ಹಾಸನ, ಜೂನ್ 1: ನಗರದ ಪಿಡಬ್ಲ್ಯೂಡಿ ಕಾಲೋನಿಯ ಶ್ರೀರಾಮ ಮಂದಿರ ಸಮುದಾಯ ಭವನದಲ್ಲಿ ಹೆಸರಾಂತ ಸಂಗೀತ ನಿರ್ದೇಶಕ ಮಹೇಶ್ ಕರಡ್ಯ ಅವರ ನಿರ್ದೇಶನದಲ್ಲಿ ‘ಸಾಮ್ರಾಟ್ ಸುಯೋಧನ’ ಪೌರಾಣಿಕ ನಾಟಕದ ತಾಲೀಮಿನ ಪ್ರಥಮ ಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಕಲಾವಿದರಾದ ಎಚ್.ಎಂ. ಪ್ರಭಾಕರ್ (ಸಿದ್ದಯ್ಯನಗರ), ಸುನಿಲ್ ಆಡುವಳ್ಳಿ ಹಾಗೂ ಶ್ರೀನಿವಾಸ್ ಕರಿಗೌಡನಕೊಪ್ಪಲು ಅವರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಸ್ನೇಹ ಬಳಗದ ವತಿಯಿಂದ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಬರಹಗಾರರ ಸಂಘ ಆಯೋಜಿಸಿದ್ದ ರಾಜ್ಯಮಟ್ಟದ ಆನ್ಲೈನ್ ರಂಗಗೀತೆ ಗಾಯನ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳ ಕಲಾವಿದರು ಭಾಗವಹಿಸಿದರು. ಧರ್ಮ ಜಿ. ಗರೀಘಟ್ಟ, ಪುಟ್ಟಸ್ವಾಮಿಗೌಡ ರಾಮೇನಹಳ್ಳಿ, ಕೆಂಚೇಗೌಡ ಕಾಳೇನಹಳ್ಳಿ, ರವಿ ಜಿ.ಜಿ., ಪ್ರಕಾಶ್ ಟಿ.ಆರ್., ನರಸಿಂಹರಾಜು ಸಿ.ಹೆಚ್., ಚೇತನ್ ಚಂದು, ಹಾರ್ಧಿಕ್ ಗೌಡ, ಶಿವಕುಮಾರ್ ಮದಲೂರು, ಕಾಮಾಕ್ಷಿ ಬಿ.ಜಿ., ಕಲ್ಲಯ್ಯ ಸೀಗೂರು, ಎಚ್.ಎಂ. ಪ್ರಭಾಕರ್, ಶಶಿ ಸಾಲಗಾಮೆ, ಧರ್ಮಣ್ಣ ಗವೇನಹಳ್ಳಿ, ಗಿರೀಶ್ ಲಕ್ಕಿಹಳ್ಳಿ, ಶ್ರೀನಿವಾಸ್ ಕರಿಗೌಡನಕೊಪ್ಪಲು, ಬಸವರಾಜ್ ಹರದನಹಳ್ಳಿ, ನಾಗಮೋಹನ್, ಚಂದ್ರಶೇಖರ್ ಸಿಗರನಹಳ್ಳಿ, ರಮೇಶ್ ಗೌಡಪ್ಪ, ನಂಜಪ್ಪ, ಶೈಲಜಾ ಕೆ.ವಿ., ಪಾಲಾಕ್ಷಚಾರ್, ಕೃಷ್ಣಮೂರ್ತಿ, ಮಮತಾ ಸುಂದರೇಶ್, ದಿನೇಶ್ ಕೆ.ಆರ್., ಸೋಮಶೇಖರ್ ಎಲೆಚಾಗಹಳ್ಳಿ, ಸತೀಶ್ ಕಬ್ಬತ್ತಿ, ರವಿಕುಮಾರ್ ಬಿದರೆ, ಸುಮಂಗಲಾ ಜೋಯಿಡ, ಮಂಜುಳಾ ಉಮೇಶ್, ಮಂಜುನಾಥ್ ಹಂಗರಹಳ್ಳಿ ಹಾಗೂ ಬೀರಪ್ಪ ನೆಲ್ಲುಗುಡಿಗೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಲಾವಿದ ಚಂದ್ರು ಸಿಗರನಹಳ್ಳಿ, ಹಾಸನದಲ್ಲಿ ಶೀಘ್ರದಲ್ಲೇ ‘ಸಾಮ್ರಾಟ್ ಸುಯೋಧನ’ ನಾಟಕವನ್ನು ರಂಗದ ಮೇಲೆ ಪ್ರದರ್ಶಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಈ ನಾಟಕವು ಹಾಸನದ ಕಲಾವಿದರಿಗೆ ಹೊಸ ಪ್ರಯೋಗವಾಗಿದ್ದು, ಈ ಹಿಂದೆ ನಾಟಕೋತ್ಸವದಲ್ಲಿ ಬೆಂಗಳೂರಿನ ತಂಡವೊಂದು ಕಲಾಭವನದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿದ್ದನ್ನು ಸ್ಮರಿಸಿದರು.
ಹಾಸನ ಜಿಲ್ಲಾ ಕಲಾವಿದರ ಸಂಘದ ಖಜಾಂಚಿ ರಮೇಶ್ ಗೌಡಪ್ಪ ಮಾತನಾಡಿ, ಜಿಲ್ಲೆಯಲ್ಲಿ ರಂಗಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.

ನಾಟಕ ನಿರ್ದೇಶಕ ಹಾಗೂ ಹಾರ್ಮೋನಿಯಂ ಮಾಸ್ಟರ್ ಮಹೇಶ್ ಕರಡ್ಯ ಮಾತನಾಡಿ, ‘ಸಾಮ್ರಾಟ್ ಸುಯೋಧನ’ ನಾಟಕವು ಅದ್ಭುತ ಸಂಭಾಷಣೆಗಳಿಂದ ಕೂಡಿದ್ದು, ಕಲಾವಿದರಿಗೆ ಅಭಿನಯದ ಸವಾಲಿನ ಜೊತೆಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು.
ನಾಗಮೋಹನ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಲಾವಿದರು, ಸಾಹಿತ್ಯಾಸಕ್ತರು ಹಾಗೂ ರಂಗಭೂಮಿ ಅಭಿಮಾನಿಗಳು ಉಪಸ್ಥಿತರಿದ್ದರು.
