ಕರ್ನಾಟಕ ರಾಜ್ಯ ಬರಹಗಾರರ ಸಂಘ ಒಂದು ನೋಂದಾಯಿತ ಸಾಹಿತ್ಯ, ಸಾಂಸ್ಕೃತಿಕ, ಸಮಾಜ ಸೇವಾ ಸಂಸ್ಥೆಯಾಗಿ ಕಳೆದ ಆರೇಳು ವರ್ಷಗಳಿಂದ ಸಾಹಿತ್ಯ, ಸಾಂಸ್ಕೃತಿಕ ಸಮಾಜ ಸೇವಾ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಯಶಸ್ವಿಯಾಗಿ ಸಂಘಟಿಸುತ್ತಾ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಹೊರರಾಜ್ಯಗಳಲ್ಲೂ ಜಿಲ್ಲಾ ತಾಲ್ಲೂಕು ಘಟಕಗಳನ್ನು ಹೊಂದಿದೆ.
ಈ ಘಟಕಗಳ ಮುಖಾಂತರ ರಾಜ್ಯಾದ್ಯಂತ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದ್ದು ಪ್ರತಿವರ್ಷ ಸಂಘವು ನುಡಿ ವೈಭವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸುತ್ತಿದೆ. ಈ ವರ್ಷ ನವೆಂಬರ್ ಮಾಹೆಯಲ್ಲಿ ಬೆಂಗಳೂರು ಗ್ರಾ ಮಾಂತರ ಜಿಲ್ಲಾ ಘಟಕದ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು. ಹೀಗೆ ನಾಡಿನ 10 ಪ್ರಗತಿಪರ ರೈತರನ್ನು ಅನ್ನದಾತ ಪ್ರಶಸ್ತಿ 2026 ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಮಧು ನಾಯ್ಕ ಲಂಬಾಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನ್ನದಾತ ಪ್ರಶಸ್ತಿ 2026 ಕ್ಕೆ ಆಯ್ಕೆಯಾದ ರೈತ ಮಹನೀಯರು:
ಜೆ. ಕೆ. ಬಸವರಾಜ್ ಜಯಪುರ, ಮಂಡ್ಯ ಜಿಲ್ಲೆ, ಪಿ.ಎಂ ಗುರುರಾಜ್, ಪಡುವಲಹಿಪ್ಪೆ, ಆರ್. ಕೆ.ಪುಟ್ಟಸ್ವಾಮಿಗೌಡರು, ರಾಮೇನಹಳ್ಳಿ, ವೆಂಕಟೆಗೌಡ್ರು, ಪಟ್ನ, ರಮೇಶ ನಾಟಿಕರ, ಗುಲ್ಬರ್ಗ, ಎಸ್.ಮನೋಹರ ಹರಪನಹಳ್ಳಿ, ಸಿ.ಕೆ.ತಿಪ್ಪೇಸ್ವಾಮಿ ಚುಕ್ಕವನಹಳ್ಳಿ,, ಚಿತ್ರದುರ್ಗ ಜಿಲ್ಲೆ, ವಿಜಯ ಅಂಗಡಿ, ಶ್ರೀಮತಿ ಹೇಮಾ ಅನಂತರಾಜು, ಹಾಸನ. ಅನ್ನದಾತ ಪ್ರಶಸ್ತಿಗೆ ಆಯ್ಕೆಯಾದ ನಾಡಿನ ಹೆಮ್ಮೆಯ ಪ್ರಗತಿಪರ ರೈತರನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘದ ಗೌರವಾಧ್ಯಕ್ಷರು ಹಾಗೂ ಸಾಹಿತಿಗಳು ಗೊರೂರು ಅನಂತಲಾಜು ಅಭಿನಂದಿಸಿದ್ದಾರೆ.
