ತುಮಕೂರು:ಯಾರೂ ಮಾಡದಿದ್ದ ಕೆಲಸ ಕಾರ್ಯಗಳನ್ನು ಇಡೀ ರಾಜ್ಯದಲ್ಲಿ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಡಾ||ಡಿ.ವೀರೇಂದ್ರಹೆಗ್ಗಡೆರವರು ಮಾಡುತ್ತಿದ್ದಾರೆ,ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಿ ತಾವೇ ಸಾವಿರಾರು ಕೋಟಿ ರೂಗಳಿಗೆ ಖಾತರಿಗೆ ಸಹಿ ಹಾಕಿ ಬ್ಯಾಂಕ್ ಗಳಿಂದ ಮಹಿಳೆಯರಿಗೆ ಸಾಲವನ್ನು ನೀಡುವುದು ಶ್ಲಾಘನೀಯ,ಹಳ್ಳಿಗೊಂದು ಕೆರೆ ಎಂಬ ಕಾರ್ಯಕ್ರಮದ ಮೂಲಕ ಕೆರೆಯ ಊಳು ತೆಗೆದು ಅದನ್ನು ರೈತರಿಗೆ ನೀಡಿ ಕೆರೆ ಅಭಿವೃದ್ಧಿಪಡಿಸಿ ರೈತರಿಗೆ ವರದಾನವಾಗಿದ್ದಾರೆ,ಯೋಜನೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿರುವ ಪೂಜ್ಯ ವೀರೇಂದ್ರಹೆಗ್ಗಡೆರವರಿಗೆ ಧನ್ಯವಾದಗಳು ಎಂದು ಶ್ರೀಮುರಳೀಧರಹಾಲಪ್ಪನವರು ತಿಳಿಸಿದರು.
ಅವರು ಇಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ),ಸಹಸ್ರನಾಮ ಬಿಲ್ವಾರ್ಚನೆಪೂಜಾ ಸಮಿತಿ,ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗೂಳೂರು ವಲಯದಿಂದ ಗೂಳರಿವೆಯ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಹಸ್ರನಾಮ ಬಿಲ್ವಾರ್ಚನೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಕಾರದಮಠದ ಶ್ರೀ ಕಾರದ ವೀರಬಸವ ಮಹಾಸ್ವಾಮೀಜಿಗಳು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ಮಹಿಳೆಯರಿಗೆ ಇದೆ. ತಾಯಿ ಮನೆಯ ಮೊದಲ ಗುರು ಆಗಿದ್ದು ತಮ್ಮ ಮಕ್ಕಳಿಗೆ ಧಾರ್ಮಿಕ ಆಚಾರ ವಿಚಾರಗಳ ಬಗ್ಗೆ ತಿಳಿಸಿ ಅವರನ್ನು ಸುಸಂಸ್ಕೃತರನ್ನಾಗಿ ಬೆಳೆಸಬೇಕು ಎಂದು ತಿಳಿಸಿದರು ಹಾಗೂ ಯೋಜನೆಯ ಕಾರ್ಯಕ್ರಮಗಳಾದ ವಾತ್ಸಲ್ಯ ಕಾರ್ಯಕ್ರಮ, ಕೆರೆಕಟ್ಟೆಗಳ ಪುನಶ್ಚೇತನದ ಬಗ್ಗೆ ತಿಳಿಸುತ್ತಾ, ಧರ್ಮಸ್ಥಳ ಸಂಸ್ಥೆ ಕೇವಲ ಮಹಿಳೆಯರಿಗೆ ಬ್ಯಾಂಕ್ ಮುಖೇನಾ ಸಾಲವನ್ನು ಮಾತ್ರ ಕೊಡಿಸುತ್ತಿಲ್ಲ ಅದರ ಜೊತೆಗೆ ಜನರಲ್ಲಿ ಈ ರೀತಿಯ ಸಾಮೂಹಿಕ ಸಹಸ್ರನಾಮ ಬಿಲ್ವಾರ್ಚನೆ ಕಾರ್ಯಕ್ರಮಗಳನ್ನು ನಡೆಸುತ್ತಾ,ಆಚಾರ ವಿಚಾರಗಳ ಮೂಲಕ ಬೆಳಕು ಚೆಲ್ಲುತ್ತಿದೆ, ಎಲ್ಲರಲ್ಲೂ ಧಾರ್ಮಿಕ ಚಿಂತನೆಗಳನ್ನು ಬೆಳೆಸುವಂತಹ ಮಹತ್ತರ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು.
ತುಮಕೂರು-1 ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಾ ರಾಜ್ಯದಲ್ಲಿ 6,53,000 ಸಂಘಗಳಿದ್ದು ರಾಷ್ಟ್ರೀಕೃತ ಬ್ಯಾಂಕುಗಳ ಮುಖೇನ ಅತಿ ಕಡಿಮೆ ಬಡ್ಡಿ ದರದಲ್ಲಿ ಸಂಘಗಳಿಗೆ ಹಣಕಾಸಿನ ಸೌಲಭ್ಯ ನೀಡಲಾಗುತ್ತಿದೆ. ರಾಜ್ಯದಲ್ಲಿ ಒಂದು ಸಾವಿರ ಕರೆಗಳನ್ನು ಪುನಶ್ಚೇತನ ಅದರಲ್ಲೂ ತುಮಕೂರು-1 ಜಿಲ್ಲೆಯಲ್ಲಿ ನೂರು ಕೆರೆಗಳ ಪುನಶ್ಚೇತನ ಆಗಿದೆ ಎಂದು ತಿಳಿಸಿದರು, ಸರ್ಕಾರದ ಸೌಲಭ್ಯಗಳಿಂದ ವಂಚಿತರಾದ ನಿರ್ಗತಿಕರಿಗೆ ಮಾಶಾಸನ ನೀಡುವ ಬಗ್ಗೆ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ನೀಡುವುದರ ಬಗ್ಗೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಾದ ಜನಮಂಗಳ ಕಾರ್ಯಕ್ರಮ, ಜನಜಾಗೃತಿ ಕಾರ್ಯಕ್ರಮ, ಮಕ್ಕಳಿಗೆ ದುಶ್ಚಟಗಳ ಬಗ್ಗೆ ಅರಿವು ಮೂಡಿಸಲು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಪ್ರಭಾಕರ್, ಶ್ರೀಮತಿ ಮಂಜುಳಾ, ಬಸವರಾಜು,ವಲಯದ ಮೇಲ್ವಿಚಾರಕರಾದ ಶ್ರೀಮತಿ ನಾಗಮಣಿ.ಎನ್.ವಿ, ಮೇಲ್ವಿಚಾರಕರಾದ ಶ್ರೀಯುತ ಲೋಕೇಶ್, ತುಮಕೂರು ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ರೇಖಾ, ಸುದೀಪ್, ತೋಪೆಗೌಡರು ಶ್ರೀಮತಿ ಸುಕನ್ಯ ಮತ್ತು ಸೇವಾ ಪ್ರತಿನಿಧಿಗಳು ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ಶಿರಿನ್ ಲಿಂಕನ್, ಶ್ರೀಮತಿ ಪಲ್ಲವಿ, ಶ್ರೀಮತಿ ಕರಿಯಮ್ಮ, ಶ್ರೀಮತಿ ಸೀಮಾ, ಕುಮಾರಿವೇದ , ಗ್ರಾಮದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
