ವೈಕುಂಠ ಏಕಾದಶಿಗೆ ಹಿಂದೂ ಧರ್ಮದಲ್ಲಿ ಮಹತ್ತರ ಸ್ಥಾನವನ್ನು ನೀಡಲಾಗಿದೆ. ವೈಕುಂಠ ಏಕಾದಶಿ ವ್ರತವನ್ನು ಆಚರಿಸುವುದರಿಂದ ಭಕ್ತರ ಇಷ್ಟಾರ್ಥಗಳೆಲ್ಲಾ ಈಡೇರುವುದು. 2025ರ ವೈಕುಂಠ ಏಕಾದಶಿ ವ್ರತವನ್ನು ಡಿಸೆಂಬರ್ 30, ಮಂಗಳವಾರ ಆಚರಿಸಲಾಗುವುದು. 2025ರ ವೈಕುಂಠ ಏಕಾದಶಿ ವ್ರತದ ಪೂಜೆಗೆ ಶುಭ ಮುಹೂರ್ತ ಯಾವುದು.?
ವೈಕುಂಠ ಏಕಾದಶಿ ಪೂಜೆ ಮಾಡುವ ವಿಧಾನ, ಮಹತ್ವ ಮತ್ತು ಪಾರಣ ಪೂಜೆ ಇಲ್ಲಿದೆ.
ವರ್ಷದ ಕೊನೆಯ ಏಕಾದಶಿ ವ್ರತವಾಗಿ ನಾವು ವೈಕುಂಠ ಏಕಾದಶಿ ವ್ರತವನ್ನು ಅಥವಾ ಪುಷ್ಯ ಪುತ್ರದಾ ಏಕಾದಶಿ ವ್ರತವನ್ನು ಆಚರಿಸುತ್ತಿದ್ದೇವೆ. ಏಕಾದಶಿ ವ್ರತದ ದಿನದಂದು ವಿಷ್ಣು ದೇವನನ್ನು ಮತ್ತು ಆತನ ವಿವಿಧ ಅವತಾರಗಳನ್ನು ಪೂಜಿಸುವ ಸಂಪ್ರದಾಯವಿದೆ. ಸನಾತನ ಸಂಪ್ರದಾಯದಲ್ಲಿ ವಿಷ್ಣುವನ್ನು ವಿಶ್ವದ ರಕ್ಷಕ ಎಂದು ಪರಿಗಣಿಸಲಾಗುತ್ತದೆ. ಏಕಾದಶಿ ವ್ರತದ ದಿನದಂದು ವಿಷ್ಣುವನ್ನು ಪೂಜಿಸುವುದರಿಂದ ಜೀವನದ ಎಲ್ಲಾ ದುಃಖಗಳು ಮತ್ತು ಕಷ್ಟಗಳು ದೂರವಾಗುತ್ತವೆ ಮತ್ತು ಆಸೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ವಿಷ್ಣುವನ್ನು ಮೆಚ್ಚಿಸಲು ಮತ್ತು ಅವರಿಂದ ಬಯಸಿದ ವರಗಳನ್ನು ಪಡೆಯಲು ಏಕಾದಶಿ ಉಪವಾಸವನ್ನು ಆಚರಿಸುವುದು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. 2025ರ ಕೊನೆಯ ಏಕಾದಶಿ ವ್ರತವಾದ ವೈಕುಂಠ ಏಕಾದಶಿ ವ್ರತವನ್ನು ಡಿಸೆಂಬರ್ 30ರಂದು ಮಂಗಳವಾರದ ದಿನ ಆಚರಿಸಲಾಗುವುದು. ವೈಕುಂಠ ಏಕಾದಶಿಯನ್ನು ಆಚರಿಸುವುದರಿಂದ ಭಕ್ತನು ಜೀವನದ ದುಃಖಗಳಿಂದ ಮುಕ್ತನಾಗುತ್ತಾನೆ. ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ವಿಷ್ಣುವಿನ ವೈಕುಂಠ ಲೋಕದ ದ್ವಾರವು ತೆರೆದಿರುತ್ತದೆ ಎಂಬುದು ನಂಬಿಕೆಯಾಗಿದೆ. ವೈಕುಂಠ ಏಕಾದಶಿ ವ್ರತವನ್ನು ಆಚರಿಸುವುದರಿಂದ ವ್ಯಕ್ತಿಯು ಸಂತಾನ ಭಾಗ್ಯದ ವರವನ್ನು ಪಡೆದುಕೊಳ್ಳುತ್ತಾನೆ. ಸಂತಾನವನ್ನು ಪಡೆದುಕೊಳ್ಳಲು ಬಯಸುವ ವಿವಾಹಿತ ದಂಪತಿಗಳು ಈ ವ್ರತವನ್ನು ಆಚರಿಸುವುದು ತುಂಬಾನೇ ಒಳ್ಳೆಯದು.
ಈ ಏಕಾದಶಿ ವ್ರತದ ದಿನದಂದು ಉಪವಾಸವನ್ನು ಪಾಲಿಸುವುದರಿಂದ ಸಂತೋಷ, ಶಾಂತಿ ಮತ್ತು ಅದೃಷ್ಟವು ನಮ್ಮ ಪರವಾಗಿರುತ್ತದೆ. ಇದು ನಿಮಗೆ ವಿಷ್ಣು ದೇವನ ಆಶೀರ್ವಾದವನ್ನು ಕೂಡ ತಂದು ಕೊಡುತ್ತದೆ
