ಬೆಂಗಳೂರು, 15 ಜುಲೈ 2026: ದಕ್ಷಿಣ ಭಾರತದ ಪ್ರಮುಖ ಮ್ಯಾನೇಜ್ಡ್ ವರ್ಕ್ ಸ್ಪೇಸ್ (ಸುಸಜ್ಜಿತ ಕಚೇರಿ ಸ್ಥಳಾವಕಾಶ) ಸಂಸ್ಥೆಗಳಲ್ಲಿ ಒಂದಾದ ಸ್ಪೇಸ್ ಒನ್, ಸಿಲಿಕಾನ್ ಸಿಟಿಯ ಪ್ರಮುಖ ವಾಣಿಜ್ಯ ಮತ್ತು ತಂತ್ರಜ್ಞಾನದ ಹಬ್ ಆಗಿರುವ ವೈಟ್ ಫೀಲ್ಡ್ ನ ಮಹದೇವಪುರದಲ್ಲಿ ಪ್ರೀಮಿಯಂ ಕಚೇರಿ ಸಂಕೀರ್ಣವನ್ನು ಆರಂಭಿಸುವ ಮೂಲಕ ಬೆಂಗಳೂರಿನಲ್ಲಿ ತನ್ನ ಉದ್ಯಮವನ್ನು ಆರಂಭಿಸಿದೆ.
ಪೂರ್ವ ಬೆಂಗಳೂರಿನ ಹೃದಯಭಾಗದಲ್ಲಿ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿ ತಲೆಎತ್ತಿರುವ ಈ ಹೊಸ ಕೇಂದ್ರವು 317 ಕ್ಕೂ ಅಧಿಕ ಆಸನಗಳ ಸಾಮರ್ಥ್ಯವನ್ನು ಹೊಂದಿದ್ದು, ಸ್ಟಾರ್ಟ್ ಅಪ್ ಗಳು, ಎಸ್ಎಂಇ ಹಾಗೂ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಫ್ಲೆಕ್ಸಿಬಲ್ ಆಫೀಸ್ ಬೇಡಿಕೆಯನ್ನು ಪೂರೈಸಲು ಸಜ್ಜಾಗಿದೆ. ಈ ವಿಸ್ತರಣೆಯು ಕಂಪನಿಯ ಒಟ್ಟಾರೆ ಆದಾಯಕ್ಕೆ ಶೇಕಡಾ 10 ರಷ್ಟು ಹೆಚ್ಚಳ ಒದಗಿಸಲಿದ್ದು, ವಾರ್ಷಿಕವಾಗಿ ₹3 ಕೋಟಿ ರೂಪಾಯಿ ಆದಾಯ ತರಲಿದೆ ಎಂದು ಅಂದಾಜಿಸಲಾಗಿದೆ.
ಉದ್ಯಮ ವಲಯದಲ್ಲಿ ಬದಲಾಗುತ್ತಿರುವ ಕಚೇರಿ ಸಂಸ್ಕೃತಿಗೆ ತಕ್ಕಂತೆ ಸಿದ್ಧಪಡಿಸಲಾಗಿರುವ ಈ ಸುಸಜ್ಜಿತ ಕೇಂದ್ರವು, ಉದ್ಯಮಗಳು ತಕ್ಷಣವೇ ಕಾರ್ಯಾರಂಭ ಮಾಡಲು ಅಗತ್ಯವಿರುವ ಅತ್ಯಾಧುನಿಕ ಮೂಲಸೌಕರ್ಯ ಹಾಗೂ ಸಮಗ್ರ ಕಾರ್ಯಾಚರಣಾ ಸೇವೆಗಳನ್ನು ಒಳಗೊಂಡಿದೆ. ಪೂರ್ವ ಬೆಂಗಳೂರಿನ ಮ್ಯಾನೇಜ್ಡ್ ವರ್ಕ್ ಸ್ಪೇಸ್ ಗಳಲ್ಲೇ ಅತಿ ದೊಡ್ಡದು ಎನ್ನಲಾದ ಬರೋಬ್ಬರಿ 12,500 ಚದರ ಅಡಿಯ ವಿಶಾಲವಾದ ಹಂಚಿಕೆಯ ಪ್ಯಾಂಟ್ರಿ ವಿಭಾಗ ಈ ಕೇಂದ್ರದ ಪ್ರಮುಖ ಆಕರ್ಷಣೆಯಾಗಿದೆ.
