ಟಿ.ನರಸೀಪುರ: ಮುಖ್ಯಮಂತ್ರಿಗಳೇ ನಿಮ್ಮ ಕುಮ್ಮಕ್ಕು ಮತ್ತು ಕೃಪಾಕಟಾಕ್ಷದಿಂದಲೇ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ನಿಮ್ಮ ಬೆಂಬಲಿಗರಿಂದಲೇ ಭ್ರಷ್ಟಾಚಾರ ನಡೆದಿದೆ…ನೀವು ಅಧ್ಯಕ್ಷರನ್ನಾಗಿ ಮಾಡಿದ ವ್ಯಕ್ತಿಯಿಂದಲೇ ಹಗರಣ ನಡೆದಿದೆ ಆದ ಕಾರಣ ಕೂಡಲೇ
ಟಿ.ನರಸೀಪುರ ಪುರಸಭೆಯನ್ನು ಸೂಪರ್ ಸೀಡ್ ಮಾಡಿ, ಆಡಳಿತಾಧಿಕಾರಿಯನ್ನು ನೇಮಿಸುವಂತೆ ಜಿಲ್ಲಾ ಮಾಧ್ಯಮ ವಕ್ತಾರ ದಯಾನಂದ ಪಟೇಲ್ ಆಗ್ರಹಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತಾಲ್ಲೂಕು ಬಿಜೆಪಿ ಘಟಕ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಟಿ.ಎನ್.ನಂಜುಂಡಸ್ವಾಮಿ ಪುರಸಭೆಗೆ ಸ್ವಯಂಘೋಷಿತ ಆಸ್ತಿ ತೆರಿಗೆ ಅಡಿ ಪ್ರತಿವರ್ಷ ಪಾವತಿಸಬೇಕಿರುವ ಆಸ್ತಿ ತೆರಿಗೆಯನ್ನು ಕೆನರಾ ಬ್ಯಾಂಕಿನ ನಕಲಿ ಚನಲ್ ಹಾಗೂ ಮುದ್ರೆ ಬಳಸಿ ಲಕ್ಷಾಂತರ ರೂಗಳನ್ನು ವಂಚಿಸಿದ್ದು ಈತನ ಮೇಲೆ ವಿಶೇಷವಾದ ತನಿಖಾ ತಂಡವನ್ನು ನಿಯೋಜಿಸಿ ಕಳೆದ ಎಂಟು ವರ್ಷಗಳಿಂದ ಹಳೆಯ ಕಡತವನ್ನು ಪರಿಶೀಲಿಸಿ ಸಿಒಡಿ ತನಿಖೆ ಕೈಗೊಂಡು ಕ್ರಮ ಕೈಗೊಳ್ಳಬೇಕೆಂದರು.

ಖ್ಯಾತ ವೈದ್ಯ ಡಾ.ರೇವಣ್ಣ ಮಾತನಾಡಿ ಸರ್ಕಾರಕ್ಕೆ ತೆರಿಗೆ ಹಣ ವಂಚಿಸಿರುವ ಪುರಸಭೆ ಸದಸ್ಯರಾದ ಟಿ.ಎನ್.ನಂಜುಂಡಸ್ವಾಮಿ ಯವರ ನಡೆಯನ್ನು ನಮ್ಮ ಪಕ್ಷ ತೀರ್ವವಾಗಿ ಖಂಡಿಸುತ್ತದೆ.ನಮಗೆ ಜನರು ಅಧಿಕಾರ ನೀಡಿರುವುದು ಜನರಿಗೆ ಒಳಿತನ್ನು ಮಾಡಲು ಅದು ಬಿಟ್ಚು ಜನರ ತೆರಿಗೆ ಹಣವನ್ನೇ ಲಪಟಾಯಿಸುವುದು ಅವರಿಗೆ ದ್ರೋಹ ಬಗೆದಂತೆ ಹಾಗಾಗಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಪುರಸಭೆ ಸದಸ್ಯ ಕಿರಣ್ ಮಾತನಾಡಿ, ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಟಿ.ಎನ್.ನಂಜುಂಡಸ್ವಾಮಿ ಸರ್ಕಾರಕ್ಕೆ ಜನರ ತೆರಿಗೆ ಹಣ ವಂಚಿಸಿರುವ ಹಿನ್ನೆಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಆತ ಮಾಡಿಸಿರುವ ಖಾತೆಗಳ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಿ.ರಮೇಶ್,ಮಂಡಲ ಅಧ್ಯಕ್ಷರಾದ ಸತ್ಯರಾಜ್,ಮಾಜಿ ಅಧ್ಯಕ್ಷ ಲೋಕೇಶ್ ನಾಯಕ್,ಚೌಹಳ್ಳಿ ಸಿದ್ದರಾಜು, ನಂಜುಂಡಸ್ವಾಮಿ, ಲೋಕೇಶ್,ರಾಜಶೇಖರ್ ಇದ್ದರು.
- ಎಂ.ನಾಗೇಂದ್ರ ಕುಮಾರ್

[…] ಟಿ.ನರಸೀಪುರ: ಭ್ರಷ್ಟಾಚಾರದ ಆರೋಪ – ಪುರಸಭೆ … […]