ಕೆ.ಆರ್.ಪೇಟೆ:ತಾಲ್ಲೂಕಿನ ಭೂ ಅಭಿವೃದ್ಧಿ ಸಹಕಾರಿ ಬ್ಯಾಂಕ್ (ಪಿ.ಎಲ್.ಡಿ ಬ್ಯಾಂಕ್)ಗೆ ಇತ್ತೀಚೆಗೆ ಅಕ್ಕಿಹೆಬ್ಬಾಳು ರಾಜನಾಯ್ಕ ಅವರು ಅಧ್ಯಕ್ಷರಾಗಿ ಮತ್ತು ಇಂದು ನಡೆದ ಚುನಾವಣೆಯಲ್ಲಿ ಲಕ್ಷ್ಮಿಪುರ ಚಂದ್ರೆಗೌಡ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ.
ಪಟ್ಟಣದ ಜಯನಗರ ಬಡಾವಣೆಯ ಶ್ರೀ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ರಾಜನಾಯ್ಕ ಹಾಗೂ ನೂತನ ಉಪಾಧ್ಯಕ್ಷ ಲಕ್ಷ್ಮಿಪುರ ಚಂದ್ರೆಗೌಡರನ್ನ ಸನ್ಮಾನಿಸಿ ಅಭಿನಂದಿಸಿದರು.
ಅಭಿನಂದಿಸಿ ಮಾತನಾಡಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರು ಸಹಕಾರ ಸಂಸ್ಥೆಗಳು ಕೇವಲ ಸಾಲ ನೀಡುವ ಕೇಂದ್ರಗಳಲ್ಲ ಅವು ರೈತರ ಜೀವನಮಟ್ಟ ಸುಧಾರಿಸುವ ವೇದಿಕೆಗಳು ಕೆ.ಆರ್.ಪೇಟೆ ತಾಲ್ಲೂಕು ಮಟ್ಟದ ಎಲ್ಲಾ ಸಹಕಾರ ಸಂಸ್ಥೆಗಳು ರೈತರ ಸದೃಢತೆ, ಕೃಷಿ ಅಭಿವೃದ್ಧಿ ಮತ್ತು ಗ್ರಾಮೀಣ ಆರ್ಥಿಕತೆಗೆ ಕಾರಣಕರ್ತರಾಗಬೇಕು ಎಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸಲಹೆ ನೀಡಿ.ಪಿ.ಎಲ್.ಡಿ ಬ್ಯಾಂಕ್ ಮೂಲಕ ರೈತರಿಗೆ ಸಮಯಕ್ಕೆ ಸರಿಯಾಗಿ ಬೆಳೆ ಸಾಲ, ದೀರ್ಘಾವಧಿ ಸಾಲ, ಕಡಿಮೆ ಬಡ್ಡಿ ದರದಲ್ಲಿ ಸೌಲಭ್ಯಗಳನ್ನು ಒದಗಿಸಬೇಕು.ಇದರಿಂದ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಜನಾಯ್ಕ ಮತ್ತು ನೂತನ ಉಪಾಧ್ಯಕ್ಷ ಲಕ್ಷ್ಮಿಪುರ ಚಂದ್ರೆಗೌಡ ಅವರು ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರಂತಹ ಸಮಾಜ ಸೇವಕರ ಮಾರ್ಗದರ್ಶನ ಮತ್ತು ಸಹಕಾರ ಅತ್ಯಗತ್ಯ.ರೈತರ ಹಿತವೇ ನಮ್ಮ ಆದ್ಯತೆ ಪಾರದರ್ಶಕ ಆಡಳಿತದೊಂದಿಗೆ ಬ್ಯಾಂಕ್ ಅನ್ನು ಇನ್ನಷ್ಟು ಸದೃಢಗೊಳಿಸಿ, ರೈತರ ಸೇವೆಗೆ ಬದ್ಧರಾಗಿರುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರಾದ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ, ಅಣ್ಣೇಚಾಕನಹಳ್ಳಿ ನಾಗರಾಜೇಗೌಡ, ಮಾಳಗೂರು ಜಗದೀಶ್,ಮಂಜುಳಾ ಕೃಷ್ಣೇಗೌಡ, ಮುಖಂಡರಾದ ಹೊನ್ನೇನಹಳ್ಳಿ ಕೃಷ್ಣೇಗೌಡ,ಚಂದ್ರೇಗೌಡ, ಅಕ್ಕಿಹೆಬ್ಬಾಳು ಮಹೇಶ್ ನಾಯ್ಕ,ಯುವ ಮುಖಂಡರಾದ ಕಿರಣ್, ಅರುಣ್, ನಿಂಗರಾಜು, ಅಪ್ಪು,ರಾಘವೇಂದ್ರ,ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