ಇದರೊಂದಿಗೆ ಪ್ರತಿ ಮಹಡಿಯಲ್ಲೂ ದೈನಂದಿನ ಬಳಕೆಗಾಗಿ ಮಿನಿ ಪ್ಯಾಂಟ್ರಿಗಳನ್ನು ನಿರ್ಮಿಸಲಾಗಿದೆ. ಕೇವಲ ಕೆಲಸಕ್ಕಷ್ಟೇ ಸೀಮಿತವಾಗದೆ ಉದ್ಯೋಗಿಗಳ ಸಮಗ್ರ ವಿಕಾಸಕ್ಕೆ ಆದ್ಯತೆ ನೀಡಿರುವ ಸ್ಪೇಸ್ ಒನ್, ಇಲ್ಲಿ ಅತ್ಯಾಧುನಿಕ ಲೌಂಜ್, ಆಕ್ಟಿವಿಟಿ ಝೋನ್, ಗೇಮಿಂಗ್ ಏರಿಯಾ, ಸುಸಜ್ಜಿತ ಜಿಮ್ನಾಷಿಯಂ ಹಾಗೂ ತರಬೇತಿ ಕೊಠಡಿಗಳನ್ನು ವಿನ್ಯಾಸಗೊಳಿಸಿದೆ.
ಹೊಸ ಕಚೇರಿ ಸಂಕೀರ್ಣದ ಉದ್ಘಾಟನೆ ಕುರಿತು ಮಾತನಾಡಿದ ಸ್ಪೇಸ್ಒನ್ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಜೇಮ್ಸ್ ಥಾಮಸ್ ಅವರು, “ವೈಟ್ ಫೀಲ್ಡ್ ನ ಮಹದೇವಪುರದಲ್ಲಿ ನಮ್ಮ ಹೊಸ ಕೇಂದ್ರದ ಆರಂಭವು ಸ್ಪೇಸ್ಒನ್ ಸಂಸ್ಥೆಯ ಬೆಳವಣಿಗೆಯ ಪಯಣದಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ. ಈ ಹೊಸ ಕೇಂದ್ರದ ಮೂಲಕ ನಾವು ಆಧುನಿಕ ವಿನ್ಯಾಸ, ತಂತ್ರಜ್ಞಾನ ಆಧಾರಿತ ಮೂಲಸೌಕರ್ಯ ಹಾಗೂ ತಡೆರಹಿತ ಕಾರ್ಯಾಚರಣೆಯನ್ನೊಳಗೊಂಡ ಭವಿಷ್ಯದ ಸವಾಲುಗಳಿಗೆ ಸಜ್ಜಾಗಿರುವ ಕಚೇರಿ ಜಾಗವನ್ನು ಉದ್ಯಮಗಳಿಗೆ ಒದಗಿಸುತ್ತಿದ್ದೇವೆ. ಉದ್ಯೋಗದ ಜಗತ್ತು ಬದಲಾಗುತ್ತಿರುವ ಇಂದಿನ ಯುಗದಲ್ಲಿ, ಸಂಸ್ಥೆಗಳು ಅತ್ಯಂತ ಆತ್ಮವಿಶ್ವಾಸದಿಂದ ಬೆಳೆಯಲು ನೆರವಾಗುವಂತಹ ಉನ್ನತ ಗುಣಮಟ್ಟದ ಮ್ಯಾನೇಜ್ಡ್ ಆಫೀಸ್ ಪರಿಹಾರಗಳನ್ನು ಒದಗಿಸುವತ್ತ ನಾವು ಗಮನ ಹರಿಸಿದ್ದೇವೆ” ಎಂದರು.
ಮಹದೇವಪುರದ ಈ ಕೇಂದ್ರವು ಕರ್ನಾಟಕ ಮಾರುಕಟ್ಟೆಗೆ ಸ್ಪೇಸ್ ಒನ್ ಲಗ್ಗೆ ಇಟ್ಟಿರುವುದರ ಸಂಕೇತವಾಗಿದೆ. ಇದರೊಂದಿಗೆ ದಕ್ಷಿಣ ಭಾರತದ 5 ಪ್ರಮುಖ ನಗರಗಳಲ್ಲಿ ಕಂಪನಿಯ ಒಟ್ಟಾರೆ ಕಚೇರಿಗಳ ಸಂಖ್ಯೆ 17 ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಸಂಸ್ಥೆಯು ಕೊಚ್ಚಿಯಲ್ಲಿ 10, ಕೊಯಮತ್ತೂರಿನಲ್ಲಿ 4 ಹಾಗೂ ಕೋಝಿಕೋಡ್, ತಿರುವನಂತಪುರಂ ಮತ್ತು ಬೆಂಗಳೂರಿನಲ್ಲಿ ತಲಾ 1 ಕೇಂದ್ರಗಳನ್ನು ಹೊಂದಿದೆ.
