶ್ರೀ ಕಲ್ಯಾಣಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವಸ್ವಾಮೀಜಿ, ಮಾಯಿಗೌಡನಹಳ್ಳಿಯ ಶ್ರೀ ಸೋಮಶೇಖರಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಭಾಗವಹಿಸಲಿದ್ದಾರೆ.

ಇದೇ ವೇಳೆ ಬೆಂಗಳೂರು ಸರ್ಪಭೂಷಣ ಶಿವಯೋಗಿಗಳ ಮಠದ ಅಧ್ಯಕ್ಷ ಪರಮಶಿವಯ್ಯ, ಕಾರ್ಯದರ್ಶಿ ಎಚ್.ಎಂ. ಬಸವರಾಜು, ಶಾಸಕ ಎ. ಮಂಜು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ಕಾಂಗ್ರೆಸ್ ಮುಖಂಡ ಶ್ರೀಧರಗೌಡ, ಕೃಷ್ಣೇಗೌಡ, ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಅಲ್ಲದೆ ಮಹಾಸಭಾ ಅಧ್ಯಕ್ಷ ಪರಮೇಶ್, ತಾಲ್ಲೂಕು ಅಧ್ಯಕ್ಷ ಸುರೇಶ್ ಬೆಮ್ಮತ್ತಿ, ಅಕ್ಕಮಹದೇವಿ ಮಹಿಳಾ ಸಮಾಜದ ಅಧ್ಯಕ್ಷೆ ನಿರ್ಮಲಾ ನಾಗೇಶ್, ಎನ್. ರವಿಕುಮಾರ್, ಹುಬ್ಬಳ್ಳಿ ರುದ್ರಯ್ಯ, ವಿನಯ್ ಪಾಟೀಲ್, ಸಂಜಯ್, ತಿಪ್ಪೇಸ್ವಾಮಿ, ಸಿ.ಕೆ. ಗಣೇಶ್ ಸೇರಿದಂತೆ ಹಲವು ಭಕ್ತರು ಹಾಗೂ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶ್ರೀಮಠದ ವತಿಯಿಂದ ವಿನಂತಿ ಮಾಡಲಾಗಿದೆ.
