ಕೊರಟಗೆರೆ: ಮಾಜಿ ಸಚಿವ ಸಿ. ವೀರಣ್ಣ ಅವರ ನಿಧನದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಮಾಜಿ ಸಂಸದ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಭೇಟಿ ನೀಡಿ ಪಾರ್ಥಿವ ಶರೀರಕ್ಕೆ ಹೂಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.
ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, ವೀರಣ್ಣ ಅವರ ಅಗಲಿಕೆ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿಮಿಡಿದರು.

ವೀರಣ್ಣ ಅವರೊಂದಿಗೆ ಹಲವು ದಶಕಗಳ ರಾಜಕೀಯ ಹಾಗೂ ವೈಯಕ್ತಿಕ ಒಡನಾಟ ಹೊಂದಿದ್ದ ಉಗ್ರಪ್ಪ, ಅವರ ಸರಳತೆ, ಜನಪರ ಕಾಳಜಿ ಮತ್ತು ಅಭಿವೃದ್ಧಿಪರ ದೃಷ್ಟಿಕೋನವನ್ನು ಸ್ಮರಿಸಿದರು. ಕುಟುಂಬದ ಸದಸ್ಯರೊಂದಿಗೆ ಕೆಲಕಾಲ ಮಾತನಾಡಿ ದುಃಖದಲ್ಲಿ ಪಾಲುದಾರರಾದರು.

ಮಾವನ ನಿಧನದ ನಂತರ ಮೊದಲ ಬಾರಿಗೆ ಮಾವನ ಮನೆಗೆ ಆಗಮಿಸಿದ್ದ ಉಗ್ರಪ್ಪ ಅವರ ಭೇಟಿ ಭಾವನಾತ್ಮಕ ವಾತಾವರಣಕ್ಕೆ ಸಾಕ್ಷಿಯಾಯಿತು.

ಅಂತಿಮ ದರ್ಶನಕ್ಕೆ ಆಗಮಿಸಿದ್ದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ವೀರಣ್ಣ ಅವರ ಸೇವೆಯನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
– ಶ್ರೀನಿವಾಸ್ ಕೊರಟಗೆರೆ