ಬೆಂಗಳೂರಿನ ಈ ವಿಸ್ತರಣೆಯು ಮುಂಬರುವ 12 ತಿಂಗಳುಗಳಲ್ಲಿ ಸ್ಪೇಸ್ಒನ್ ಸಂಸ್ಥೆಯ ದಕ್ಷಿಣ ಭಾರತದ ಒಟ್ಟಾರೆ ವ್ಯವಹಾರಕ್ಕೆ ಶೇಕಡಾ 10 ರಷ್ಟು ಆದಾಯದ ಬೆಳವಣಿಗೆಯನ್ನು ನೀಡಲಿದ್ದು, ವಾರ್ಷಿಕವಾಗಿ ₹3 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ತರಲಿದೆ ಎಂದು ಕಂಪನಿ ನಿರೀಕ್ಷಿಸಿದೆ.
ಈ ಕುರಿತು ಮಾತನಾಡಿದ ಸ್ಪೇಸ್ಒನ್ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಪ್ರಾಪರ್ಟಿ ಅಕ್ವಿಸಿಷನ್ ನಿರ್ದೇಶಕ ಶ್ರೀ ಸಿಜೋ ಜೋಸ್ ಅವರು, “ಬೆಂಗಳೂರು ಮಾರುಕಟ್ಟೆಯನ್ನು ಪ್ರವೇಶಿಸುವುದು ಸ್ಪೇಸ್ ಒನ್ ಸಂಸ್ಥೆಯ ಮುಂದಿನ ಸಹಜ ಹೆಜ್ಜೆಯಾಗಿತ್ತು. ಪ್ರಮುಖ ಐಟಿ ಪಾರ್ಕ್ ಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಅತ್ಯಂತ ಹತ್ತಿರದಲ್ಲಿರುವುದರಿಂದ ನಮಗೆ ವೈಟ್ ಫೀಲ್ಡ್ ಅತ್ಯುತ್ತಮ ಆಯ್ಕೆಯಾಗಿ ಕಂಡುಬಂದಿತು.
ಗುಣಮಟ್ಟದ ಕಚೇರಿಗಳ ಬೇಡಿಕೆ ಹೆಚ್ಚಿರುವ ಮಾರುಕಟ್ಟೆಗಳನ್ನು ಗುರುತಿಸಿ ಮುನ್ನಡೆಯುವ ನಮ್ಮ ಶಿಸ್ತುಬದ್ಧ ಕಾರ್ಯವಿಧಾನಕ್ಕೆ ದಕ್ಷಿಣ ಭಾರತದ 5 ನಗರಗಳಾದ್ಯಂತ ವಿಸ್ತರಿಸಿರುವ ನಮ್ಮ 17 ಕೇಂದ್ರಗಳೇ ಸಾಕ್ಷಿ. ಬೆಂಗಳೂರಿನಲ್ಲಿ ನಾವು ಬಲವಾದ ದೀರ್ಘಕಾಲದ ಬೆಳವಣಿಗೆಯನ್ನು ಕಾಣುತ್ತಿದ್ದು, ಮುಂಬರುವ ದಿನಗಳಲ್ಲಿ ಇಲ್ಲಿ ಆರಂಭವಾಗಲಿರುವ ಹತ್ತಾರು ಕೇಂದ್ರಗಳಲ್ಲಿ ಇದು ಮೊದಲನೆಯದಾಗಿದೆ” ಎಂದು ಹೇಳಿದರು.
ಭಾರತದ ಫ್ಲೆಕ್ಸಿಬಲ್ ವರ್ಕ್ ಸ್ಪೇಸ್ (ಕಚೇರಿ ಸ್ಥಳಾವಕಾಶ) ವಲಯದಲ್ಲಿ ಬೆಂಗಳೂರು ದೇಶದಲ್ಲೇ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಇಡೀ ದೇಶದ ಒಟ್ಟಾರೆ ಫ್ಲೆಕ್ಸಿಬಲ್ ಆಫೀಸ್ ದಾಸ್ತಾನಿನಲ್ಲಿ ಸರಿಸುಮಾರು ಮೂರನೇ ಒಂದು ಭಾಗದಷ್ಟು ಪಾಲು ಹೊಂದಿರುವ ಬೆಂಗಳೂರು, ದೇಶದ ಇತರೆಲ್ಲಾ ನಗರಗಳಿಗಿಂತ ಅತಿ ದೊಡ್ಡ ಪಾಲನ್ನು ಪಡೆದುಕೊಂಡಿದೆ. ಗ್ಲೋಬಲ್ ಕೆಪಾಬಿಲಿಟಿ ಸೆಂಟರ್ಗಳು, ಬೃಹತ್ ಕಾರ್ಪೊರೇಟ್ ಉದ್ಯಮಗಳು ಹಾಗೂ ತಂತ್ರಜ್ಞಾನ ಸಂಸ್ಥೆಗಳು ತಮ್ಮ ಕಚೇರಿಗಳ ವ್ಯಾಪ್ತಿಯನ್ನು ವಿಸ್ತರಿಸಲು ಇಂದಿಗೂ ಬೆಂಗಳೂರನ್ನೇ ಮೊದಲ ಆದ್ಯತೆಯಾಗಿ ಆರಿಸಿಕೊಳ್ಳುತ್ತಿವೆ.
ಈ ವರ್ಷದ ಒಟ್ಟಾರೆ ಆಫೀಸ್ ಲೀಸಿಂಗ್ (ಕಚೇರಿ ಗುತ್ತಿಗೆ) ಚಟುವಟಿಕೆಯಲ್ಲಿ ಜಿಸಿಸಿಗಳದ್ದೇ ಸಿಂಹಪಾಲಾಗಿದೆ. ವಿಶೇಷವಾಗಿ ಪೂರ್ವ ಬೆಂಗಳೂರಿನ ಕಾರಿಡಾರ್ ಗಳಾದ ಮಹದೇವಪುರ, ಔಟರ್ ರಿಂಗ್ ರೋಡ್ ಮತ್ತು ವೈಟ್ ಫೀಲ್ಡ್ ವಲಯಗಳು ಬಲಿಷ್ಠ ಮೂಲಸೌಕರ್ಯ, ಸುಧಾರಿತ ನಮ್ಮ ಮೆಟ್ರೋ ಸಂಪರ್ಕ ಹಾಗೂ ಪ್ರತಿಭಾವಂತ ಉದ್ಯೋಗಿಗಳ ಸುಲಭ ಲಭ್ಯತೆಯಿಂದಾಗಿ ಅತ್ಯಂತ ಬಲವಾದ ಕೈಗಾರಿಕಾ ಪ್ರಗತಿಯನ್ನು ಕಾಣುತ್ತಿವೆ.
ಸ್ಪೇಸ್ ಒನ್ ಸಂಸ್ಥೆಯ ಪರಿಚಯ
ಸ್ಪೇಸ್ ಒನ್ ಸಂಸ್ಥೆಯು ದಕ್ಷಿಣ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮ್ಯಾನೇಜ್ಡ್ ವರ್ಕ್ ಸ್ಪೇಸ್ ಪ್ರೊವೈಡರ್ ಆಗಿದ್ದು, ಬೃಹತ್ ಉದ್ಯಮಗಳು ಹಾಗೂ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಿಗೆ ಪ್ರೀಮಿಯಂ ಮತ್ತು ತಂತ್ರಜ್ಞಾನ ಆಧಾರಿತ ಕಚೇರಿ ಪರಿಹಾರಗಳನ್ನು ಒದಗಿಸುತ್ತಿದೆ. ಸಂಸ್ಥೆಯ ಫ್ಲೆಕ್ಸಿಬಲ್ ಹಾಗೂ ಸಂಪೂರ್ಣ ಸುಸಜ್ಜಿತ ಕಚೇರಿಗಳು ಆಧುನಿಕ ವಿನ್ಯಾಸ, ಕಾರ್ಯಾಚರಣೆಯ ಉತ್ಕೃಷ್ಟತೆ ಮತ್ತು ಅಪ್ರತಿಮ ಸೇವೆಯನ್ನು ಒಳಗೊಂಡಿದ್ದು, ಕಂಪನಿಗಳು ಅತ್ಯಂತ ಚುರುಕಾಗಿ ಹಾಗೂ ಆತ್ಮವಿಶ್ವಾಸದಿಂದ ತಮ್ಮ ಉದ್ಯಮವನ್ನು ವಿಸ್ತರಿಸಲು ಪೂರಕವಾದ ಭವಿಷ್ಯದ ವಾತಾವರಣವನ್ನು ಸೃಷ್ಟಿಸುತ್ತವೆ.
